ಆಸ್ಟ್ರೇಲಿಯಾ vs ನ್ಯೂಜಿಲೆಂಡ್: ಎರಡನೇ ಏಕದಿನ ಪಂದ್ಯ, ಟಾಸ್ ರಿಪೋರ್ಟ್ ಹಾಗೂ ಆಡುವ ಬಳಗ

ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಕೈರ್ನ್ಸ್‌ನಲ್ಲಿ ಆರಂಭವಾಗಿದ್ದು ಟಾಸ್ ಗೆದ್ದಿರುವ ಪ್ರವಾಸಿ ನ್ಯೂಜಿಲೆಂಡ್ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆರೋನ್ ಫಿಂಚ್ ನೇತೃತ್ವದ ಆಸಿಸ್ ಪಡೆ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.
ಎರಡು ತಂಡಗಳು ಕೂಡ ಬಲಿಷ್ಠ ಆಟಗಾರರ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಣಕ್ಕಿಳಿದಿದ್ದು ಯಾರಿಗೆ ಮೇಲುಗೈ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತದಿಂದಾಗಿ ಸೋಲಿನ ಸುಳಿಗೆ ಸಿಲುಕಿದ್ದರೂ ಅಲೆಕ್ಸ್ ಕ್ಯಾರಿ ಹಾಗೂ ಕ್ಯಾಮರೂನ್ ಗ್ರೀನ್ ಪ್ರದರ್ಶನದಿಂದಾಗಿ ರೋಚಕ ಗೆಲುವು ಸಾಧಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ಬಾರಲಿದೆ ಎಂಬುದು ಕುತೂಹಲ ಮೂಡಿಸಿದೆ.
Live ಸ್ಕೋರ್‌ಕಾರ್ಡ್ ಹೀಗಿದೆ

ಮೂರು ಪಂದ್ಯಗಳ ಸರಣಿ
ಆಸ್ಟ್ರೇಲಿಯಾದ ಕೈರ್ನ್ಸ್‌ನಲ್ಲಿರುವ ಕೆಜೆಲಿಸ್ ಸ್ಟೇಡಿಯಂನಲ್ಲಿ ಈ ಸರಣಿಯ ಮೂರು ಪಂದ್ಯಗಳು ಕೂಡ ಆಯೋಜನೆಯಾಗಲಿದೆ. ಮಂಗಳವಾರ ಸೆಪ್ಟೆಂಬರ್ 6ರಂದು ಸರಣಿಯ ಮೊದಲ ಪಂದ್ಯ ನಡೆದಿದ್ದು ಸೆಪ್ಟೆಂಬರ್ 8 ಹಾಗೂ 10ರಂದು ಕೊನೆಯ ಎರಡು ಪಂದ್ಯಗಳು ನಿಗದಿಯಾಗಿದೆ.

ಆಸ್ಟ್ರೇಲಿಯಾ ಆಡುವ ಬಳಗ
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಾರ್ಕಸ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಗ್ಲೆನ್ ಮ್ಯಾಕ್ಸ್‌ವೆಲ್, ಸೀನ್ ಅಬಾಟ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
ಬೆಂಚ್: ಕ್ಯಾಮರೂನ್ ಗ್ರೀನ್, ಆಷ್ಟನ್ ಅಗರ್, ಜೋಶ್ ಇಂಗ್ಲಿಸ್
ಆ ವಿಚಾರದಲ್ಲಿ ಸ್ಪಷ್ಟತೆಯಿಲ್ಲದ್ದೇ ಭಾರತದ ಹೀನಾಯ ಪ್ರದರ್ಶನಕ್ಕೆ ಕಾರಣವಾಯಿತು: ವಾಸಿಂ ಜಾಫರ್

ನ್ಯೂಜಿಲೆಂಡ್ ತಂಡ ಆಡುವ ಬಳಗ
ಮಾರ್ಟಿನ್ ಗಪ್ಟಿಲ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಮೈಕಲ್ ಬ್ರೇಸ್‌ವೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್
ಬೆಂಚ್: ಲಾಕಿ ಫರ್ಗುಸನ್, ಫಿನ್ ಅಲೆನ್, ಗ್ಲೆನ್ ಫಿಲಿಪ್ಸ್, ಬೆನ್ ಸಿಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications