ಟೆಸ್ಟ್ ಕ್ರಿಕೆಟ್ ನಂ.1 ಆಲ್ ರೌಂಡರ್ ಪಟ್ಟಕ್ಕೇರಿದ ಜಡೇಜ
ಬೆಂಗಳೂರು, ಆಗಸ್ಟ್ 08: ಐಸಿಸಿ ಟೆಸ್ಟ್ ಬೌಲಿಂಗ್ ವಿಭಾಗದಲ್ಲಿ ಅಗ್ರಸ್ಥಾನದಲ್ಲಿರುವ ಜಡೇಜಾ, ಆಲ್‌ರೌಂಡರ್ ವಿಭಾಗದಲ್ಲಿಯೂ ನಂಬರ್ 1 ಪಟ್ಟಕ್ಕೇರಿದ್ದಾರೆ.
ಅತ್ಯಂತ ವೇಗವಾಗಿ 150 ವಿಕೆಟ್ ಕಿತ್ತ ಎಡಗೈ ಬೌಲರ್ ಜಡೇಜ
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 70 ರನ್ ಹಾಗೂ 7 ವಿಕೆಟ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಜಡೇಜ ಬಾಚಿಕೊಂಡರು.

ಐಸಿಸಿ ಆಲ್‌ರೌಂಡರ್ ಪಟ್ಟಿಯಲ್ಲಿ ಜಡೇಜಾ 438 ಅಂಕ ಪಡೆದು ಅಗ್ರಸ್ಥಾನದಲ್ಲಿದ್ದರೆ, ಇತ್ತ 418 ಅಂಕ ಪಡೆದಿರುವ ಅಶ್ವಿನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಾಂಗ್ಲಾದೇಶದ ಶಕಿಬ್ ಅಲ್ ಹಸನ್ 431 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.
32ನೇ ಪಂದ್ಯದಲ್ಲಿ ಜಡೇಜಾ ಅವರು 150 ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಎಡಗೈ ಬೌಲರ್ ಗಳ ಪೈಕಿ ಅತ್ಯಂತ ತ್ವರಿತಗತಿಯಲ್ಲಿ ಈ ಮೈಲಿಗಲ್ಲು ದಾಟಿದ್ದಲ್ಲದೆ, ಅಶ್ವಿನ್ ನಂತರ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.
ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡುತ್ತಿರುವ ಜಡೇಜ ಅವರು ಎರಡನೇ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಗೆ ಎಸೆದ ಥ್ರೋ- ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದು,ಮೂರನೇ ಟೆಸ್ಟ್ ಪಂದ್ಯವಾಡದಂತೆ ಜಡೇಜಗೆ ನಿರ್ಬಂಧ ಹೇರಲಾಗಿದೆ.
Story first published: Wednesday, January 3, 2018, 10:05 [IST]
Other articles published on Jan 3, 2018
Read in English: Jadeja becomes top all-rounder
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications