For Quick Alerts
ALLOW NOTIFICATIONS  
For Daily Alerts
 

IND W vs AUS W: 54 ರನ್‌ಗಳ ಭರ್ಜರಿ ಜಯ ಸಾಧಿಸಿದ ಆಸ್ಟ್ರೇಲಿಯಾ, 4-1 ರಲ್ಲಿ ಸರಣಿ ವಶಕ್ಕೆ

Australia Women Beat Indian Women By 54 Runs And Clinch The Series By 4-1

ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಗಳ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರು 54 ರನ್‌ಗಳ ಭರ್ಜರಿ ಜಯ ಸಾಧಿಸಿದ್ದಾರೆ.

ಮಂಗಳವಾರ (ಡಿಸೆಂಬರ್ 20) ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರು ನೀಡಿದ 197 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತದ ವನಿತೆಯರು 20 ಓವರ್‌ಗಳಲ್ಲಿ142 ರನ್ ಗಳಿಸಿ ಆಲೌಟ್ ಆಗುವ ಮೂಲಕ ಸೋಲನುಭವಿಸಿದರು.

5 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 4-1 ಅಂತರದಲ್ಲಿ ಗೆದ್ದುಕೊಂಡಿತು. ಭಾರತ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಸರಣಿಯ ಎರಡನೇ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾದಾಗ ಸೂಪರ್ ಓವರ್‌ನಲ್ಲಿ ಭಾರತದ ವನಿತೆಯರು ಜಯ ಗಳಿಸಿದ್ದರು.

ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭದಲ್ಲಿ ಬೆತ್ ಮೂನಿ ಮತ್ತು ಫೋಬೆ ಲಿಚ್‌ಫೀಲ್ಡ್ ವಿಕೆಟ್ ಕಳೆದುಕೊಂಡರು ನಂತರ ಚೇತರಿಸಿಕೊಂಡಿತು.

Australia Women Beat Indian Women By 54 Runs And Clinch The Series By 4-1

ಆಶ್ಲೀಗ್ ಗಾರ್ಡ್ನರ್, ಗ್ರೇಸ್ ಹ್ಯಾರಿಸ್ ಬ್ಯಾಟಿಂಗ್ ಮಿಂಚು

ತಾಹ್ಲಿಯಾ ಮೆಕ್‌ಗ್ರಾತ್(26) ಮತ್ತು ಎಲಿಸ್ಸೆ ಪೆರ್ರಿ (18) ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. 9.4 ಓವರ್‌ಗಳಲ್ಲಿ 67 ರನ್‌ಗಳಾಗುವಷ್ಟರಲ್ಲಿ ಈ ಇಬ್ಬರು ಔಟಾಗಿದ್ದರು.

ಆದರೆ ನಂತರ ಬಂದ ಆಶ್ಲೀಗ್ ಗಾರ್ಡ್ನರ್ 32 ಎಸೆತಗಳಲ್ಲಿ 66 ರನ್ ಗಳಿಸಿದರೆ, ಗ್ರೇಸ್ ಹ್ಯಾರಿಸ್ 35 ಎಸೆತಗಳಲ್ಲಿ 64 ರನ್ ಬಾರಿಸಿ 5ನೇ ವಿಕೆಟ್‌ ಜೊತೆಯಾಟದಲ್ಲಿ 129 ರನ್ ಕಲೆಹಾಕಿದರು.

ಭಾರತ ತಂಡದ ಪರ ಬೌಲಿಂಗ್‌ನಲ್ಲಿ ಅಂಜಲಿ ಸರ್ವಾನಿ, ದೀಪ್ತಿ ಶರ್ಮಾ, ಶಫಾಲಿ ವರ್ಮಾ ಮತ್ತು ದೇವಿಕಾ ವೈದ್ಯ ತಲಾ ಒಂದು ವಿಕೆಟ್ ಪಡೆದರು. ಆದರೆ ಯಾವ ಬೌಲರ್ ಕೂಡ ಆಸ್ಟ್ರೇಲಿಯಾದ ರನ್ ಗಳಿಕೆಗೆ ಕಡಿವಾಣ ಹಾಕಲಿಲ್ಲ.

Australia Women Beat Indian Women By 54 Runs And Clinch The Series By 4-1

ಕೈಕೊಟ್ಟ ಭಾರತದ ಬ್ಯಾಟಿಂಗ್

197 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಯಾವುದೇ ಹಂತದಲ್ಲಿಯೂ ಹೋರಾಟದ ಮನೋಭಾವ ತೋರಲಿಲ್ಲ. ದೀಪ್ತಿ ಶರ್ಮಾ 34 ಎಸೆತಗಳಲ್ಲಿ 53 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರು.

ಸ್ಮೃತಿ ಮಂದಾನ ಕೇವಲ 4 ರನ್ ಗಳಿಸಿ ಔಟಾದರು. ಶೆಫಾಲಿ ವರ್ಮಾ (13), ಹರ್ಮನ್‌ಪ್ರೀತ್ ಕೌರ್ (12), ಹರ್ಲೀನ್ ಡಿಯೋಲ್ (24), ರಿಚಾ ಘೋಷ್ (10) ರನ್ ಗಳಿಸಿದರು.

Story first published: Tuesday, December 20, 2022, 22:49 [IST]
Other articles published on Dec 20, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+