
ಅಡಿಲೇಡ್, ಡಿಸೆಂಬರ್ 2: ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್, ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ಅದ್ಭುತ ಕ್ಯಾಚ್ ಪಡೆದು ಗಮನ ಸೆಳೆದರು. ಅಡಿಲೇಡ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯದಲ್ಲಿ ಸ್ಮಿತ್, ಕ್ಯಾಚ್ ಮೂಲಕ ಪಾಕ್ ನಾಯಕ ಅಝರ್ ಅಲಿ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು.
ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ದ್ವಿತೀಯ ಇನ್ನಿಂಗ್ಸ್‌ನ 4.6ನೇ ಓವರ್‌ನಲ್ಲಿ (ಮಿಚೆಲ್ ಸ್ಟಾರ್ಕ್ ಬೌಲಿಂಗ್) ಸೆಕೆಂಡ್ ಸ್ಲಿಪ್‌ನಲ್ಲಿದ್ದ ಸ್ಮಿತ್ ಕಷ್ಟಕರ ರೀತಿಯ ಕ್ಯಾಚನ್ನು ಯಶಸ್ವಿಯಾಗಿ ಪಡೆದರು. ಪರಿಣಾಮ, ಅಝರ್ ಅಲಿ ಕೇವಲ 9 ರನ್‌ಗೆ ನಿರ್ಗಮಿಸಬೇಕಾಯ್ತು.
ಆಸ್ಟ್ರೇಲಿಯಾ vs ಪಾಕಿಸ್ತಾನ, 2ನೇ ಟೆಸ್ಟ್, Live ಸ್ಕೋರ್‌ಕಾರ್ಡ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆತಿಥೇಯ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ ದಾಖಲೆಯ ತ್ರಿಶತಕ (335 ರನ್) ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಶತಕದೊಂದಿಗೆ (162 ರನ್) 127 ಓವರ್‌ಗೆ 3 ವಿಕೆಟ್ ಕಳೆದು 589 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು.
ಗುರಿ ಬೆನ್ನತ್ತಿದ್ದ ಪಾಕಿಸ್ತಾನ, ಯಾಸೀರ್ ಶಾ ಶತಕ (113 ರನ್) ಕೊಡುಗೆಯಿಂದ 302 ರನ್‌ಗೆ ಮೊದಲ ಇನ್ನಿಂಗ್ಸ್ ಮುಗಿಸಿತು. ಪಾಕ್ ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ 6, ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದು ಗಮನ ಸೆಳೆದರು. ಪಾಕಿಸ್ತಾನಕ್ಕೆ ಪಾಕ್ ಫಾಲೋ ಆನ್ ನೀಡಿದ್ದು, ಅಝರ್ ಅಲಿ ಬಳಗ ದ್ವಿತೀಯ ಇನ್ನಿಂಗ್ಸ್ ಆಡುತ್ತಿದೆ.