ಭಾರತ vs ಆಸ್ಟ್ರೇಲಿಯಾ, 3ನೇ ಟಿ20: ಪ್ಲೇಯಿಂಗ್ XI, Live ಸ್ಕೋರ್

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಇಂದು ಆತಿಥೇಯರ ವಿರುದ್ಧ ಮೂರನೇ ಮತ್ತು ಕೊನೇಯ ಟಿ20ಐ ಪಂದ್ಯವನ್ನಾಡುತ್ತಿದೆ. ಸಿಡ್ನಿ ಕ್ರಿಕೆಟ್ ಗ್ರೌಂಡರ್‌ನಲ್ಲಿ ಈ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದಿರುವ ವಿರಾಟ್ ಕೊಹ್ಲಿ ಪಡೆ ಬೌಲಿಂಗ್ ಆಯ್ದುಕೊಂಡಿದೆ. ಇಂದಿನ ಪಂದ್ಯ ಗೆದ್ದು ಸರಣಿ ಕ್ಲೀನ್‌ಸ್ವೀಪ್ ಮಾಡುವತ್ತ ಭಾರತ ಕಣ್ಣಿಟ್ಟಿದೆ.
ಮೂರು ಪಂದ್ಯಗಳ ಏಕದಿನ ಸರಣಿಯನ್ನು ಭಾರತ ತಂಡ 2-1ರಿಂದ ಕಳೆದುಕೊಂಡಿತ್ತು. ಆದರೆ ಟಿ20ಐ ಸರಣಿಯಲ್ಲಿ ಈಗಾಗಲೇ 2-0ಯ ಜಯ ದಾಖಲಿಸಿರುವ ಭಾರತ ಆತಿಥೇಯರಿಗೆ ತಕ್ಕ ತಿರುಗೇಟು ನೀಡಿದೆ. ಟಿ20ಐ ಸರಣಿಯ ಬಳಿಕ ಇತ್ತಂಡಗಳ ಮಧ್ಯೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಆಸ್ಟ್ರೇಲಿಯಾ ತಂಡದಲ್ಲಿ ಇಂದು ವೇಗಿ ಆ್ಯಂಡ್ರ್ಯೂ ಟೈ ಕಾಣಿಸಿಕೊಂಡಿದ್ದಾರೆ.
ಭಾರತ vs ಆಸ್ಟ್ರೇಲಿಯಾ, 3ನೇ ಟಿ20ಐ ಪಂದ್ಯ, Live ಸ್ಕೋರ್
ಭಾರತ ಪ್ಲೇಯಿಂಗ್ XI: ಕೆ.ಎಲ್. ರಾಹುಲ್ (ವಿಕೆ), ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್, ಟಿ ನಟರಾಜನ್, ಯುಜ್ವೇಂದ್ರ ಚಹಲ್.
ಆಸ್ಟ್ರೇಲಿಯಾ ಪ್ಲೇಯಿಂಗ್ XI: ಆ್ಯರನ್ ಫಿಂಚ್ (ಸಿ), ಮ್ಯಾಥ್ಯೂ ವೇಡ್ (ವಿಕೆ), ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಡಿ ಆರ್ಸಿ ಶಾರ್ಟ್, ಮೊಯಿಸಸ್ ಹೆನ್ರಿಕ್ಸ್, ಡೇನಿಯಲ್ ಸ್ಯಾಮ್ಸ್, ಸೀನ್ ಅಬಾಟ್, ಮಿಚೆಲ್ ಸ್ವೆಪ್ಸನ್, ಆಂಡ್ರ್ಯೂ ಟೈ, ಆ್ಯಡಮ್ ಜಂಪಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications