Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೂರನೇ ಟೆಸ್ಟ್ : ಜಡೇಜ ಬದಲಿಗೆ ಅಕ್ಷರ್ ಪಟೇಲ್ ಗೆ ಅವಕಾಶ

ಕೊಲಂಬೋ, ಆಗಸ್ಟ್ 09 : ಐಸಿಸಿ ಆಲ್ ರೌಂಡರ್, ಬೌಲರ್ ಕ್ರಮಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಭಾರತದ ರವೀಂದ್ರ ಜಡೇಜ ಅವರು ಶ್ರೀಲಂಕಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಶ್ರೀಲಂಕಾ ವಿರುದ್ಧ 3ನೇ ಟೆಸ್ಟ್ ಆಡದಂತೆ ಜಡೇಜಗೆ ನಿರ್ಬಂಧ

ಎರಡನೇ ಟೆಸ್ಟ್ ಪಂದ್ಯದ ವೇಳೆ ಐಸಿಸಿ ನಿಯಮ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿದ್ದು, ಒಂದು ಪಂದ್ಯ ನಿಷೇಧಗೊಳಗಾಗಿದ್ದಾರೆ.

ರವೀಂದ್ರ ಜಡೇಜ ಅವರ ಬದಲಿಗೆ ಮೂರನೇ ಟೆಸ್ಟ್ ಪಂದ್ಯಕ್ಕೆ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಆಯ್ಕೆ ಬಹುತೇಕ ಖಚಿತವಾಗಿದೆ. ಆದರೂ, ಜಡೇಜ ಅವರ ಬದಲಿಗೆ ಸ್ಪಿನ್ನರ್ ಅಕ್ಷರ್ ಪಟೇಲ್ ಅವರು ತಂಡವನ್ನು ಸೇರುತ್ತಿದ್ದಾರೆ.

ಟೆಸ್ಟ್ ಕ್ರಿಕೆಟ್ ನಂ.1 ಆಲ್ ರೌಂಡರ್ ಪಟ್ಟಕ್ಕೇರಿದ ಜಡೇಜ

Axar Patel named Ravindra Jadeja's replacement for Pallekele Test


ಭಾರತ 'ಎ' ತಂಡದಲ್ಲಿದ್ದ ಅಕ್ಷರ್ ಪಟೇಲ್ ಅವರಿಗೆ ದಕ್ಷಿಣ ಆಫ್ರಿಕಾದಿಂದ ಶ್ರೀಲಂಕಾಕ್ಕೆ ಬರುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೂಚಿಸಿದೆ.

ಆಗಸ್ಟ್ 12 ರಂದು ಆರಂಭವಾಗಲಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಕ್ಷರ್‍ ಪಟೇಲ್ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ತಿಳಿಸಿದ್ದಾರೆ.

ಹೆರಾತ್ ಗೆ ವಿಶ್ರಾಂತಿ: ಬೆನ್ನುನೋವಿಗೆ ತುತ್ತಾಗಿರುವ ಸ್ಪಿನ್ನರ್ ರಂಗಣ ಹೆರಾತ್ ಅವರಿಗೆ ವಿಶ್ರಾಂತಿ ನೀಡಲು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ನಿರ್ಧರಿಸಿದೆ. ಹೆರಾತ್‌ ಅನುಪಸ್ಥಿತಿಯಲ್ಲಿ ಆತಿಥೇಯರ ಸ್ಪಿನ್‌ ವಿಭಾಗದ ಜವಾಬ್ದಾರಿ ಮಲಿಂದಾ ಪುಷ್ಪಕುಮಾರ ಅವರು ಹೊರ ಬೇಕಾಗುತ್ತದೆ.

ಆಲ್‌ರೌಂಡರ್‌ ಅಸೆಲಾ ಗುಣರತ್ನೆ, ವೇಗಿ ಸುರಂಗ ಲಕ್ಮಲ್‌ ಮತ್ತು ನುವಾನ್‌ ಪ್ರದೀಪ ಅವರು ಕೂಡಾ ಮೂರನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. (ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+