Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮ್ಯಾಥ್ಯೂ ವೇಡ್-ರಿಷಭ್ ಪಂತ್ ಮಧ್ಯೆ ಬಿಸಿ ಬಿಸಿ ಸಂಭಾಷಣೆ: ವಿಡಿಯೋಗಳು

Australia vs India: Matthew Wade vs Rishabh Pant banter: Video

ಮೆಲ್ಬರ್ನ್: ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಮುನ್ನಡೆ ಸಾಧಿಸಿದೆ. ಪಂದ್ಯ ಗೆದ್ದುಕೊಳ್ಳುವ ಹುಮ್ಮಸ್ಸಿನಲ್ಲಿ ಟೀಮ್ ಇಂಡಿಯಾ ಇದೆ. ಈ ಮಧ್ಯೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ಮತ್ತು ಭಾರತದ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಮಧ್ಯೆ ಬಿಸಿ ಬಿಸಿ ಸಂಭಾಷಣೆಯ ವಿಡಿಯೋ ಸೆರೆಯಾಗಿದೆ.

ರಿಷಭ್ ಪಂತ್ ವಿಕೆಟ್ ಕೀಪರ್‌ ಜವಾಬ್ದಾರಿ ಹೊತ್ತಿದ್ದರೆ ಅಲ್ಲಿ ತಮಾಷೆ, ಬಿಗುವಿನ ವಾತಾವರಣ ಸೃಷ್ಟಿ ಇದ್ದಿದ್ದೇ. ಯಾಕೆಂದರೆ ಕೀಪಿಂಗ್‌ ವೇಳೆ ಪಂತ್‌ ಅವರ ಕೈಯಷ್ಟೇ ಅಲ್ಲ, ಬಾಯಿಯೂ ಕೆಲಸ ಮಾಡುತ್ತಿರುತ್ತದೆ.

ಭಾರತ-ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್‌ನ ಮೂರನೇ ದಿನದಾಟವಾದ ಸೋಮವಾರ ರಿಷಭ್ ಪಂತ್ ಮತ್ತು ಮ್ಯಾಥ್ಯೂ ವೇಡ್ ಮಧ್ಯೆ ಬಿಸಿ ಬಿಸಿ ಸಂಭಾಷಣೆ ನಡೆದಿದ್ದು ಕಾಣಸಿಕ್ಕಿದೆ.

ವೇಡ್ ಉರಿಸಿದ ಪಂತ್

ಮ್ಯಾಥ್ಯೂ ವೇಡ್ ಅವರು ಸ್ಟ್ರೈಕ್‌ನಲ್ಲಿದ್ದಾಗ ಕೀಪಿಂಗ್ ಮಾಡುತ್ತಿದ್ದ ಪಂತ್, 'ಹೆ ಹ್ಹೆ ಹ್ಹೆ.. ಕಮಾನ್ ಬಾಯ್ಸ್' ಅಂತೆಲ್ಲ ಕಿರುಚುತ್ತ ಬ್ಯಾಟಿಂಗ್‌ ತಂಡವನ್ನು ಕಿಚಾಯಿಸುತ್ತಿದ್ದರು. ಪಂತ್‌ ಅವರ ಈ ವರ್ತನೆ ಇದೇ ಮೊದಲಲ್ಲ. ಇಂಗ್ಲೆಂಡ್, ಆಸ್ಟ್ರೇಲಿಯಾ, ಪಾಕಿಸ್ತಾನ, ವೆಸ್ಟ್ ಇಂಡೀಸ್ ಇಂಥ ಪ್ರಮುಖ ತಂಡಗಳ ವಿರುದ್ಧ ಪಂದ್ಯಗಳಿದ್ದಾಗ ಪಂತ್ ವಿಕೆಟ್ ಕೀಪಿಂಗ್ ಮಧ್ಯೆ ಎದುರಾಳಿಗೆ ಕಿರಿ ಕಿರಿ ಅನ್ನಿಸುವ ಮಟ್ಟಿಗೆ ಹೀಗೆ ಮಾತನಾಡುತ್ತಿರುತ್ತಾರೆ.

ಉರಿದು ಪ್ರತಿಕ್ರಿಯಿಸಿದ ವೇಡ್

ಪಂತ್ ಆಟದ ಮಧ್ಯೆ ಆಗಾಗ ಹೆ ಹ್ಹೆ ಹ್ಹೆ ಅಂತ ನಗೋದು, ತಂಡದ ಆಟಗಾರರಿಗೆ ಶಹಭಾಶ್ ಹೇಳೋದು ನಡೆಯುತ್ತಲೇ ಇದ್ದಿದ್ದರಿಂದ ಬ್ಯಾಟಿಂಗ್‌ ಮಾಡುತ್ತಿದ್ದ ವೇಡ್‌ಗೆ ಉರಿದು ಹೋಯಿತು ಅನ್ನಿಸುತ್ತೆ. ಬ್ಯಾಟಿಂಗ್‌ ಮಾಡುತ್ತಲೇ, 'ಹೆ ಹ್ಹೆ ಹ್ಹೆ.. ನಿನ್ನ ದೊಡ್ಡ ಮುಖ ಸ್ಟ್ರೀನ್‌ನಲ್ಲಿ ನೋಡಿದೆ ಅನ್ಸುತ್ತೆ. ಅದಕ್ಕೆ ನೀನು ನಗಾಡುತ್ತಿದ್ದೀಯ,' ಅಂತ ಪ್ರತಿಕ್ರಿಯಿಸಿದ್ದಾರೆ. ಪಂತ್-ವೇಡ್ ನಡುವಿನ ಸಂಭಾಷಣೆ ಸ್ಟಂಪ್‌ ಮೈಕ್‌ನಲ್ಲಿ ಸೆರೆಯಾಗಿದೆ.

ಪಂತ್-ವೇಡ್ ಎದುರುಬದುರು

ಬ್ಯಾಟಿಂಗ್‌ ಮಾಡುತ್ತಿದ್ದ ವೇಡ್ ಮತ್ತು ಕೀಪಿಂಗ್ ಮಾಡುತ್ತಿದ್ದ ಪಂತ್ ಮಧ್ಯೆ ಮಾತು ಅಲ್ಲದೆ, ಮೌನವಾಗಿಯೇ ಬಿಸಿಬಿಸಿ ಸಂಭಾಷಣೆಗಳು ನಡೆಯುತ್ತಲೇ ಇತ್ತು. ಬ್ಯಾಟಿಂಗ್‌ ಮಾಡುತ್ತ ವೇಡ್ ಅವರು ಶಾಟ್‌ಗೆ ಯತ್ನಿಸಿ ಪಂತ್ ಅವರ ಸಮೀಪಕ್ಕೆ ಬಂದಿದ್ದ ಚಿತ್ರ-ವಿಡಿಯೋಗಳೂ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ರವೀಂದ್ರ ಜಡೇಜಾ ಅವರ 43.6ನೇ ಓವರ್‌ನಲ್ಲಿ ವೇಡ್ ಎಲ್‌ಬಿಡಬ್ಲ್ಯೂ ಆಗಿ 40 ರನ್‌ಗೆ ನಿರ್ಗಮಿಸಿದ ಬಳಿಕ ಪಂತ್-ವೇಡ್ ನಡುವಿನ ಸಂಭಾಷಣೆ ಕೊನೆಗೊಂಡಿತು.

Story first published: Tuesday, December 29, 2020, 10:04 [IST]
Other articles published on Dec 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+