ಟೆಸ್ಟ್ ಕ್ರಿಕೆಟ್‌ನ ಘನತೆಯೂ ಇಲ್ಲ, ಟಿ20ಯ ಮಜವೂ ಇಲ್ಲ: ಏಕದಿನ ಕ್ರಿಕೆಟ್ ಸಾಯುತ್ತಿದೆ ಎಂದ ಆಸಿಸ್ ಕ್ರಿಕೆಟಿಗ!

ವಿಶ್ವ ಕ್ರಿಕೆಟ್‌ನಲ್ಲಿ ಈಗ ಮೂರು ಮಾದರಿಯ ಕ್ರಿಕೆಟ್‌ನ ಪ್ರಸ್ತುತತೆಯ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ ಏಕದಿನ ಕ್ರಿಕೆಟ್ ಸಾಯುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಉಸ್ಮಾನ್ ಖವಾಜ ಕೂಡ ಅದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ನಿಧಾನವಾಗಿ ಸಾಯುತ್ತಿದೆ ಎಂದು ಹೇಳಿರುವ ಉಸ್ಮಾನ್ ಖವಾಜ ಈ ಮಾದರಿ ತನಗೆ ಇಷ್ಟವಿಲ್ಲ ಎಂದಿದ್ದಾರೆ. ಉಸ್ಮಾನ್ ಖವಾಜ ವಿಶ್ವಾದ್ಯಂತ ಗಲವು ಟಿ20 ಲೀಗ್‌ಗಳಲ್ಲಿ ಆಡುತ್ತಿದ್ದು ಆಸ್ಟ್ರೇಲಿಯಾ ಟೆಸ್ಟ್ ತಂಡದ ಪರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಏಕದಿನ ಕ್ರಿಕೆಟ್ ವೈಯಕ್ತಿಕವಾಗಿ ಇಷ್ಟವಿಲ್ಲ ಎಂದು ನೇರವಾಗಿ ಹೇಳಿಕೊಂಡಿದ್ದಾರೆ.

ನಿಧಾನಕ್ಕೆ ಸಾಯುತ್ತಿದೆ ಏಕದಿನ ಕ್ರಿಕೆಟ್
ನನ್ನ ಪ್ರಕಾರ ಏಕದಿನ ಕ್ರಿಕೆಟ್ ನಿಧಾನಕ್ಕೆ ಸಾಯುತ್ತಿದೆ. ವಿಶ್ವಕಪ್ ಇನ್ನು ಕೂಡ ನಡೆಯುತ್ತಿದೆ. ಅದು ಮಾತ್ರವೇ ನಿಜಕ್ಕೂ ಮಜವನ್ನು ನೀಡುತ್ತದೆ. ಅದನ್ನು ನೋಡಲು ಸಂತಸವಾಗುತ್ತದೆ. ಆದರೆ ಅದನ್ನು ಹೊರತುಪಡಿಸಿ ವೈಯಕ್ತಿಕವಾಗಿ ನನಗೂ ಏಕದಿನ ಮಾದರಿ ಇಷ್ಟವಿಲ್ಲ. ನಾನು ಕೂಡ ಬಹುಷಃ ಏಕದಿನ ಮಾತ್ರಯಲ್ಲಿ ಮುಂದುವರಿಯಲಾರೆ" ಎಂದಿದ್ದಾರೆ ಆಸ್ಟ್ರೇಲಿಯಾದ ಟೆಸ್ಟ್ ಸ್ಪೆಶಲಿಸ್ಟ್ ಉಸ್ಮಾನ್ ಖವಾಜ.

ಸ್ಟೋಕ್ಸ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಬಗ್ಗೆ ಖವಾಜ ಪ್ರತಿಕ್ರಿಯೆ
ಇತ್ತೀಚೆಗಷ್ಟೇ ಇಂಗ್ಲೆಂಡ್ ತಂಡದ ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಏಕದಿನ ಮಾದರಿಗೆ ನಿವೃತ್ತಿ ಘೋಷಿಸಿದರು. ಈ ಸಂದರ್ಭದಲ್ಲಿ ಅವರು ಮೂರು ಮಾದರಿಯಲ್ಲಿಯೂ ಆಡುವುದು ತನ್ನಿಂದ ಅಸಾಧ್ಯ ಎಂಬುದನ್ನು ಹೇಳಿಕೊಂಡಿದ್ದರು. ಇದಕ್ಕೆ ಖವಾಜ ಬೆಂಬಲ ವ್ಯಕ್ತಪಡಿಸಿದ್ದಾರೆ. "ಪ್ರಸ್ತುತ ಟಿ20 ವಿಶ್ವಕಪ್ ಹತ್ತಿರದಲ್ಲಿರುವ ಕಾರಣ ಏಕದಿನ ಮಾದರಿ ನಿಜಕ್ಕೂ ಪ್ರಮುಖವಲ್ಲ ಎನಿಸುತ್ತದೆ. ಎಲ್ಲಾ ಮಾದರಿಯಲ್ಲಿಯೂ ಆಡಲು ಸಾಧ್ಯವಾಗದ ಕಾರಣ ಯಾವುದಾದರೂ ಒಂದನ್ನು ಬಿಟ್ಟುಕೊಡಬೇಕಾಗುತ್ತದೆ" ಎಂದಿದ್ದಾರೆ ಉಸ್ಮಾನ್ ಖವಾಜ.

ಟಿ20 ಕ್ರಿಕೆಟ್‌ನ ಮಜವಿಲ್ಲ
"ಟೆಸ್ಟ್ ಮಾದರಿ ಕ್ರಿಕೆಟ್‌ನ ಅತ್ಯುನ್ನತ ಮಾದರಿಯಾಗಿದೆ. ಅದನ್ನು ಕಿರೀಟ ಎಂದು ಪರಿಗಣಿಸಬಹುದು. ಟಿ20 ಕ್ರಿಕೆಟ್ ಸಾಕಷ್ಟು ಲೀಗ್‌ಗಳನ್ನು ಹೊಂದಿದ್ದು ಅದ್ಭುತವಾದ ಮನರಂಜನೆಯಾಗಿದೆ. ಎಲ್ಲರೂ ಕೂಡ ಅದನ್ನು ಆನಂದಿಸುತ್ತಾರೆ.ಆದರೆ ಏಕದಿನ ಕ್ರಿಕೆಟ್ ನನ್ನ ಪ್ರಕಾರ ಮೂರನೇ ಕ್ರಮಾಂಕದಲ್ಲಿ ಬರುತ್ತದೆ ಎಂದಿದ್ದಾರೆ. ಈ ಮಾದರಿಯಲ್ಲಿ ಟೆಸ್ಟ್ ಕ್ರಿಕೆಟ್‌ನ ಘನತೆಯೂ ಇಲ್ಲ, ಟಿ20 ಮಾದರಿಯ ಮಜವೂ ಇಲ್ಲ" ಎಂದಿದ್ದಾರೆ ಆಸ್ಟ್ರೇಲಿಯಾದ ಅನುಭವಿ ಆಟಗಾರ ಉಸ್ಮಾನ್ ಖವಾಜ

ವಾಸಿಮ್ ಅಕ್ರಮ್ ಅಭಿಪ್ರಾಯವೂ ಇದೇ!
ಇನ್ನು ಮಾಜಿ ಕ್ರಿಕೆಟಿಗ ಪಾಕಿಸ್ತಾನದ ದಿಗ್ಗಜ ಆಟಗಾರ ವಾಸಿಮ್ ಅಕ್ರಮ್ ಕೂಡ ಇತ್ತೀಚೆಗೆ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. "ಏಕದಿನ ಕ್ರಿಕೆಟ್ ಜನಪ್ರಿಯತೆಯನ್ನು ಕಳೆದುಕೊಂಡಿದೆ ಎಂದು ನನಗೆ ಅನಿಸುತ್ತಿದೆ. ಇಂಗ್ಲೆಂಡ್‌ನಲ್ಲಿ ಸ್ಟೇಡಿಯಂಗಳು ಭರ್ತಿಯಾಗುತ್ತಿರಬಹುದು. ಆದರೆ ಭಾರತ, ಪಾಕಿಸ್ತಾನ ಸೇರಿದಂತೆ ಶ್ರೀಲಂಕಾ, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾಗಳಲ್ಲಿ ನಡೆಯುವ ಪಂದ್ಯಗಳಲ್ಲಿ ಸ್ಟೇಡಿಯಂಗಳು ಭರ್ತಿಯಾಗುತ್ತಿಲ್ಲ" ಎಂದು ವಾಸಿಮ್ ಅಕ್ರಮ್ ಖಾಸಗಿ ಸಂವಾದ ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಟಿ20 ಕ್ರಿಕೆಟ್ ಸುಲಭ ಮಾದರಿಯ ಆಟವಾಗಿದೆ. ನಾಲ್ಕು ಗಂಟೆಗಳಲ್ಲಿ ಪಂದ್ಯ ಮುಕ್ತಾಯವಾಗುತ್ತದೆ. ಇನ್ನು ವಿಶ್ವಾದ್ಯಂತ ನಡೆಯುವ ಲೀಗ್ ಕ್ರಿಕೆಟ್‌ಗಳಲ್ಲಿ ಸಾಕಷ್ಟು ಹಣವೂ ದೊರೆಯುತ್ತದೆ. ಇದು ಆಧುನಿಕ ಕ್ರಿಕೆಟ್‌ನ ಭಾಗವಾಗಿದೆ. ಆದರೆ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗಳ ಮಧ್ಯೆ ಏಕದಿನ ಕ್ರಿಕೆಟ್ ಸಾಯುತ್ತಿದೆ. ಆಟಗಾರರಿಗೂ ಏಕದಿನ ಕ್ರಿಕೆಟ್ ಆಡುವುದು ಸುಸ್ತು ಮೂಡಿಸುತ್ತದೆ" ಎಂದಿದ್ದಾರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications