ಪಾಕಿಸ್ತಾನಕ್ಕೆ ಆಸ್ಟ್ರೇಲಿಯಾದಿಂದ ಸಂತಸದ ಸುದ್ದಿ: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಸಿಎ

ಈ ವರ್ಷದ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಆಸ್ಟ್ರೇಲಿಯಾದ ಪಾಕ್ ಪ್ರವಾಸದ ಬಗ್ಗೆ ಸಾಕಷ್ಟು ಗೊಂದಲಗಳು ಇದ್ದವು. ಆಸ್ಟ್ರೇಲಿಯಾದ ಕೆಲ ಆಟಗಾರರ ಹೇಳಿಕೆಯಿಂದ ಈ ಒ್ರವಾಸದ ಮೇಲೆಯೇ ಅನುಮಾನಗಳು ಮೂಡಿದ್ದವು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಖುಷಿಯ ವಿಚಾರವನ್ನು ಹಂಚಿಕೊಂಡಿದೆ. ಆಸ್ಟ್ರೇಲಿಯಾ ಪೂರ್ಣ ಪ್ರಮಾಣದ ಪಾಕಿಸ್ತಾನ ಪ್ರವಾಸಕ್ಕೆ ಸಿದ್ಧವಾಗಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಒಂದು ಟಿ20 ಪಂದ್ಯದಲ್ಲಿ ತಂಡ ಆಡಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕೃತವಾಗಿ ಘೋಷಿಸಿದೆ.
ಆಸ್ಟ್ರೇಲಿಯಾದ ಈ ಪ್ರವಾಸ ಮಾರ್ಚ್ 4ರಿಂದ ಆರಂಭವಾಗಲಿದ್ದು ಮೊದಲ ಟೆಸ್ಟ್ ಪಂದ್ಯಕ್ಕೆ ರಾವಲ್ಪಿಂಡಿ ಆತಿಥ್ಯ ವಹಿಸಲಿದೆ. ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 12ರಿಂದ ಕರಾಚಿಯಲ್ಲಿ ಆರಂಭವಾಗಲಿದೆ. ಲಾಹೋರ್‌ನಲ್ಲಿರುವ ಗಡ್ಡಾಫಿ ಸ್ಟೇಡಿಯಂ ಅಂತಿಮ ಟೆಸ್ಟ್ ಪಂದ್ಯದ ತಾಣವಾಗಿದೆ.
ಇನ್ನು ಈ ಸರಣಿಯ ವೈಟ್‌ಬಾಲ್ ಮಾದರಿಯ ಪಂದ್ಯಗಳು ಒಂದೇ ತಾಣದಲ್ಲಿ ಆಯೋಜನೆಯಾಗಲಿದೆ. ಮೂರು ಏಕದಿನ ಹಾಗೂ ಒಂದು ಟಿ20 ಪಂದ್ಯ ರಾವಲ್ಪಿಂಡಿಯಲ್ಲಿ ನಡೆಯಲಿದೆ. ಏಕದಿನ ಸರಣಿಯ ಪಂದ್ಯಗಳು ಕ್ರಮವಾಗಿ ಮಾರ್ಚ್ 29, ಮಾರ್ಚ್ 31 ಹಾಗೂ ಏಪ್ರಿಲ್ 2ರಂದು ನಡೆಯಲಿದೆ. ಏಪ್ರಿಲ್ 5ರಂದು ಇದೇ ತಾಣದಲ್ಲಿ ಏಕೈಕ ಟಿ20 ಪಂದ್ಯ ನಡೆಯಲಿದೆ.
ಈ ಪ್ರವಾಸವನ್ನು ಕೈಗೊಳ್ಳುವ ಮೂಲಕ ಆಸ್ಟ್ರೇಲಿಯಾ ಬರೊಬ್ಬರಿ 24 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ. ಈ ಬಗ್ಗೆ ಮಾತನಾಡಿದ ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ನಿಕ್ ಹಾಕ್ಲೆ "24 ವರ್ಷಗಳ ಬಳಿಕ ಈ ಸರಣಿ ನಡೆಸಲು ಸಾಧ್ಯವಾಗುವಂತೆ ಮಾಡಿದ ಪಾಕಿಸ್ತಾನ ಸರ್ಕಾರ ಹಾಗೂ ಅಸ್ಟ್ರೇಲಿಯಾ ಸರ್ಕಾರಕ್ಕೆ ಧನ್ಯವಾದಗಳು" ಎಂದಿದ್ದಾರೆ. "ಇದು ಐತಿಹಾಸಿಕ ಸಂದರ್ಭವಾಗಿದೆ ಮತ್ತು ಆಟದ ಜಾಗತಿಕ ಬೆಳವಣಿಗೆ ಮತ್ತು ಆರೋಗ್ಯಕ್ಕೆ ಮುಖ್ಯವಾಗಿದೆ. ಆಸ್ಟ್ರೇಲಿಯನ್ ಕ್ರಿಕೆಟಿಗರ ಅಸೋಸಿಯೇಷನ್ ಮತ್ತು ಆಟಗಾರರು, ತರಬೇತುದಾರರು, ಬೆಂಬಲ ಸಿಬ್ಬಂದಿ ಮತ್ತು ಭದ್ರತಾ ತಜ್ಞರಿಗೆ ಪ್ರವಾಸದ ಯೋಜನೆಯಲ್ಲಿ ಅವರ ಸಹಯೋಗಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದಿದ್ದಾರೆ ನಿಕ್ ಹಾಕ್ಲೆ.
ಪರಿಷ್ಕೃತ ಪಾಕಿಸ್ತಾನ vs ಆಸ್ಟ್ರೇಲಿಯಾ ಸರಣಿ
ಟೆಸ್ಟ್ ಸರಣಿಯ ವೇಳಾಪಟ್ಟಿ
ಮಾರ್ಚ್ 4-8: 1ನೇ ಟೆಸ್ಟ್, ರಾವಲ್ಪಿಂಡಿ
ಮಾರ್ಚ್ 12-16: 2ನೇ ಟೆಸ್ಟ್, ಕರಾಚಿ
ಮಾರ್ಚ್ 21-25: 3ನೇ ಟೆಸ್ಟ್, ಲಾಹೋರ್
ಏಕದಿನ ಸರಣಿಯ ವೇಳಾಪಟ್ಟಿ
ಮಾರ್ಚ್ 29: 1 ನೇ ಏಕದಿನ, ರಾವಲ್ಪಿಂಡಿ
ಮಾರ್ಚ್ 31: 2ನೇ ODI, ರಾವಲ್ಪಿಂಡಿ
ಏಪ್ರಿಲ್ 2: 3ನೇ ODI, ರಾವಲ್ಪಿಂಡಿ
ಟಿ20 ಪಂದ್ಯ
ಏಪ್ರಿಲ್ 5: ಟಿ20 ಪಂದ್ಯ, ರಾವಲ್ಪಿಂಡಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications