ಹಾಶಿಮ್ ಆಮ್ಲ, ವಿರಾಟ್ ಕೊಹ್ಲಿ ಹಿಂದಿಕ್ಕಿ ದಾಖಲೆ ಬರೆದ ಬಾಬರ್ ಅಝಾಮ್!

ಬರ್ಮಿಂಗ್‌ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ಮಂಗಳವಾರ (ಜುಲೈ 13) ನಡೆದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯದಲ್ಲೂ ಆತಿಥೇಯ ಇಂಗ್ಲೆಂಡ್ 3 ವಿಕೆಟ್‌ಗಳ ಜಯ ಗಳಿಸಿದೆ. ಪಾಕ್ ನಾಯಕ ಬಾಬರ್ ಅಝಾಮ್ ಅವರ ಶತಕದ ಕೊಡುಗೆ ವ್ಯರ್ಥವಾಗಿದೆ. ಇದರೊಂದಿಗೆ ಮೂರು ಪಂದ್ಯಗಳ ಈ ಟಿ20ಐ ಸರಣಿಯಲ್ಲಿ ಪಾಕ್ ತಂಡ 3-0ಯಿಂದ ವೈಟ್ ವಾಷ್ ಮುಖಭಂಗ ಅನುಭವಿಸಿದೆ.
ಇಂಗ್ಲೆಂಡ್ ವಿರುದ್ಧದ ಕೊನೇಯ ಏಕದಿನ ಪಂದ್ಯದಲ್ಲಿ ಬಾಬರ್ ಅಝಾಮ್ ಶತಕ ಬಾರಿಸಿದರೆ, ಆರಂಭಿಕ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್, ಮೊಹಮ್ಮದ್ ರಿಝ್ವಾನ್ ಅರ್ಧ ಶತಕ ಬಾರಿಸಿ ಗಮನ ಸೆಳೆದರು. ಇದೇ ಪಂದ್ಯದಲ್ಲಿ ಬಾಬರ್ ಏಕದಿನ ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆ ನಿರ್ಮಿಸಿದ್ದಾರೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ ತಂಡ, ಇಮಾಮ್ ಉಲ್ ಹಕ್ 56, ಬಾಬರ್ ಅಝಾಮ್ 158, ಮೊಹಮ್ಮದ್ ರಿಝ್ವಾನ್ 74 ರನ್‌ನೊಂದಿಗೆ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದು 331 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಜೇಮ್ಸ್ ವಿನ್ಸ್ 102, ಲೂಯಿಸ್ ಗ್ರೆಗರಿ 77, ನಾಯಕ ಬೆನ್ ಸ್ಟೋಕ್ಸ್ 39, ಫಿಲಿಪ್ ಸಾಲ್ಟ್ 37, ಝ್ಯಾಕ್ ಕ್ರಾಲೆ 39 ರನ್‌ಗೆ 48 ಓವರ್‌ಗಳಲ್ಲಿ 7 ವಿಕೆಟ್ ಕಳೆದು 332 ರನ್ ಗಳಿಸಿ ಗೆಲುವನ್ನಾಚರಿಸಿತು.

ಬಾಬರ್ ಸ್ಫೋಟಕ ಶತಕ
ಪಾಕಿಸ್ತಾನ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ನ ಸಕೀಬ್ ಮಹಮೂದ್ 3, ಬ್ರೈಡನ್ ಕಾರ್ಸ್ 5, ಮ್ಯಾಥ್ಯೂ ಕಾರ್ಕಿನ್‌ಸನ್ 1 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಪಾಕ್‌ನ ಹಸನ್ ಅಲಿ 1, ಹ್ಯಾರಿಸ್ ರೌಫ್ 4, ಶದಾಬ್ ಖಾನ್ 2 ವಿಕೆಟ್‌ನಿಂದ ಗಮನ ಸೆಳೆದರು. ಈ ಪಂದ್ಯದಲ್ಲಿ ಬಾಬರ್ ಅಝಾಮ್ 139 ಎಸೆತಗಳಲ್ಲಿ 158 ರನ್ ಗಳಿಸಿದ್ದರು. ಇದರಲ್ಲಿ 14 ಫೋರ್ಸ್, 4 ಸಿಕ್ಸರ್ ಸೇರಿತ್ತು.

ಆಮ್ಲ, ಕೊಹ್ಲಿ ದಾಖಲೆ ಬದಿಗೆ
83 ಏಕದಿನ ಪಂದ್ಯ (81 ಇನ್ನಿಂಗ್ಸ್)ಗಳನ್ನಾಡಿರುವ ಬಾಬರ್ ಅಝಾಮ್ 3985 ರನ್, 14 ಶತಕ, 17 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಅತೀ ವೇಗದ ದಾಖಲೆಗಾಗಿ ಬಾಬರ್, ದಕ್ಷಿಣ ಆಫ್ರಿಕಾ ಮಾಜಿ ಆಟಗಾರ ಹಾಶಿಮ್ ಆಮ್ಲ, ಭಾರತದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.

ವೇಗದಲ್ಲಿ 14 ಒಡಿಐ ಶತಕ ದಾಖಲೆಗಳು
1. ಬಾಬರ್ ಅಝಾಮ್, ಪಾಕಿಸ್ತಾನ, 81 ಇನ್ನಿಂಗ್ಸ್‌ಗಳಲ್ಲಿ 14 ಶತಕಗಳು
2. ಹಾಶಿಮ್ ಆಮ್ಲ, ದಕ್ಷಿಣ ಆಫ್ರಿಕಾ, 84 ಇನ್ನಿಂಗ್ಸ್‌ಗಳಲ್ಲಿ 14 ಶತಕಗಳು
3. ಡೇವಿಡ್ ವಾರ್ನರ್, ಆಸ್ಟ್ರೇಲಿಯಾ, 98 ಇನ್ನಿಂಗ್ಸ್‌ಗಳಲ್ಲಿ 14 ಶತಕಗಳು
4. ವಿರಾಟ್ ಕೊಹ್ಲಿ, ಭಾರತ, 103 ಇನ್ನಿಂಗ್ಸ್‌ಗಳಲ್ಲಿ 14 ಶತಕಗಳು
5. ಕ್ವಿಂಟನ್ ಡಿ ಕಾಕ್, ದಕ್ಷಿಣ ಆಫ್ರಿಕಾ, 104 ಇನ್ನಿಂಗ್ಸ್‌ಗಳಲ್ಲಿ 14 ಶತಕಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications