'ಮಿಸ್‌ವರ್ಲ್ಡ್ ಆಸ್ಟ್ರೇಲಿಯಾ' ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಸಿಸ್ ಕ್ರಿಕೆಟಿಗ

ಆಸ್ಟ್ರೇಲಿಯಾ ಕ್ರಿಕೆಟಿಗ ಬೆನ್ ಕಟ್ಟಿಂಗ್ ಮಾಜಿ ವಿಶ್ವ ಸುಂದರಿ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್‌ನ ಸೀಮಿತ ಓವರ್‌ಗಳ ತಂಡವನ್ನು ಪ್ರತಿನಿಧಿಸಿರುವ ಬೆನ್ ಕಟ್ಟಿಂಗ್ ಆಸ್ಟ್ರೇಲಿಯಾದ ಮಾಜಿ ವಿಶ್ವಸುಂದರಿ ಎರಿನ್ ಹೋಲಾಂಡ್ ಅವರನ್ನು ವರಿಸಿದ್ದಾರೆ.
ಈ ಜೋಡಿ ಈ ಈ ಹಿಂದೆ ಎರಡು ಬಾರಿ ಮದುವೆಗೆ ದಿನಾಂಕ ನಿಗದಿ ಮಾಡಿ ಬಳಿಕ ಕೊರೊನಾ ವೈರಸ್‌ನ ಕಾರಣದಿಂದಾಗಿ ಮುಂದೂಡಿದ್ದರು. ದೀರ್ಘ ಕಾಲದಿಂದ ಪ್ರೇಮಿಸುತ್ತಿದ್ದ ಈ ಜೋಡಿ ಈಗ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿರುವ ಬೆನ್ ಕಟ್ಟಿಂಗ್ ಇತ್ತೀಚೆಗಷ್ಟೇ ಅಂತ್ಯವಾದ ಆಸ್ಟ್ರೇಲಿಯಾದ ಕ್ರಿಕೆಟ್ ಲೀಗ್ ಬಿಗ್‌ಬ್ಯಾಷ್‌ನಲ್ಲಿ ಬೃಹತ್ ಸಿಕ್ಸರ್ ಮೂಲಕ ಸುದ್ದಿಯಾಗಿದ್ದರು. ಸದ್ಯ ಪ್ರಥಮ ದರ್ಜೆ ಹಾಗೂ ಕ್ಲಬ್ ಕ್ರಿಕೆಟ್‌ನಲ್ಲಿ ಆಡುತ್ತಿರುವ ಬೆನ್ ಕಟ್ಟಿಂಗ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಮತ್ತೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಆಸ್ಟ್ರೇಲಿಯಾ ತಂಡದ ಪರವಾಗಿ ನಾಲ್ಕು ಏಕದಿನ ಹಾಗೂ ಏಳು ಟಿ20 ಪಂದ್ಯಗಳಲ್ಲಿ ಬೆನ್ ಕಟ್ಟಿಂಗ್ ಕಣಕ್ಕಿಳಿದಿದ್ದರು. ಐಪಿಎಲ್‌ನಲ್ಲೂ ಆಡಿದ ಅನುಭವ ಹೊಂದಿದ್ದಾರೆ ಬೆನ್ ಕಟ್ಟಿಂಗ್. 2014ರಿಮದ 2019ರ ವರೆಗೆ 21 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ ಬೆನ್ ಕಟ್ಟಿಂಗ್.
ಇನ್ನು ಎರಿನ್ ಹೋಲಾಂಡ್ 2013ರಲ್ಲಿ ಮಿಸ್‌ವರ್ಲ್ಡ್ ಆಸ್ಟ್ರೇಲಿಯಾದ ವಿಜೇತೆಯಾಗಿ ಹೊರಹೊಮ್ಮಿದ್ದರು. ಮಾಡೆಲ್ ಆಗಿಯೂ ಖ್ಯಾತರಾಗಿರುವ ಎರಿನ್ ಟಿವಿ ಶೋಗಳಲ್ಲಿಯೂ ನಿರೂಪಕರಾಗಿ ಕರ್ತವ್ಯ ನಿರ್ವಹಿಸಿ ಖ್ಯಾತರಾಗಿದ್ದಾರೆ. ಇವರು ಹಾಡುಗಾರ್ತಿಯಾಗಿಯೂ ಖ್ಯಾತರಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications