ಪಾಕಿಸ್ತಾನ ಪ್ರವಾಸಕ್ಕೆ 18 ಆಟಗಾರರ ಬಲಿಷ್ಠ ಟೆಸ್ಟ್ ತಂಡವನ್ನು ಪ್ರಕಟಿಸಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಎರಡು ದಶಕಗಳಿಗೂ ಹೆಚ್ಚು ಕಾಲದ ನಂತರ ಇದೀಗ ಪಾಕಿಸ್ತಾನ ಪ್ರವಾಸ ಕೈಗೊಂಡು ಮೂರು ಮಾದರಿಯಲ್ಲಿಯೂ ಸರಣಿಯನ್ನಾಡಲು ಸಜ್ಜಾಗುತ್ತಿದೆ. ಮುಂದಿನ ತಿಂಗಳು ಈ ಪ್ರವಾಸ ಆರಂಭವಾಗಿದ್ದು ಈ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿರುವ ಆಸ್ಟ್ರೇಲಿಯಾ ತಂಡದ 18 ಆಟಗಾರರ ತಂಡವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದೆ. ಈ ಸರಣಿಯಲ್ಲಿ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು 3 ಟೆಸ್ಟ್ಮ, 3 ಏಕದಿನ ಹಾಗೂ ಒಂದು ಟಿ20 ಪಂದ್ಯ ಆಯೋಜನೆಯಾಗಲಿದೆ. ಸದ್ಯ ಟೆಸ್ಟ್ ತಂಡವನ್ನು ಮಾತ್ರವೇ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ.
ಕಳೆದ ಟಿ20 ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಪಾಕಿಸ್ತಾನ ನೆಲದಲ್ಲಿ ನಡೆಯಬೇಕಿದ್ದ ಸರಣಿಯನ್ನು ಕೊನೇಯ ಕ್ಷಣದಲ್ಲಿ ರದ್ದುಗೊಳಿಸಿತ್ತು. ಇದು ಪಾಖಿಸ್ತಾನ ಕ್ರಿಕೆಟ್ ಮಂಡಳಿಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಆಸ್ಟ್ರೇಲಿಯಾ ಪ್ರವಾಸದ ಬಗ್ಗೆಯೂ ಪಾಕಿಸ್ತಾನಕ್ಕೆ ಈ ಆತಂಕ ಇದ್ದೇ ಇತ್ತು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದನ್ನು ಖಚಿತಪಡಿಸಿತ್ತು. ಮಾತ್ರವಲ್ಲದೆ ಇದೀಗ ಟೆಸ್ಟ್ ಸರಣಿಗೆ ತಂಡವನ್ನು ಕೂಡ ಪ್ರಕಟಿಸಿದೆ. ಇನ್ನು ಆಸ್ಟ್ರೇಲಿಯಾ ತಂಡದ ಕೆಲ ಪ್ರಮುಕ ಆಟಗಾರರು ಸರಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ಕೂಡ ಹೇಳಲಾಗಿತ್ತು. ಆದರೆ 18 ಆಟಗಾರರ ಬಲಿಷ್ಠ ತಂಡವನ್ನು ಸಿಎ ಪ್ರಕಟಿಸಿದ್ದು ಆ ಗೊಂದಲಕ್ಕೂ ತೆಗೆ ಬಿದ್ದಂತಾಗಿದೆ.
ಇನ್ನು ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದ ಜೋಶ್ ಹೇಜಲ್‌ವುಡ್ ಪಾಕಿಸ್ತಾನ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ಮಿಚೆಲ್ ಸ್ವೆಪ್ಸನ್ ಹಾಗೂ ಜೋಶ್ ಇಂಗ್ಲಿಸ್ ಕೂಡ ಈ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕುತೂಹಲಕಾರಿ ಅಂಶವೆಂದರೆ ಆಸ್ಟ್ರೇಲಿಯಾದ ಯಾವ ಆಟಗಾರ ಕೂಡ ಭದ್ರತೆಯ ಕಾರಣವನ್ನು ನೀಡಿ ಸರಣಿಯಿಂದ ಹೊರಗುಳಿದಿಲ್ಲ.
ಆದರೆ ಆಸ್ಟ್ರೇಲಿಯನ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಟಾಡ್ ಗ್ರೀನ್‌ಬರ್ಗ್ ಅವರು ಪಾಕಿಸ್ತಾನ ಪ್ರವಾಸದ ಬಗ್ಗೆ ಮಾತನಾಡಿದ್ದು ಈ ಪ್ರವಾಸದ ವಿಚಾರವಾಗಿ ಸ್ವಲ್ಪ ಆತಂಕವಿದೆ ಎಂದು ಹೇಳಿದ್ದಾರೆ. ಆದರೆ ಕಾಂಗರೂ ಪಡೆ ಸುಮಾರು ಕಾಲು ಶತಮಾನದ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡುವುದರಿಂದ ಈ ಆತಂಕ ಸಹಜ ಎಂದು ಅಭಿಪ್ರಾಯಪಟ್ಟಿದ್ದಾರೆ. "25 ವರ್ಷಗಳಿಂದ ಆಸ್ಟ್ರೇಲಿಯಾ ಪಾಕಿಸ್ತಾನಕ್ಕೆ ಪ್ರವಾಸ ಕೂಗೊಳ್ಳದೇ ಇರುವುದರಿಂದಾಗಿ ಈ ಪ್ರವಾಸದ ಮೇಲೆ ಸ್ವಲ್ಪ ಆತಂಕ ಇರುವುದು ಸ್ಪಷ್ಟ" ಎಂದಿದ್ದಾರೆ ಗ್ರೀನ್ ಬರ್ಗ್.
ಈ ಎರಡು ತಮಡಗಳ ನಡುವಿನ ಟೆಸ್ಟ್ ಸರಣಿ ಮಾರ್ಚ್ 4ರಿಂದ ಆರಂಬವಾಗಲಿದೆ. ಮೊದಲ ಪಂದ್ಯ ರಾವಲ್ಪಿಂಡಿಯಲ್ಲಿ ಆಯೋಜನೆಯಾಗಲಿದೆ. ಕರಾಚಿ ಹಾಗೂ ಲಾಹೋರ್ ಉಳಿದ ಎರಡು ಪಂದ್ಯಗಳಿಗೆ ಆತಿಥ್ಯ ವಹಿಸಿಕೊಳ್ಳಲಿದೆ. ಅದಾದ ಬಳಿಕ ಏಕದಿನ ಸರಣಿ ಮತ್ತು ಒಂದು ಟಿ20 ಪಂದ್ಯ ಆಯೋಜನೆಯಾಗಲಿದೆ. ವೈಟ್ ಬಾಲ್ ಪಂದ್ಯಗಳು ರಾವಲ್ಪಿಂಡಿಯಲ್ಲಿ ನಡೆಯಲಿದೆ.
ಟೆಸ್ಟ್ ಸರಣಿಗೆ ಆಯ್ಕೆಯಾದ ಆಸಿಸ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್ (ಉಪ ನಾಯಕ) ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್‌ಚಾಗ್ನೆ, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಮೈಕೆಲ್ ನೆಸರ್ ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications