Ayush Mhatre: ಚೆನ್ನೈ ತಂಡಕ್ಕೆ ಮತ್ತೊಂದು ಪೆಟ್ಟು: ಯುವ ಆಟಗಾರ ಲೀಗ್‌ನಿಂದ ಔಟ್
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ತಂಡಕ್ಕೆ ಸ್ಟಾರ್ ಆಟಗಾರರ ಅನುಪಸ್ಥಿತಿ ಬಹುವಾಗಿ ಕಾಡುತ್ತಿದೆ. ಈ ಸಾಲು ಈಗ ಮತ್ತೆ ಬೆಳೆದಿದೆ. ಈ ಬಾರಿಯ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಯುವ ಆಟಗಾರ ಇಡೀ ಆವೃತ್ತಿಯಿಂದಲೇ ಹೊರ ನಡೆದಿದ್ದಾರೆ. ಈ ಮೂಲಕ ಸಿಎಸ್‌ಕೆಗೆ ಮತ್ತೊಂದು ದೊಡ್ಡ ಪೆಟ್ಟು ಬಿದ್ದಂತೆ ಆಗಿದೆ.
ಚೆನ್ನೈ ತಂಡದ ಪರ ಈ ಬಾರಿ ಲೀಗ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಆಯುಷ್ ಮಾತ್ರೆ 19ನೇ ಆವೃತ್ತಿಯ ಐಪಿಎಲ್‌ನಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಫ್ರಾಂಚೈಸಿ ಅಧಿಕೃತ ಹೇಳಿಕೆ ನೀಡಿದೆ . ಚೆನ್ನೈ ತಂಡ ಈ ಬಾರಿಯ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, ಮಾತ್ರೆ ಅನುಪಸ್ಥಿತಿ ತಂಡಕ್ಕೆ ದೊಡ್ಡ ಪೆಟ್ಟು ನೀಡಿದೆ.

ಸಿಎಸ್‌ಕೆ ತಂಡ ಸಾಮಾಜಿಕ ಮಾಧ್ಯಮದಲ್ಲಿ ಮಾತ್ರೆ ಅನುಪಸ್ಥಿತಿಯ ಬಗ್ಗೆ ಪ್ರಕಟಣೆ ನೀಡಿದೆ. "ಏಪ್ರಿಲ್ 18 ರಂದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ಆಯುಷ್ ಮಾತ್ರೆ ಸ್ನಾಯು ಸೆಳೆತಕ್ಕೆ ಒಳಗಾದರು. ಇವರು ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರ ನಡೆದಿದ್ದಾರೆ ಎಂದು ಸಿಎಸ್‌ಕೆ ತಿಳಿಸಿದೆ.
ಐದು ಬಾರಿಯ ಚಾಂಪಿಯನ್ ಸಿಎಸ್‌ಕೆ ಈ ಬಾರಿಯ ಐಪಿಎಲ್‌ನಲ್ಲಿ ಆಡಿದ 6 ಪಂದ್ಯಗಳಲ್ಲಿ 2 ಜಯ, 4 ಸೋಲು ಕಂಡಿದ್ದು, 4 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಚೆನ್ನೈ ತಂಡಕ್ಕೆ ಅನುಭವಿ ಸ್ಟಾರ್ ಆಟಗಾರ ಎಂಎಸ್ ಧೋನಿ ಅವರ ಅನುಪಸ್ಥಿತಿ ಸಹ ಬಹುವಾಗಿ ಕಾಡುತ್ತಿದೆ. ಇವರು ಈ ಆವೃತ್ತಿಯಲ್ಲಿ ಇನ್ನು ಒಂದೇ ಒಂದು ಪಂದ್ಯವನ್ನು ಆಡಿಲ್ಲ. ಇವರು ಮೈದಾಣಕ್ಕೆ ಇಳಿಯುವ ಮುನ್ನವೇ ಯುವ ಆಟಗಾರ ಲೀಗ್‌ನಿಂದ ಹೊರ ನಡೆದಿದ್ದಾರೆ.
ಆಯುಷ್ ಮಾತ್ರೆ ಸಾಧನೆ
18 ವರ್ಷದ ಆಯುಷ್ ಮಾತ್ರೆ ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಈ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಇವರ ಕಾಣಿಕೆ ಅಪಾರ. ಇವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದ್ದರು. ಇವರು ಈ ಲೀಗ್‌ನಲ್ಲಿ ಆಡಿದ 6 ಪಂದ್ಯಗಳಲ್ಲಿ 177ರ ಸ್ಟ್ರೈಕ್ ರೇಟ್‌ನಲ್ಲಿ 201 ರನ್ ಗಳಿಸಿದ್ದಾರೆ ಈ ವೇಳೆ 2 ಅರ್ಧಶತಕಗಳು ಸಹ ಸೇರಿವೆ. ಇವರು ಚೆನ್ನೈ ತಂಡದ ಗರಿಷ್ಠ ರನ್ ಬಾರಿಸಿದ ಆಟಗಾರ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications