WI vs AUS Test: ಮುಂದುವರೆದ ಬೌಲರ್‌ಗಳ ಮೆರೆದಾಟ: ವಿಂಡೀಸ್‌ಗೆ ಇನಿಂಗ್ಸ್ ಮುನ್ನಡೆ
ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಮೊದಲ ಪಂದ್ಯ ರೋಚಕತೆ ಹೆಚ್ಚಿಸಿದೆ. ಎರಡನೇ ದಿನದ ಆಟದಲ್ಲೂ ಬೌಲರ್‌ಗಳ ಮೇಲುಗೈ ಸಾಧಿಸಿದ್ದಾರೆ. ಈ ವೇಳೆ ಆತಿತೇಯ ವೆಸ್ಟ್ ಇಂಡೀಸ್ ತಂಡ ಇನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಸಫಲವಾಗಿದ್ದು, ಆಸ್ಟ್ರೇಲಿಯಾ ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿದೆ.
ಶುಕ್ರವಾರ ವೆಸ್ಟ್ ಇಂಡೀಸ್ ತಂಡ 4 ವಿಕೆಟ್‌ಗಳಿಂದ 57 ರನ್‌ಗಳಿಂದ ಮುಂದುವರೆಸಿ 190 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 10 ರನ್‌ಗಳ ಮುನ್ನಡೆಯನ್ನು ಸಾಧಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಬ್ರಾಡಂ ಕಿಂಗ್ 4 ಬೌಂಡರಿ ಸೇರಿದಂತೆ 26 ರನ್ ಸಿಡಿಸಿ ಔಟ್ ಆದರು. ಆರನೇ ವಿಕೆಟ್‌ಗೆ ರೋಸ್ಟನ್ ಚೇಸ್ ಹಾಗೂ ಶಾಯ್ ಹೋಪ್ ಜೋಡಿ ಆರನೇ ವಿಕೆಟ್‌ಗೆ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳು ವಿಫಲರಾದರು.

ಆರನೇ ವಿಕೆಟ್‌ಗೆ ರೋಸ್ಟನ್ ಚೇಸ್ ಹಾಗೂ ಶಾಯ್ ಹೋಪ್ ಜೋಡಿ 138 ಎಸೆತಗಳಲ್ಲಿ 67 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ರೋಸ್ಟನ್ ಚೇಸ್ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿ ಪ್ಯಾಟ್ ಕಮಿನ್ಸ್ ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು ಭರವಸೆಯ ಆಟಗಾರ ಶಾಯ್ ಹೋಪ್ 5 ಬೌಂಡರಿ ನೆರವಿನಿಂದ 48 ರನ್ ಬಾರಿಸಿ ಔಟ್ ಆದರು.
ಕೆಳ ಕ್ರಮಾಂಕದಲ್ಲಿ ಅಲ್ಜಾರಿ ಜೋಸೆಫ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಇವರ ಸಮಯೋಚಿತ ಬ್ಯಾಟಿಂಗ್ ಕಾರಣದಿಂದಾಗಿ ವಿಂಡೀಸ್ ಇನಿಂಗ್ಸ್ ಮುನ್ನಡೆ ಸಾಧಿಸುವಲ್ಲಿ ಸಫಲವಾಯಿತು. ಇನಿಂಗ್ಸ್ ಮುನ್ನಡೆ ಸಾಧಿಸುವ ಆಸ್ಟ್ರೇಲಿಯಾ ಆಸೆ ಮಣ್ಣು ಪಾಲಾಯಿತು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 3, ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮಿನ್ಸ್, ಬ್ಯೂ ವೆಬ್ ಸ್ಟಾರ್ ತಲಾ ಎರಡು ವಿಕೆಟ್ ಕಬಳಿಸಿದರು.
ಕಳಪೆ ಆರಂಭ
ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾದ ಆರಂಭ ಕಳಪೆಯಾಗಿತ್ತು. ಆರಂಭಿಕ ಸ್ಯಾಮ್ ಕಾನ್ಸ್ಟಾಸ್ (5), ಉಸ್ಮಾನ್ ಖವಾಜ್ (15) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕ್ಯಾಮರೂನ್ ಗ್ರೀನ್ (15), ಜೋಶ್ ಇಂಗ್ಲಿಂಷ್ (12) ರನ್ ಕಲೆ ಹಾಕುವಲ್ಲಿ ವಿಫಲರಾದರು. ಆಸ್ಟ್ರೇಲಿಯಾ 65 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಟ್ರಾವಿಸ್ ಹೆಡ್ ಅಜೇಯ 13, ಬ್ಯೂ ವೆಬ್ ಸ್ಟಾರ್ ಅಜೇಯ 19 ರನ್ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ವೇಳೆ ವೆಸ್ಟ್ ಇಂಡೀಸ್ ತಂಡದ ಬೌಲರ್‌ಗಳು ತಲಾ ಒಂದು ವಿಕೆಟ್ ಪಡೆದರು. ಶುಕ್ರವಾರದ ಆಟದ ಮುಕ್ತಾಯಕ್ಕೆ ಆಸೀಸ್ 4 ವಿಕೆಟ್ ನಷ್ಟಕ್ಕೆ 92 ರನ್ ಕಲೆ ಹಾಕಿದೆ.
ಮೂರನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಎಷ್ಟು ರನ್‌ಗಳ ಮುನ್ನಡೆ ಸಾಧಿಸುತ್ತದೆ ಎಂಬುದೇ ಕುತೂಹಲ ಮೂಡಿದಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications