ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ vs ಆಸಿಸ್ 2ನೇ ಟೆಸ್ಟ್: ಮಾರ್ನಸ್, ಹೆಡ್ ಶತಕ, ಬೃಹತ್ ಮೊತ್ತದತ್ತ ಆಸ್ಟ್ರೇಲಿಯಾ

Australia vs West Indies, 2nd Test, Marnus and Head Century 1st day Highlights

ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯ ಅಡಿಲೇಡ್ ಓವಲ್‌ನಲ್ಲಿ ಇಂದು ಆರಂಭವಾಗಲಿದೆ. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಸಿಸ್ ಅಗ್ರ ಕ್ರಮಾಂಕ ಮತ್ತೆ ಅದ್ಭುತ ಪ್ರದರ್ಶನ ನೀಡಿದ್ದು ಎರಡನೇ ಪಂದ್ಯದಲ್ಲಿಯೂ ಬೃಜತ್ ಮೊತ್ತದತ್ತ ದಾಪುಗಾಲಿಟ್ಟಿದೆ.

ಆಸಿಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ 21 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಉಸ್ಮಾನ್ ಖವಾಜ ಹಾಗೂ ಮಾರ್ನಸ್ ಲ್ಯಾಬುಶೈನ್ ಅದ್ಭುತ ಜೊತೆಯಾಟ ನೀಡಿದರು. ಉಸ್ಮಾನ್ ಖವಾಜ 62 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಬಂದ ನಾಯಕ ಸ್ಟೀವ್ ಸ್ಮಿತ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ ಟ್ರೆವಿಸ್ ಹೆಡ್ ಮಾರ್ನಸ್ ವಿಂಡೀಸ್ ಬೌಲಿಂಗ್ ವಿಭಾಗಕ್ಕೆ ಕಾಡಿದರು.

ಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗಾಯದ ನಡುವೆಯೂ ಛಲ ಬಿಡದೆ ಸ್ಪರ್ಧಿಸಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಮೀರಾಬಾಯಿ ಚಾನು

ಈ ಜೋಡಿ ಈಗಾಗಲೇ ದ್ವಿಶತಕದ ಜೊತೆಯಾಟವನ್ನು ನೀಡಿದ್ದು ಎರಡನೇ ದಿನಕ್ಕೆ ಆಟವನ್ನು ಕಾಯ್ದಿರಿಸಿದ್ದಾರೆ. ಇಬ್ಬರು ಆಟಗಾರು ಕೂಡ ಶತಕ ಸಿಡಿಸಿದ್ದು ಮಾರ್ನಸ್ 120 ರನ್‌ಗಳಿಸಿ ಅಜೇಯವಾಗುಳಿದರೆ ಟ್ರೆವಿಸ್ ಹೆಡ್ 114 ರನ್‌ಗಳಿಸಿದ್ದಾರೆ. ಇನ್ನು ಮಾರ್ನಸ್ ಲ್ಯಾಬುಶೈನ್ ಸತತ ಮೂರನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದ ಅವರು ಎರಡೇ ಇನ್ನಿಂಗ್ಸ್‌ನಲ್ಲಿ ಅಜೇಯ ಶತಕ ಬಾರಿಸಿದ್ದರು.

ಇನ್ನು ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 330 ರನ್‌ಗಳಿಸಿದ್ದು 3 ವಿಕೆಟ್ ಕಳೆದುಕೊಂಡಿದೆ. ವೆಸ್ಟ್ ಇಂಡೀಸ್ ಪರ ಅಲ್ಜರಿ ಜೋಸೆಫ್, ಜೇಸನ್ ಹೋಲ್ಡರ್ ಹಾಗೂ ಡೆವೋನ್ ಥಾಮಸ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

AUS vs WI: 2ನೇ ಟೆಸ್ಟ್‌ನಿಂದ ಪ್ಯಾಟ್ ಕಮ್ಮಿನ್ಸ್ ಔಟ್, ಸ್ಟೀವ್ ಸ್ಮಿತ್‌ಗೆ ಮತ್ತೆ ಆಸೀಸ್ ನಾಯಕತ್ವAUS vs WI: 2ನೇ ಟೆಸ್ಟ್‌ನಿಂದ ಪ್ಯಾಟ್ ಕಮ್ಮಿನ್ಸ್ ಔಟ್, ಸ್ಟೀವ್ ಸ್ಮಿತ್‌ಗೆ ಮತ್ತೆ ಆಸೀಸ್ ನಾಯಕತ್ವ

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮೈಕೆಲ್ ನೆಸರ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಮಾರ್ಕಸ್ ಹ್ಯಾರಿಸ್, ಲ್ಯಾನ್ಸ್ ಮೋರಿಸ್

ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ಶಮರ್ ಬ್ರೂಕ್ಸ್, ಜೆರ್ಮೈನ್ ಬ್ಲಾಕ್‌ವುಡ್, ಡೆವೊನ್ ಥಾಮಸ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ರೋಸ್ಟನ್ ಚೇಸ್, ಅಲ್ಜಾರಿ ಜೋಸೆಫ್, ಆಂಡರ್ಸನ್ ಫಿಲಿಪ್, ಮಾರ್ಕ್ವಿನೋ ಮಿಂಡ್ಲಿ
ಬೆಂಚ್: ಕೈಲ್ ಮೇಯರ್ಸ್, ಕೆಮರ್ ರೋಚ್, ಜೇಡನ್ ಸೀಲ್ಸ್, ರೇಮನ್ ರೈಫರ್, ಎನ್ಕ್ರುಮಾ ಬೋನರ್

Story first published: Thursday, December 8, 2022, 18:05 [IST]
Other articles published on Dec 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X