Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚೆನ್ನೈನಲ್ಲಿ ಅರ್ಧಶತಕ ಬಾರಿಸಿ ದಾಖಲೆ ಬರೆದ ಆಯುಷ್‌

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭರವಸೆಯ ಬ್ಯಾಟರ್‌ ಆಯುಷ್ ಮಾತ್ರೆ ಅಬ್ಬರಿಸಿದ್ದಾರೆ. ಪಂಜಾಬ್ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಆಯುಷ್ ಲಯಕ್ಕೆ ಮರಳಿದ್ದಾರೆ. ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ಆಯುಷ್ ಮೈಚಳಿ ಬಿಟ್ಟು ಬ್ಯಾಟ್ ಮಾಡಿ ಅಬ್ಬರಿಸಿದರು. ಅಲ್ಲದೆ ತಂಡದ ಮೊತ್ತವನ್ನು ಹಿಗ್ಗಿಸಲು ನೆರವಾದರು.

ಇನಿಂಗ್ಸ್‌ 2ನೇ ಓವರ್‌ನ ಕೊನೆಯ ಎಸೆತದಲ್ಲಿ ಭರವಸೆಯ ಬ್ಯಾಟರ್ ಸಂಜು ಸ್ಯಾಮ್ಸನ್‌ ಔಟ್ ಆದರು. ಜೇವಿಯರ್ ಬಾರ್ಟ್ಲೆಟ್ ಅವರ ಎಸೆತವನ್ನು ಸಂಜು ಕೆಣಕಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು. 14 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಆಯುಷ್ ಮಾತ್ರೆ ಕ್ರೀಸ್‌ಗೆ ಇಳಿದರು. ಸಂಕಷ್ಟದಲ್ಲಿದ್ದಾಗ ತಂಡಕ್ಕೆ ಆಧಾರವಾದ ಆಯುಷ್ ಮಾತ್ರೆ ಅಬ್ಬರಿಸಿದರು.

Ayush Mhatre

ಆಯುಷ್‌ ಡ್ರೆಸ್ಸಿಂಗ್ ರೂಮ್‌ನಿಂದಲೇ ಸೆಟ್‌ ಆದಂತೆ ಕಂಡು ಬಂದಿತು. ಇವರು ವೇಗದ ಬೌಲರ್‌ಗಳನ್ನು ಮನ ಬಂದಂತೆ ದಂಡಿಸುತ್ತಾ ಸಾಗಿದರು. ಆಯುಷ್‌ ಆಕ್ರಮಣಕಾರಿ ಆಟವನ್ನು ಆಡುತ್ತಿದ್ದರೆ, ನಾಯಕ ರುತುರಾಜ್ ಗಾಯಕ್ವಾಡ್ ಅವರಿಗೆ ಉತ್ತಮ ಸಾಥ್ ನೀಡಿದರು. ಈ ಜೋಡಿಯ ವೇಳೆ ಹೆಚ್ಚಿನ ಸ್ಟ್ರೈಕ್‌ನ್ನು ಆಯುಷ್‌ಗೆ ನೀಡಿದ ರುತುರಾಜ್ ತಂಡದ ಮೊತ್ತ ಹಿಗ್ಗಿಸುವಲ್ಲಿ ಶ್ರಮಿಸಿದರು. ಈ ಪಂದ್ಯದಲ್ಲಿ ಆಯುಷ್ ಮಾತ್ರೆ ಅರ್ಧಶತಕ ಬಾರಿಸಿ ಮಿಂಚಿದರು. ಈ ಮೂಲಕ ದಾಖಲೆಯನ್ನು ಬರೆದರು.

ಆಯುಷ್‌ ಅರ್ಧಶತಕ

18 ವರ್ಷ ಮತ್ತು 261 ದಿನಗಳಲ್ಲಿ ಆಯುಷ್ ಮಾತ್ರೆ ಚೆನ್ನೈನ ಚೆಪಾಕ್‌ ಮೈದಾನದಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಆಯುಷ್‌ ತಮ್ಮ ವೃತ್ತಿ ಜೀವನದಲ್ಲಿ 2ನೇ ಅರ್ಧಶತಕ ಬಾರಿಸಿದರು. 19 ವರ್ಷ ವಯಸ್ಸಿನೊಳಗೆ ಪೃಥ್ವಿ ಶಾ ಐಪಿಎಲ್‌ನಲ್ಲಿ ಎರಡು ಅರ್ಧಶತಕ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದರು. ಈಗ ಆಯುಷ್‌ ಈ ದಾಖಲೆಯ ಸಮಕ್ಕೆ ನಿಂತಿದ್ದಾರೆ.

Ayush Mhatre

ಆಯುಷ್ ಮಾತ್ರೆ 43 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್ ನೆರವಿನಿಂದ 169ರ ಸ್ಟ್ರೈಕ್‌ ರೇಟ್‌ನಲ್ಲಿ 73 ರನ್‌ ಸಿಡಿಸಿದರು. ಇವರು ತಂಡದ ಮೊತ್ತ 123 ರನ್ ಆಗಿದ್ದಾಗ ಔಟ್ ಆದರು.

Story first published: Friday, April 3, 2026, 21:06 [IST]
Other articles published on Apr 3, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+