Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2ನೇ ಟೆಸ್ಟ್ : ಆಸೀಸ್‌ 4 ವಿಕೆಟ್‌ಗೆ 221

ಬ್ರಿಸ್ಬೇನ್, ಡಿ.18 : ಭಾರತದ ವಿರುದ್ಧ ಆಸ್ಟ್ರೇಲಿಯ ದ್ವಿತೀಯ ಟೆಸ್ಟ್‌ ಪಂದ್ಯದ ಎರಡನೇ ದಿನದಾಟದ ಮುಕ್ತಾಯಕ್ಕೆ 4 ವಿಕೆಟ್‌ ನಷ್ಟಕ್ಕೆ 221 ರನ್‌ ಗಳಿಸಿದೆ. ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 408 ರನ್‌ಗಳಿಗೆ ಸರ್ವಪತನ ಕಂಡಿದೆ.

ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್‌ ವಾರ್ನರ್‌ (29 ), ಕ್ರಿಸ್‌ ರೋಜೆರ್ಸ್‌ (55), ಶಾನ್‌ ಮಾರ್ಷ್‌ (32) ರನ್‌ ಗಳಿಸಿ ಉಮೇಶ್‌ ಯಾದವ್‌ ಅವರಿಗೆ ವಿಕೆಟ್‌ ಒಪ್ಪಿಸಿದ್ದಾರೆ. ಶೇನ್‌ ವಾಟ್ಸನ್‌ (25) ರನ್‌ ಗಳಿಸಿ ಆರ್‌.ಅಶ್ವಿ‌ನ್‌ಗೆ ವಿಕೆಟ್‌ ಒಪ್ಪಿಸಿದರು.

2nd Test

ಸ್ಟೀವನ್‌ ಸ್ಮಿತ್‌ (65) ಹಾಗೂ ಮಿಚೆಲ್‌ ಮಾರ್ಷ್‌ (7) ರನ್‌ಗಳಿಸಿ ಶುಕ್ರವಾರಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿದ್ದಾರೆ. [ಸ್ಕೋರ್ ಕಾರ್ಡ್ ನೋಡಿ]

ಹಿಂದಿನ ಸುದ್ದಿ : ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ಎರಡನೇ ದಿನವಾದ ಗುರುವಾರ ಭಾರತ 408 ರನ್‌ಗಳಿಗೆ ಆಲ್‌ಔಟ್ ಆಗಿದೆ. 4ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿ ಬುಧವಾರದ ಆಟ ಮುಗಿಸಿದ್ದ ಟೀಂ ಇಂಡಿಯಾ ಇಂದು 97 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಆಸ್ಟ್ರೇಲಿಯಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಟೀಂ ಇಂಡಿಯಾ ದಿನದ ಅಂತ್ಯಕ್ಕೆ 311 ರನ್ ಗಳಿಸಿತ್ತು. ಆದರೆ, ಗುರುವಾರ ಆರಂಭಿಕ ಅಘಾತ ಅನುಭವಿಸಿತು. 97 ರನ್ ಗಳಿಸುವಷ್ಟರಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 408 ರನ್‌ಗಳಿಗೆ ಸರ್ವಪತನ ಕಂಡಿತು.

Test Cricket

ಮುರಳಿ ವಿಜಯ್ (144) ಮತ್ತು ರೆಹಾನೆ (81) ಗಳಿಸಿದ್ದು ಬಿಟ್ಟರೆ ಬೇರೆ ಯಾವ ಆಟಗಾರರು 35 ರನ್‌ಗಳ ಗಡಿಯನ್ನು ದಾಟಿಲ್ಲ. ಗುರುವಾರ ಬೆಳಗ್ಗೆ ಆಟ ಆರಂಭವಾದಾಗ ಜೋಶ್‌ ಹ್ಯಾಝಲ್‌ವುಡ್‌ ಬೌಲಿಂಗ್ ದಾಳಿಗೆ ಸಿಕ್ಕ ಬ್ಯಾಟ್ಸ್‌ಮನ್‌ಗಳು ಫೆವಿಲಿಯನ್ ಪರೇಡ್ ನಡೆಸಿದರು.

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+