Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಬರ್ ಅಝಾಮ್ ಕೊಹ್ಲಿಯಷ್ಟೇ ಉತ್ತಮ ಆಟಗಾರ: ಪಾಕ್ ಕೋಚ್ ಮಿಕಿ

ಬಾಬರ್ ಅಝಾಮ್ ಕೊಹ್ಲಿಯಷ್ಟೇ ಉತ್ತಮ ಆಟಗಾರ..! | Oneindia Kannada
Babar Azam as good as Virat Kohli? Pakistan coach has his say

ಇಸ್ಲಮಾಬಾದ್, ಫೆಬ್ರವರಿ 5: ಪಾಕಿಸ್ತಾನದ ಯುವ ಸ್ಫೋಟಕ ಬ್ಯಾಟ್ಸ್ಮನ್ ಬಾಬರ್ ಅಝಾಮ್ ಭವಿಷ್ಯದಲ್ಲಿ ಟಾಪ್ ಬ್ಯಾಟ್ಸ್ಮನ್‌ ಆಗಿ ಗುರುತಿಸಿಕೊಳ್ಳುತ್ತಾರೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಕಿ ಆರ್ಥರ್ ಹೇಳಿದ್ದಾರೆ. ಅಲ್ಲದೆ, ಬಾಬರ್ ಅವರು ಕೊಹ್ಲಿಯಷ್ಟೇ ಉತ್ತಮ ಬ್ಯಾಟ್ಸ್ಮನ್ ಎಂಬ ಮಾತನ್ನೂ ಮಿಕಿ ನುಡಿದಿದ್ದಾರೆ.

ಭಾರತದ ನಾಯಕ ವಿರಾಟ್ ಕೊಹ್ಲಿ, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿದ್ದಾರೆ. 24ರ ಹರೆಯದ ಬಾಬರ್ ಅಝಾಮ್ ಟಿ20ಯಲ್ಲಿ ಅಗ್ರಸ್ಥಾನದಲ್ಲಿರುವ ಉದಯೋನ್ಮುಖ ಆಟಗಾರ. ಬಾಬರ್ ಉತ್ತೀಚಿಗೆ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ ಕೂಡ. ಇದನ್ನೇ ಪರಿಗಣಿಸಿ ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಆರ್ಥರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಮುಂದೊಮ್ಮೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಈತ (ಬಾಬರ್) ಟಾಪ್ 5ರಲ್ಲಿ ಸ್ಥಾನ ಪಡೆದುಕೊಳ್ಳುತ್ತಾರೆ ಅಂತ ನನಗನ್ನಿಸುತ್ತಿದೆ. ಬಾಬರ್ ಅಝಾಮ್ ಅವರು ಕೊಹ್ಲಿಯಂತೆ ಉತ್ತಮ ಆಟಗಾರ ಅನ್ನೋದನ್ನು ನಾನು ಈ ಹಿಂದೆಯೇ ಹೇಳಿದ್ದೆ. ಉತ್ತಮ ಪ್ರದರ್ಶನದ ಮೂಲಕ ಅವರೀಗ ಅದನ್ನು ಸಾಬೀತುಪಡಿಸುತ್ತಿದ್ದಾರೆ' ಎಂದು ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌ ಜೊತೆ ಮಾತನಾಡುತ್ತ ಮಿಕಿ ಅಭಿಪ್ರಾಯಿಸಿದ್ದಾರೆ.

ಸೌತ್ ಆಫ್ರಿಕಾ ಪ್ರವಾಸ ಸರಣಿಯಲ್ಲಿ ಪಾಕಿಸ್ತಾನ ತಂಡ ಉತ್ತಮ ಪ್ರದರ್ಶನ ತೋರಿಲ್ಲ. ಟೆಸ್ಟ್, ಏಕದಿನ, ಟಿ20 ಮೂರೂ ಸರಣಿಗಳನ್ನೂ ಸೋತಿದೆ. ಆದರೆ ಬಾಬರ್ ಅಝಾಮ್ ಉತ್ತಮ ಆಟದ ಮೂಲಕ ಗಮನ ಸೆಳೆದಿದ್ದರು. ಟಿ20 ದ್ವಿತೀಯ ಪಂದ್ಯದಲ್ಲಿ ಬಾಬರ್ 58 ಎಸೆತಗಳಿಗೆ 90 ರನ್ ಚಚ್ಚಿದ್ದರು. ಆದರೆ ಈ ಪಂದ್ಯವನ್ನು ಪಾಕ್ 7 ರನ್‌ನಿಂದ ಸೋತಿತ್ತು.

Story first published: Tuesday, February 5, 2019, 16:13 [IST]
Other articles published on Feb 5, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+