AUS vs WI 2nd Test : ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ ಅಡಿಲೇಡ್ ಟೆಸ್ಟ್: 3ನೇ ದಿನದಾಟ, Live ಸ್ಕೋರ್

ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಮೂರನೇ ದಿನದಾಟ ಆರಂಭವಾಗಿದೆ. ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಆಸ್ಟ್ರೇಲಿಯಾ ಪಡೆ ಇದೀಗ ಬೌಲಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡುತ್ತಿದೆ. ವಿಂಡೀಸ್ ತಂಡದ ವಿರುದ್ಧ ಬೃಹತ್ ರನ್‌ಗಳಿಸಿರುವ ಆಸಿಸ್ ಪಡೆ ಪ್ರಮುಖ ವಿಕೆಟ್‌ಗಳನ್ನು ಕೂಡ ಬೇಗನೆ ಪಡೆಯುತ್ತಾ ಮೊದಲ ಇನ್ನಿಂಗ್ಸ್‌ಲ್ಲಿ ಭಾರೀ ಮುನ್ನಡೆ ಸಾಧಿಸುವ ನಿರೀಕ್ಷೆಯಲ್ಲಿದೆ.
ಎರಡನೇ ದಿನದಾಟದಲ್ಲಿ ಲ್ಯಾಬುಶೈನ್ ಹಾಗೂ ಟ್ರೆವಿಸ್ ಹೆಡ್ ಅವರ ಅಮೋಘ ಶತಕದಿಂದಾಗಿ 511 ರನ್‌ಗಳನ್ನು ಗಳಿಸಿದ ಆಸ್ಟ್ರೇಲಿಯಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಬ್ಯಾಟಿಂಗ್ ನಡೆಸುತ್ತಿರುವ ವೆಸ್ಟ್ ಇಂಡೀಸ್ ಎರಡನೇ ಇನ್ನಿಂಗ್ಸ್‌ನ ಅಂತ್ಯಕ್ಕೆ 102 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಮೂಲಕ ಸಂಕಷ್ಟದಲ್ಲಿದೆ. ಇನ್ನುಮೂರನೇ ದಿನದಾಟದ ಆರಂಭದಲ್ಲಿಯೇ ವೆಸ್ಟ್ ಇಂಡೀಸ್ ಮತ್ತೊಂದು ವಿಕೆಟ್ ಕಳೆದುಕೊಂಡಿದೆ.
Live ಸ್ಕೋರ್‌ಕಾರ್ಡ್ ಹೀಗಿದೆ
ಇನ್ನು ಈ ಪಂದ್ಯದಲ್ಲಿನ ಅಮೋಘ ಶತಕದೊಂದಿಗೆ ಮಾರ್ನಸ್ ಲ್ಯಾಬುಶೈನ್ ಟೆಸ್ಟ್ ಮಾದರಿಯಲ್ಲಿ 3000 ರನ್‌ಗಳ ಗಡಿದಾಟಿದ್ದಾರೆ. ಈ ಸಾಧನೆಯೊಂದಿಗೆ ಐತಿಹಾಸಿಕ ದಾಖಲೆಯನ್ನು ಕೂಡ ಮಾರ್ನಸ್ ಬರೆದಿದ್ದು ಈ ಸಾಧನೆಯನ್ನು ಅತ್ಯಂತ ವೇಗವಾಗಿ ಮಾಡಿದ ಕ್ರಿಕೆಟಿಗರ ಪೈಕಿ ಎರಡನೇ ಸ್ಥಾನವನ್ನು ಜಂಟಿಯಾಗಿ ಪಡೆದುಕೊಂಡಿದ್ದಾರೆ. 51 ಇನ್ನಿಂಗ್ಸ್‌ಗಳಲ್ಲಿ ಮಾರ್ಸನ್ ಈ ಸಾಧನೆ ಮಾಡಿದ್ದು 1948ರಲ್ಲಿ ವೆಸ್ಟ್ ಇಂಡೀಸ್‌ನ ಎವರ್ಟನ್ ವೀಕ್ಸ್ ಕೂಡ ಇಷ್ಟೇ ಇನ್ನಿಂಗ್ಸ್‌ಗಳಲ್ಲಿ 3000 ರನ್‌ಗಳ ಮೈಲಿಗಲ್ಲು ದಾಟಿದ್ದರು.
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮೈಕೆಲ್ ನೆಸರ್, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಮಾರ್ಕಸ್ ಹ್ಯಾರಿಸ್, ಲ್ಯಾನ್ಸ್ ಮೋರಿಸ್
ವೆಸ್ಟ್ ಇಂಡೀಸ್ ಆಡುವ ಬಳಗ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ಶಮರ್ ಬ್ರೂಕ್ಸ್, ಜೆರ್ಮೈನ್ ಬ್ಲಾಕ್‌ವುಡ್, ಡೆವೊನ್ ಥಾಮಸ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ರೋಸ್ಟನ್ ಚೇಸ್, ಅಲ್ಜಾರಿ ಜೋಸೆಫ್, ಆಂಡರ್ಸನ್ ಫಿಲಿಪ್, ಮಾರ್ಕ್ವಿನೋ ಮಿಂಡ್ಲಿ
ಬೆಂಚ್: ಕೈಲ್ ಮೇಯರ್ಸ್, ಕೆಮರ್ ರೋಚ್, ಜೇಡನ್ ಸೀಲ್ಸ್, ರೇಮನ್ ರೈಫರ್, ಎನ್ಕ್ರುಮಾ ಬೋನರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications