AUS vs WI 1st Test : ಆಸ್ಟ್ರೇಲಿಯಾ vs ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ: ಮೂರನೇ ದಿನದಾಟ, Live ಸ್ಕೋರ್

ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಆರಂಭವಾಗಿದೆ. ಮೊದಲ ಎರಡು ದಿನಗಳಲ್ಲಿ ಆಸ್‌ಟರೇಲಿಯಾ ಸಂಪೂರ್ಣ ಮೇಲುಗೈ ಸಾಧಿಸಿದ್ದು ಮೂರನೇ ದಿನ ಬೌಲಿಂಗ್‌ನಲ್ಲಿ ಅದನ್ನು ಮುಂದುವರಿಸುವ ಹುಮ್ಮಸ್ಸಿನಲ್ಲಿದೆ. ಮೊದಲ ಹಾಗೂ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾದ ದಾಂಡಿಗರು ನೀಡಿದ ಅಮೋಘ ಪ್ರದರ್ಶನದಿಂದಾಗಿ ಆಸಿಸ್ ಪಡೆ ಸುಸ್ಥಿತಿಯಲ್ಲಿದೆ. ಇನ್ನು ವೆಸ್ಟ್ ಇಂಡೀಸ್ ಬ್ಯಾಟಿಂಗ್ ಆರಂಭಿಸಿದ್ದು ಮೊದಲ ದಿನ ವಿಕೆಟ್ ಕಳೆದುಕೊಳ್ಳದೆ 74 ರನ್‌ಗಳಿಸಿ ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿತ್ತು.
ಆಸ್ಟ್ರೇಲಿಯಾದ ಆಟಗಾರ ಮಾರ್ನಸ್ ಲ್ಯಾಬುಶೈನ್ ಹಾಗೂ ಸ್ಟೀವ್ ಸ್ಮಿತ್ ಮೊದಲ ಇನ್ನಿಂಗ್ಸ್‌ನಲ್ಲಿ ಅಮೋಘ ದ್ವಿಶತಕ ದಾಖಲಿಸಿ ಮಿಂಚಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮಾರ್ನಸ್ ಮೊದಲಿಗೆ ಉಸ್ಮಾನ್ ಖವಾಜಾ ಜೊತೆಗೆ ಅದ್ಭುತ ಜೊತೆಯಾಟದಲ್ಲಿ ಭಾಗಿಯಾದರೆ ಬಳಿಕ ಸ್ಟೀವ್ ಸ್ಮಿತ್ ಅವರೊಂದಿಗೆ ಅಮೋಘ ಪ್ರದರ್ಶನ ನೀಡಿದರು. ಸ್ಟೀವ್ ಸ್ಮಿತ್ ಹಾಗೂ ಲ್ಯಾಬುಶೈನ್ ಜೋಡಿ ಬರೊಬ್ಬರಿ 251 ರನ್‌ಗಳ ಜೊತೆಯಾಟವನ್ನು ನೀಡಿದರು. ಲ್ಯಾಬುಶೈನ್ 204 ರನ್‌ಗಳಿಸಿದರೆ ಸ್ಟೀವ್ ಸ್ಮಿತ್ 200 ರನ್‌ಗಳಿಸಿ ಅಜೇಯವಾಗುಳಿದರು. ಇನ್ನು ಟ್ರೆವೀಸ್ ಹೆಡ್ ಕೇವಲ ಒಂದು ರನ್‌ನಿಂದ ಶತಕ ವಂಚಿತವಾಗಿ ನಿರಾಸೆ ಅನುಭವಿಸಿದರು.
Live ಸ್ಕೋರ್ ಹೀಗಿದೆ
ಇನ್ನು ಆಸ್ಟ್ರೇಲಿಯಾ ಡಿಕ್ಲೆರ್ ಮಾಡಿದ ಬಳಿಕ ಬ್ಯಾಟಿಂಗ್ ಆರಂಭಿಸಿರುವ ವೆಸ್ಟ್ ಇಂಡೀಸ್ ಕೂಡ ಉತ್ತಮವಾದ ಆರಂಭವನ್ನು ಪಡೆದುಕೊಂಡಿತು. ಮಾಜಿ ಕ್ರಿಕೆಟಿಗ ಶಿವ್‌ನರೈನ್ ಚಂದರ್‌ಪಾಲ್ ಪುತ್ರ ಟ್ಯಾಗೆನರೈನ್ ಚಂದರ್‌ಪಾಲ್ ಮೊದಲ ಪಂದ್ಯದಲ್ಲಿಯೇ ಭರವಸೆಯ ಪ್ರದರ್ಶನ ನೀಡಿದ್ದಾರೆ. 47 ರನ್‌ಗಳಿಸಿ ಅಜೇಯವಾಗುಳಿದಿರುವ ಅವರು ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿಕೊಂಡಿದ್ದರು. ಆದರೆ ಮೂರನೇ ದಿನದಾಟದ ಆರಂಭಿಕ ಹಂತದಲ್ಲಿಯೇ ಅವರು ಅರ್ಧ ಶತಕವನ್ನು ಪೂರ್ಣಗೊಳಿಸಿದ ಬಳಿಕ ವಿಕೆಟ್ ಕಳೆದುಕೊಂಡಿದ್ದಾರೆ. ನಾಯಕ ಕ್ರೇಗ್ ಬ್ರಾತ್‌ವೈಟ್ ಕ್ರೀಸ್‌ನಲ್ಲಿದ್ದಾರೆ.
ಆಸ್ಟ್ರೇಲಿಯಾ ಆಡುವ ಬಳಗ: ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್
ಬೆಂಚ್: ಸ್ಕಾಟ್ ಬೋಲ್ಯಾಂಡ್, ಮಾರ್ಕಸ್ ಹ್ಯಾರಿಸ್
ವೆಸ್ಟ್ ಇಂಡೀಸ್: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಟಗೆನರೈನ್ ಚಂದ್ರಪಾಲ್, ಎನ್ಕ್ರುಮಾ ಬೊನ್ನರ್, ಜೆರ್ಮೈನ್ ಬ್ಲಾಕ್‌ವುಡ್, ರೋಸ್ಟನ್ ಚೇಸ್, ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಕೆಮರ್ ರೋಚ್, ಜೇಡನ್ ಸೀಲ್ಸ್
ಬೆಂಚ್: ಡೆವೊನ್ ಥಾಮಸ್, ರೇಮನ್ ರೀಫರ್, ಶಮರ್ ಬ್ರೂಕ್ಸ್, ಆಂಡರ್ಸನ್ ಫಿಲಿಪ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications