ಸಿಡ್ನಿಯಲ್ಲಿ ಜನವರಿ 3 ಬುಧವಾರದಿಂದ ಪ್ರಾರಂಭವಾಗುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಟೆಸ್ಟ್ ಸರಣಿಯ ಕೊನೆಯ ಪಂದ್ಯಕ್ಕಾಗಿ ಎರಡೂ ತಂಡಗಳು ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿವೆ.
ಪಾಕಿಸ್ತಾನ ಮೂರನೇ ಟೆಸ್ಟ್ ಪಂದ್ಯದಲ್ಲಿ ಎರಡು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಲಿದೆ. ಮುಂಬರುವ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನ ತನ್ನ ಉಪನಾಯಕ ಶಾಹೀನ್ ಶಾ ಆಫ್ರಿದಿಗೆ ವಿಶ್ರಾಂತಿ ನೀಡಿದೆ. ಆದರೆ ಆರಂಭಿಕ ಇಮಾಮ್ ಉಲ್ ಹಕ್ ಕಳಪೆ ಪ್ರದರ್ಶನದ ಕಾರಣದಿಂದ ಕೈಬಿಡಲಾಗಿದೆ. ಅವರ ಸ್ಥಾನದಲ್ಲಿ ಸ್ಯಾಮ್ ಅಯೂಬ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ಗಾಯಗೊಂಡಿರುವ ಸ್ಪಿನ್ನರ್ ಅಬ್ರಾರ್ ಅಹ್ಮದ್ ಮೂರನೇ ಟೆಸ್ಟ್‌ಗೆ ಫಿಟ್ ಆಗಿಲ್ಲ.

ಮೊದಲೆರಡು ಟೆಸ್ಟ್‌ಗಳನ್ನು ಗೆದ್ದಿರುವ ಹನ್ನೊಂದರ ಬಳಗದಿಂದಲೇ ಮೂರನೇ ಟೆಸ್ಟ್ ಆಡಲು ಕಾಂಗರೂ ತಂಡ ನಿರ್ಧರಿಸಿದೆ. ಈ ಟೆಸ್ಟ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ಕೊನೆಯ ಟೆಸ್ಟ್ ಆಗಿದೆ. ವಾರ್ನರ್ ಈಗಾಗಲೇ ಏಕದಿನ ಮತ್ತು ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಸಿಡ್ನಿಯಲ್ಲಿ ನಡೆಯಲಿರುವ ಕೊನೆಯ ಟೆಸ್ಟ್‌ಗೆ ಪಾಕಿಸ್ತಾನ ಆರಂಭಿಕ ಆಟಗಾರ ಇಮಾಮ್ ಉಲ್ ಹಕ್ ಅವರನ್ನು ಕೈಬಿಟ್ಟಿದೆ. ಪರ್ತ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್ ಹೊರತುಪಡಿಸಿ ಇತರ ಇನ್ನಿಂಗ್ಸ್‌ಗಳಲ್ಲಿ ಇಮಾಮ್ ರನ್ ಗಳಿಸಲು ಪರದಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಅವರು 62 ರನ್ ಗಳಿಸಿದ್ದರು. ಆ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 10 ರನ್ ಗಳಿಸಲಷ್ಟೇ ಬಾರಿಸಿದ್ದರು.

ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲೂ ಅವರು ಎರಡೂ ಇನಿಂಗ್ಸ್‌ಗಳಲ್ಲಿ ಬೇಗನೆ ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿ 10 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 12 ರನ್ ಗಳಿಸಿದ್ದರು. ಮೂರನೇ ಟೆಸ್ಟ್‌ನಲ್ಲಿ ಅವರ ಬದಲಿಗೆ ಸೈಮ್ ಅಯೂಬ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಪಂದ್ಯದಲ್ಲಿ ಅಯೂಬ್ ಟೆಸ್ಟ್‌ಗೆ ಪದಾರ್ಪಣೆ ಮಾಡಲಿದ್ದಾರೆ.
ಮುಂಬರುವ ಸರಣಿಯ ದೃಷ್ಟಿಯಿಂದ ಶಾಹೀನ್ ಶಾಗೆ ವಿಶ್ರಾಂತಿ ನೀಡಲಾಗಿದೆ. ಪಾಕಿಸ್ತಾನ ತಂಡ ಈಗಾಗಲೇ ಸರಣಿ ಸೋತಿದೆ. ಈ ಪ್ರವಾಸದ ಬಳಿಕ, ಪಾಕಿಸ್ತಾನ ತಂಡವು 5 ಟಿ-20 ಪಂದ್ಯಗಳ ಸರಣಿಯನ್ನು ಆಡಲು ನ್ಯೂಜಿಲೆಂಡ್‌ಗೆ ಪ್ರವಾಸ ಮಾಡಬೇಕಾಗಿದೆ.
ಕಳೆದ ವರ್ಷ ಗಾಯದಿಂದ ಹಿಂದಿರುಗಿದ ನಂತರ ಶಾಹೀನ್ ಶಾ ಅವರ ವೇಗ ಕಡಿಮೆಯಾಗಿದೆ. ಗಂಟೆಗೆ 130 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಚೆಂಡನ್ನು ಎಸೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ನಸೀಮ್ ಶಾ ಅನುಪಸ್ಥಿತಿಯ ಕಾರಣ ಈ ಸರಣಿಯಲ್ಲಿ ಹೆಚ್ಚಿನ ಓವರ್‌ಗಳನ್ನು ಬೌಲ್ ಮಾಡಬೇಕಾಯಿತು. ಅವರು ಎರಡೂ ಟೆಸ್ಟ್‌ಗಳಲ್ಲಿ ಒಟ್ಟು 99.2 ಓವರ್‌ಗಳನ್ನು ಬೌಲ್ ಮಾಡಿದ್ದರು.

ಗಾಯಗೊಂಡಿರುವ ಸ್ಪಿನ್ನರ್ ಅಬ್ರಾರ್ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಯಾವುದೇ ರಿಸ್ಕ್ ತೆಗೆದುಕೊಳ್ಳಲಿಲ್ಲ. ಅವರ ಬದಲಿಗೆ ಸಾಜಿದ್ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 2022 ರಲ್ಲಿ ಆಸ್ಟ್ರೇಲಿಯಾದ ಪಾಕಿಸ್ತಾನ ಪ್ರವಾಸದ ನಂತರ ಸಾಜಿದ್ ಮೊದಲ ಟೆಸ್ಟ್ ಆಡಲಿದ್ದಾರೆ.
ಸೋಮವಾರ ನಡೆದ ಅಭ್ಯಾಸದಲ್ಲಿ ಅಬ್ರಾರ್ ಭಾಗವಹಿಸಿದ್ದರು. ಆಸ್ಟ್ರೇಲಿಯಾ ಪ್ರವಾಸದ ಆರಂಭದಲ್ಲಿ ಆಸ್ಟ್ರೇಲಿಯಾ ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ವಿರುದ್ಧದ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದರು. ಇದರಿಂದಾಗಿ ಅವರು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಸರಣಿಯಲ್ಲಿ ಪಾಕಿಸ್ತಾನ 2-0 ಹಿನ್ನಡೆಯಲ್ಲಿದೆ
ಮೂರು ಟೆಸ್ಟ್‌ಗಳ ಸರಣಿಯಲ್ಲಿ ಪಾಕಿಸ್ತಾನ 2-0 ಹಿನ್ನಡೆಯಲ್ಲಿದೆ. ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 360 ರನ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಬಾಕ್ಸಿಂಗ್ ದಿನದಂದು ಮೆಲ್ಬೋರ್ನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವು ಪಾಕಿಸ್ತಾನವನ್ನು 79 ರನ್‌ಗಳಿಂದ ಸೋಲಿಸಿತ್ತು.