ಭಾರತ vs ಆಸ್ಟ್ರೇಲಿಯಾ, 2ನೇ ಟೆಸ್ಟ್: ಭಾರತಕ್ಕೆ 8 ವಿಕೆಟ್ ಭರ್ಜರಿ ಜಯ

ಮೆಲ್ಬರ್ನ್: ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 103.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 200 ರನ್ ಬಾರಿಸಿ ಇನ್ನಿಂಗ್ಸ್ ಮುಗಿಸಿದ್ದರಿಂದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ಗೆಲ್ಲಲು ಕೇವಲ 70 ರನ್ ಬೇಕಾಗಿತ್ತು. ಈ ಪಂದ್ಯದ ಮುಕ್ತಾಯದೊಂದಿಗೆ ನಾಲ್ಕು ಪಂದ್ಯಗಳ ಈ ಟೆಸ್ಟ್ ಸರಣಿ 1-1ರಿಂದ ಸಮಬಲಗೊಂಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ಮ್ಯಾಥ್ಯೂ ವೇಡ್ 30, ಮಾರ್ನಸ್ ಲ್ಯಬುಶೇನ್ 48, ಟ್ರಾವಿಸ್ ಹೆಡ್ 38, ಕ್ಯಾಮರಾನ್ ಗ್ರೀನ್ 12, ಟಿಮ್ ಪೈನ್ 13, ಪ್ಯಾಟ್ ಕಮಿನ್ಸ್ 9, ಮಿಚೆಲ್ ಸ್ಟಾರ್ಕ್ 7, ನೇಥನ್ ಲಿಯಾನ್ 20, ಜೋಶ್ ಹ್ಯಾಝಲ್ವುಡ್ 4 ರನ್ ಬಾರಿಸಿದರು.
ಕಾಂಗರೂ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 72.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 195 ರನ್ ಬಾರಿಸಿ ಹಿನ್ನಡೆ ಅನುಭವಿಸಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಮುನ್ನಡೆ
ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಶುಬ್ಮನ್ ಗಿಲ್ 45, ಚೇತೇಶ್ವರ ಪೂಜಾರ 17, ಅಜಿಂಕ್ಯ ರಹಾನೆ 112, ಹನುಮ ವಿಹಾರಿ 21, ರಿಷಭ್ ಪಂತ್ 29, ರವೀಂದ್ರ ಜಡೇಜಾ 57, ರವಿಚಂದ್ರನ್ ಅಶ್ವಿನ್ 14, ಉಮೇಶ್ ಯಾದವ್ 9 ರನ್‌ನೊಂದಿಗೆ 115.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 326 ರನ್ ಗಳಿಸಿ 131 ರನ್ ಮುನ್ನಡೆ ಸಾಧಿಸಿತ್ತು.

ಸ್ಮಿತ್, ಪೈನ್ ನೀರಸ ಬ್ಯಾಟಿಂಗ್
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ, ಮ್ಯಾಥ್ಯೂ ವೇಡ್ 40, ಮಾರ್ನಸ್ ಲ್ಯಬುಶೇನ್ 28, ಸ್ಟೀವ್ ಸ್ಮಿತ್ 8, ಟ್ರಾವಿಸ್ ಹೆಡ್ 17, ಕ್ಯಮರಾನ್ ಗ್ರೀನ್ 45, ಪ್ಯಾಟ್ ಮಮಿನ್ಸ್ 22, ಮಿಚೆಲ್ ಸ್ಟಾರ್ಕ್ 14, ಜೋಶ್ ಹ್ಯಾಝಲ್ವುಡ್ 10 ರನ್‌ನೊಂದಿಗೆ 103.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 200 ರನ್ ಬಾರಿಸಿತ್ತು.

ಬೂಮ್ರಾ, ಅಶ್ವಿನ್, ಸಿರಾಜ್ ಮಾರಕ ಬೌಲಿಂಗ್
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತದಿಂದ ಮಯಾಂಕ್ ಅಗರ್ವಾಲ್ 5, ಶುಬ್ಮನ್ ಗಿಲ್ ಅಜೇಯ 35, ಚೇತೇಶ್ವರ್ ಪೂಜಾರ 3, ನಾಯಕ ಅಜಿಂಕ್ಯ ರಹಾನೆ ಅಜೇಯ 27 ರನ್ ಬಾರಿಸಿದರು. ಭಾರತ 15.5 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 70 ರನ್ ಬಾರಿಸಿ ಗೆಲುವನ್ನಾಚರಿಸಿತು. ಭಾರತದ ಜಸ್‌ಪ್ರೀತ್ ಬೂಮ್ರಾ 4+2, ರವೀಂದ್ರ ಜಡೇಜಾ 2+1, ಆರ್ ಅಶ್ವಿನ್ 3+2, ಮೊಹಮ್ಮದ್ ಸಿರಾಜ್ 3+2 ವಿಕೆಟ್ ಪಡೆದರೆ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 3+1, ಪ್ಯಾಟ್ ಕಮಿನ್ಸ್ 2+1, ಜೋಶ್ ಹ್ಯಾಝಲ್ವುಡ್ 1, ನೇಥನ್ ಲಿಯಾನ್ 3 ವಿಕೆಟ್‌ನೊಂದಿಗೆ ಗಮನ ಸೆಳೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications