ಆಸ್ಟ್ರೇಲಿಯದ ಸ್ಟಾರ್ ಆಟಗಾರ ಭಾರತದ ಡಿಶ್‌ನ ಫೋಟೋ ಹಂಚಿಕೊಂಡು ಹೇಳಿದ್ದೇನು?

ಕೋಲ್ಕತ್ತಾ ನೈಟ್ ರೈಡರ್ಸ್ ವೇಗಿ ಮತ್ತು ಆಸ್ಟ್ರೇಲಿಯಾದ ಟೆಸ್ಟ್ ನಾಯಕ ಪ್ಯಾಟ್ ಕಮ್ಮಿನ್ಸ್ ಐಪಿಎಲ್ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಆಡಲು ಹಲವಾರು ವರ್ಷಗಳಿಂದ ಭಾರತಕ್ಕೆ ಬರುತ್ತಿದ್ದಾರೆ. ಅದೇ ರೀತಿ 2022ರ ಐಪಿಎಲ್‌ನಲ್ಲಿ ಆಡಲು ಈ ವರ್ಷವೂ ಬಂದಿದ್ದಾರೆ.
ಭಾರತವು ಸಂಸ್ಕೃತಿ ಮತ್ತು ಆಹಾರದಲ್ಲಿ ಉತ್ತಮ ವೈವಿಧ್ಯತೆಯನ್ನು ಹೊಂದಿದೆ. ಭಾರತೀಯ ಆಹಾರದ ರುಚಿ ಪ್ಯಾಟ್ ಕಮ್ಮಿನ್ಸ್ ನಾಲಿಗೆಗೆ ಹಿಡಿಸಿದೆ. ಕಮ್ಮಿನ್ಸ್‌ನ ರುಚಿ ಮೊಗ್ಗುಗಳು ಉಪ-ಖಂಡದಲ್ಲಿ ಅಂತಿಮವಾಗಿ ಜಾಕ್‌ಪಾಟ್ ಅನ್ನು ಹೊಡೆದಿದೆ ಎಂದು ತೋರುತ್ತದೆ.
ಕಮ್ಮಿನ್ಸ್ ಇತ್ತೀಚೆಗೆ ಮುಂಬೈನ ಪ್ರಸಿದ್ಧ ಖಾದ್ಯ 'ಪಾವ್ ಭಾಜಿ'ಯ ಫೋಟೋವನ್ನು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಒಂದೆರಡು ಚಿತ್ರವನ್ನು ರುಚಿಕರವಾದ ಆಹಾರ ಎಮೋಜಿಗಳೊಂದಿಗೆ ಪೋಸ್ಟ್ ಮಾಡಿದ್ದಾರೆ. ಟ್ವೀಟ್ ತಕ್ಷಣವೇ ಅವರ ಅಭಿಮಾನಿಗಳಿಗೆ ಸಂತೋಷ ತರಿಸಿದೆ. ಏಕೆಂದರೆ ಅದನ್ನು ಹಲವಾರು ಬಾರಿ ಲೈಕ್ ಮಾಡಿ, ರೀಟ್ವೀಟ್ ಮತ್ತು ಕಾಮೆಂಟ್ ಮಾಡಿದ್ದಾರೆ.

ಟ್ವಿಟ್ಟರ್ ಬಳಕೆದಾರರು ಪ್ಯಾಟ್ ಕಮ್ಮಿನ್ಸ್ ಅವರನ್ನು ಪಾವ್ ಭಾಜಿ ಭಕ್ಷ್ಯದ ಕುರಿತು ತಮ್ಮ ಪ್ರತಿಕ್ರಿಯೆಯನ್ನು ನೀಡಲು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮ್ಮಿನ್ಸ್, "ವಾವ್, ನಾನು 11 ವರ್ಷಗಳಿಂದ ಭಾರತಕ್ಕೆ ಬರುತ್ತಿದ್ದೇನೆ, ನಾನು ಅದನ್ನು ಹಿಂದೆಂದೂ ಪ್ರಯತ್ನಿಸಲಿಲ್ಲ! ರುಚಿಕರವಾಗಿದೆ," ಎಂದು ಟ್ವೀಟ್ ಮಾಡಿದ್ದಾರೆ.
ಪ್ಯಾಟ್ ಕಮ್ಮಿನ್ಸ್ ಐಪಿಎಲ್ 2022ರಲ್ಲಿ ಕೆಕೆಆರ್ ಪರವಾಗಿ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿದರು. ಈ ಋತುವಿನ ಮೊದಲ ಪಂದ್ಯದಲ್ಲಿ 14 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು ಮತ್ತು ಐಪಿಎಲ್‌ನಲ್ಲಿ ವೇಗವಾಗಿ 50 ರನ್ ಗಳಿಸಿದ ದಾಖಲೆಯನ್ನು ಸಮಗಟ್ಟಿದರು. ಈದು ಕೆಕೆಆರ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಹಾಯವಾಯಿತು.

ಆದರೆ ನಂತರ ಕೆಕೆಆರ್ ತಂಡ ಸತತ 5 ಪಂದ್ಯಗಳನ್ನು ಸೋತಿದ್ದರಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸಿತು. ಇದು ಪ್ಯಾಟ್ ಕಮ್ಮಿನ್ಸ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಲಾಯಿತು.
ಕೆಕೆಆರ್ ತನ್ನ ಕೊನೆಯ ಪಂದ್ಯವನ್ನು ಗೆದ್ದರೂ ಈಗ 10 ಪಂದ್ಯಗಳಿಂದ 8 ಅಂಕಗಳನ್ನು ಗಳಿಸಿದೆ ಮತ್ತು ಒಟ್ಟು 10 ತಂಡಗಳ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಪ್ಲೇ-ಆಫ್‌ಗೆ ಪ್ರವೇಶಿಸಲು ಯಾವುದೇ ಅವಕಾಶ ಗಳಿಸಬೇಕೆಂದರೆ ಕೆಕೆಆರ್ ತಮ್ಮ ಉಳಿದ 4 ಪಂದ್ಯಗಳನ್ನು ಭಾರೀ ರನ್‌ರೇಟ್ ಅಂತರದಲ್ಲಿ ಗೆಲ್ಲಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications