For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ vs ಪಾಕಿಸ್ತಾನ, 2ನೇ ಟೆಸ್ಟ್, 3ನೇ ದಿನ, ಮೊದಲ ಇನ್ನಿಂಗ್ಸ್‌ನಲ್ಲಿ ಆಸಿಸ್ ಬೃಹತ್ ಮೊತ್ತ: Live ಸ್ಕೋರ್

Australia va Pakistan, 2nd test, Day 3, Live score, Playing XI details, Karachi

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಕರಾಚಿಯಲ್ಲಿ ನಡೆಯುತ್ತಿದ್ದು ಪ್ರವಾಸಿ ಆಸ್ಟ್ರೇಲಿಯಾ ಪಾಕಿಸ್ತಾನದ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನಿಡಿದ್ದು ಬೃಹತ್ ಮೊತ್ತ ಪೇರಿಸಿದೆ. ಆರಂಭೀಕ ಆಟಗಾರ ಉಸ್ಮಾನ್ ಖವಾಜ ಭರ್ಜರಿ ಶತಕ, ಸ್ಟೀವ್ ಸ್ಮಿತ್ ಹಾಗೂ ಅಲೆಕ್ಸ್ ಕ್ಯಾರಿ ಅವರ ಅರ್ಧ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಮಡು 556 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಮೂರನೇ ದಿನ ಪಾಕಿಸ್ತಾನ ತನ್ನ ಇನ್ನಿಂಗ್ಸ್ ಆರಂಭಿಸಿದೆ.

ಮೊದಲ ದಿನ ಹಾಗೂ ಎರಡನೇ ದಿನ ಪಾಕಿಸ್ತಾನದ ಬೌಲರ್‌ಗಳನ್ನು ಆಸ್ಟ್ರೇಲಿಯಾ ದಾಂಡಿಗರು ಸಂಪೂರ್ಣವಾಗಿ ಬೆವರಿಳಿಸುವಲ್ಲಿ ಯಶಸ್ವಿಯಾದರು. ಮೊದಲ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ಬಂದರೆ ಮಾರ್ನಾಸ್ ಲ್ಯಾಬುಶೈನ್ ರನೌಟ್ ಆಗುವ ಮೂಲಕ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿದ್ದು ಆಸಿಸ್ ಪಡೆಗೆ ಸಣ್ಣ ಆಘಾತ ಮೂಡಿಸಿತು. ಆದರೆ ನಂತರ ಉಸ್ಮಾನ್ ಖವಾಜಾ ಅವರನ್ನು ಸೇರಿಕೊಂಡ ಸ್ಟೀವನ್ ಸ್ಮಿತ್ 159 ರನ್‌ಗಳ ಭರ್ಜರಿ ಜೊತೆಯಾಟದಲ್ಲಿ ಭಾಗಿಯಾದರು. ಆದರೆ ದಿನದಾಟದ ಅಂತಿಮ ಹಂತದಲ್ಲಿ ಸ್ಮಿತ್ 72 ರನ್‌ಹಳಿಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ನಿರಾಸೆ ಅನುಭವಿಸಿದರು.

Live ಸ್ಕೋರ್ ಹೀಗಿದೆ:

1
52519

ಈ ಮಧ್ಯೆ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅದ್ಭುತ ಫಾರ್ಮ್ ಮುಂದುವರಿಸಿದ್ದು ಭರ್ಜರಿ ಶತಕ ದಾಖಲಿಸುವಲ್ಲಿ ಯಶಸ್ವಿಯಾದರು. ಖವಾಜ 160 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ದರು. ಸ್ಟೀವ್ ಸ್ಮಿತ್ 72 ರನ್‌ಗಳ ಕೊಡುಗೆ ನೀಡಿದರೆ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 93 ರನ್‌ಗಳಿಸಿ ಔಟಾದರು. ಈ ಮೂಲಕ 7 ರನ್‌ಗಳಿಂದ ಶತಕವಂಚಿತರಾಗಿದ್ದಾರೆ. ಅಂತಿಮವಾಗಿ 189 ಓವರ್‌ಗಳ ಕಾಳ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 559/9 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ.

ಪಾಕಿಸ್ತಾನ ಪ್ಲೇಯಿಂಗ್ XI: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್ (ನಾಯಕ), ಫವಾದ್ ಆಲಂ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಹೀಮ್ ಅಶ್ರಫ್, ಹಸನ್ ಅಲಿ, ನೌಮಾನ್ ಅಲಿ, ಶಾಹೀನ್ ಅಫ್ರಿದಿ, ಸಾಜಿದ್ ಖಾನ್
ಬೆಂಚ್: ಇಫ್ತಿಕರ್ ಅಹ್ಮದ್, ನಸೀಮ್ ಶಾ, ಮೊಹಮ್ಮದ್ ವಾಸಿಂ ಜೂನಿಯರ್, ಶಾನ್ ಮಸೂದ್, ಸೌದ್ ಶಕೀಲ್, ಹಾರಿಸ್ ರೌಫ್, ಜಾಹಿದ್ ಮಹಮೂದ್

IPL 2022 ಈ ಎಲ್ಲಾ ವಿಚಾರಗಳಿಂದ ತುಂಬಾ ವಿಶೇಷ | Oneindia Kannada

ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಮಿಚೆಲ್ ಸ್ವೆಪ್ಸನ್
ಬೆಂಚ್: ಜೋಶ್ ಹ್ಯಾಜಲ್ವುಡ್, ಮಿಚೆಲ್ ಮಾರ್ಷ್, ಮಾರ್ಕಸ್ ಹ್ಯಾರಿಸ್, ಮಾರ್ಕ್ ಸ್ಟೆಕೆಟೀ, ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಜೋಶ್

Story first published: Monday, March 14, 2022, 12:29 [IST]
Other articles published on Mar 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+