AUS vs PAK World Cup Match: ಪಾಕ್ ವಿರುದ್ಧ ಭರ್ಜರಿ ಶತಕ ಸಿಡಿಸಿ 'ಪುಷ್ಪ ತಗ್ಗೆದೆಲೆ' ಎಂದ ಡೇವಿಡ್ ವಾರ್ನರ್!
ಶುಕ್ರವಾರ, ಅಕ್ಟೋಬರ್ 20ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರರು ಅಬ್ಬರಿಸಿದ್ದಾರೆ.
ಪಾಕಿಸ್ತಾನದ ನಾಯಕ ಬಾಬರ್ ಅಜಂ ತಮ್ಮ ನಾಲ್ಕನೇ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿದ ನಂತರ, ಆಸ್ಟ್ರೇಲಿಯಾದ ಇಬ್ಬರೂ ಆಕ್ರಮಣಕಾರಿ ಪ್ರದರ್ಶನ ನೀಡಿದರು.

ಆಸ್ಟ್ರೇಲಿಯಾದ ಆರಂಭಿಕ ಜೋಡಿಯಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರು ಪಾಕಿಸ್ತಾನದ ಬೌಲಿಂಗ್ ವಿಭಾಗವನ್ನು ಮನಬಂದಂತೆ ದಂಡಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 33.5 ಓವರ್‌ಗಳಲ್ಲಿ 159 ರನ್‌ಗಳ ಜೊತೆಯಾಟ ನಿರ್ಮಿಸಿ ಬೃಹತ್ ಮೊತ್ತಕ್ಕೆ ಮುನ್ನುಡಿ ಬರೆದರು.
ಇದು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ವಿಕೆಟ್‌ಗೆ 6ನೇ ಅತಿ ಹೆಚ್ಚು ಮೊತ್ತದ ಜೊತೆಯಾಟವಾಗಿದೆ. ಈ ವೇಳೆ 108 ಎಸೆತಗಳಲ್ಲಿ 10 ಬೌಂಡರಿ ಹಾಗೂ 9 ಸಿಕ್ಸರ್‌ಗಳ ಮೂಲಕ 121 ರನ್ ಗಳಿಸಿದ್ದ ಮಿಚೆಲ್ ಮಾರ್ಷ್ ವಿಕೆಟ್ ಒಪ್ಪಿಸಿದರು. ಇನ್ನು ಮಿಚೆಲ್ ಮಾರ್ಷ್ 100 ಎಸೆತಗಳಲ್ಲಿ 100 ರನ್ ಗಡಿ ದಾಟಿದರು. ಇದು ಅವರ ಎರಡನೇ ಏಕದಿನ ಶತಕವಾಗಿದೆ.

ಇನ್ನು ಎಡಗೈ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಕೇವಲ 85 ಎಸೆತಗಳಲ್ಲಿ ತಮ್ಮ 21ನೇ ಏಕದಿನ ಶತಕವನ್ನು ಬಾರಿಸಿದರು. ವಿಶ್ವಕಪ್ ಪಂದ್ಯದಲ್ಲಿ ಶತಕ ಸಿಡಿಸುತ್ತಿದ್ದಂತೆಯೇ ಮೇಲೆ ಜಿಗಿದು ಗಾಳಿಯಲ್ಲಿ ಗುದ್ದಿದರು. ಅಲ್ಲದೆ ತಮ್ಮ ನೆಚ್ಚಿನ ಪುಷ್ಪ ಚಿತ್ರದ ಶೈಲಿಯಲ್ಲಿ ಆ್ಯಕ್ಷನ್ ಮಾಡಿದ್ದು ವಿಶೇಷವಾಗಿತ್ತು.
ಅಂತಿಮವಾಗಿ ಡೇವಿಡ್ ವಾರ್ನರ್ 129 ಎಸೆತಗಳಲ್ಲಿ 14 ಬೌಂಡರಿ ಮತ್ತು 9 ಸಿಕ್ಸರ್‌ಗಳ ಸಮೇತ 163 ರನ್ ಬಾರಿಸಿ ಹ್ಯಾರಿಸ್ ರೌಫ್‌ಗೆ ವಿಕೆಟ್ ನೀಡಿದರು.
ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯ ವಹಿಸಿದ್ದ 2011ರ ವಿಶ್ವಕಪ್‌ನಲ್ಲಿ ಕೆನಡಾ ವಿರುದ್ಧ ಹಿಂದೆ ಗಳಿಸಿದ್ದ ಶೇನ್ ವ್ಯಾಟ್ಸನ್ ಮತ್ತು ಬ್ರಾಡ್ ಹಡ್ಡಿನ್ ಅವರ 183 ರನ್‌ಗಳ ದಾಖಲೆಯನ್ನು ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಜೋಡಿ ಮೀರಿಸಿತು.
2015ರಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಜೋಡಿ ಅಫ್ಘಾನಿಸ್ತಾನ ವಿರುದ್ಧ ಎರಡನೇ ವಿಕೆಟ್‌ಗೆ 260 ರನ್‌ಗಳ ಜೊತೆಯಾಟವಾಡಿದ್ದು, ಆಸ್ಟ್ರೇಲಿಯನ್ ತಂಡದಿಂದ ಯಾವುದೇ ವಿಕೆಟ್‌ನಲ್ಲಿ ಅತ್ಯಧಿಕ ಏಕದಿನ ಜೊತೆಯಾಟವಾಗಿದೆ.
2003ರಲ್ಲಿ ರಿಕಿ ಪಾಂಟಿಂಗ್ ಮತ್ತು ಡೇಮಿಯನ್ ಮಾರ್ಟಿನ್ (ಅಜೇಯ 234 ರನ್) ನಡುವೆ ಮೂರನೇ ಅತ್ಯಧಿಕ ಜೊತೆಯಾಟ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications