For Quick Alerts
ALLOW NOTIFICATIONS  
For Daily Alerts
 

Virat Kohli vs Babar Azam: ವಿರಾಟ್ ಕೊಹ್ಲಿಗಿಂತ ಬಾಬರ್ ಅಜಂ ಶ್ರೇಷ್ಠನೆಂದ ಇಮ್ರಾನ್ ಖಾನ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) 2021-23ರ ಋತುವಿನಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರು ಆಡಿದ 17 ಪಂದ್ಯಗಳಿಂದ 32.13 ಸರಾಸರಿಯಲ್ಲಿ 932 ರನ್‌ ಬಾರಿಸಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದರು.

ಇನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಲೆಜೆಂಡರಿ ನಾಯಕ ಹಾಗೂ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಟೀಂ ಇಂಡಿಯಾ ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ನಡುವಿನ ಹೋಲಿಕೆ ಬಗ್ಗೆ ಕಿಡಿಕಾರಿದ್ದಾರೆ.

 Babar Azam Can Easily Overtake Virat Kohlis Record Says Imran Khan

ಬಾಬರ್ ಅಜಂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗಿನಿಂದ, ಪಾಕಿಸ್ತಾನದ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ವಿರಾಟ್ ಕೊಹ್ಲಿಯ ಮಟ್ಟವನ್ನು ಸರಿದೂಗಿಸುವ ಸಾಮರ್ಥ್ಯ ಬಾಬರ್‌ ಅಜಂ ಅವರಿಗೆ ಇದೆ ಎಂದು ಹೇಳಿಕೆ ನೀಡುತ್ತಿರುತ್ತಾರೆ.

ಇದೀಗ 1992ರ ವಿಶ್ವಕಪ್ ವಿಜೇತ ನಾಯಕ ಇಮ್ರಾನ್ ಖಾನ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಬಾಬರ್ ಅಜಂ ಅವರು ವಿರಾಟ್ ಕೊಹ್ಲಿಯ ದಾಖಲೆಗಳನ್ನು ಸುಲಭವಾಗಿ ಮೀರಿಸಬಹುದು ಎಂದು ಹೇಳಿಕೆ ಕೊಟ್ಟಿದ್ದಾರೆ.

ಗಮನಾರ್ಹ ಅಂಶವೆಂದರೆ, ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಇದುವರೆಗೆ 498 ಪಂದ್ಯಗಳಲ್ಲಿ 75 ಶತಕ ಸೇರಿದಂತೆ 25,385 ರನ್ ಗಳಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿಗಿಂತ ಆರು ವರ್ಷ ಕಿರಿಯನಾಗಿರುವ ಬಾಬರ್ ಅಜಂ ಇದುವರೆಗೆ 251 ಪಂದ್ಯಗಳಲ್ಲಿ 30 ಶತಕ ಸೇರಿದಂತೆ 12,270 ರನ್ ಬಾರಿಸಿದ್ದಾರೆ.

"ನಾನು ಇತ್ತೀಚೆಗೆ ಕ್ರಿಕೆಟ್ ನೋಡಿಲ್ಲ, ಆದರೆ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಂ ಒಂದೇ ಆಟದ ಶೈಲಿಗೆ ಸೇರಿದವರು ಎಂದು ನಾನು ನಂಬುತ್ತೇನೆ. ಪಾಕಿಸ್ತಾನ ನಾಯಕ ಬಾಬರ್ ಅಜಂ ಅವರು ಭಾರತದ ವಿರಾಟ್ ಕೊಹ್ಲಿಯನ್ನು ಸುಲಭವಾಗಿ ಮೀರಿಸಬಹುದು. ನಾನು ನೋಡಿದ ಪ್ರಕಾರ. ಬಾಬರ್ ತುಂಬಾ ಒಳ್ಳೆಯ ಆಟಗಾರ," ಎಂದು ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.

ಬಾಬರ್ ಅಜಂ ಇತ್ತೀಚೆಗೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 5,000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾದರು ಮತ್ತು ಈ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದರು. ಬಾಬರ್ ಅಜಂ ಕೇವಲ 97 ಇನ್ನಿಂಗ್ಸ್‌ಗಳಲ್ಲಿ 5,000 ರನ್‌ಗಳ ಮೈಲಿಗಲ್ಲು ತಲುಪಿದರು.

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 5,000 ರನ್ ಪೂರ್ಣಗೊಳಿಸಲು 114 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. ಇನ್ನು ವಿರಾಟ್ ಕೊಹ್ಲಿಯೊಂದಿಗೆ ಬಾಬರ್ ಅಜಂ ಅವರು ಹಾಶಿಮ್ ಆಮ್ಲಾ (101) ಮತ್ತು ವಿವಿಯನ್ ರಿಚರ್ಡ್ಸ್ (114) ಅವರ ದಾಖಲೆಯನ್ನೂ ಹಿಂದಿಕ್ಕಿದರು.

ಇನ್ನು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ 81 ಟಿ20 ಪಂದ್ಯಗಳಲ್ಲಿ ವೇಗವಾಗಿ 3,000 ರನ್ ಹೆಗ್ಗುರುತನ್ನು ಪೂರೈಸಿದ ಆಟಗಾರನಾಗಿ ಬ್ಯಾಟಿಂಗ್‌ನಲ್ಲಿ ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆಯನ್ನು ಸಮಬಲಗೊಳಿಸಿದ್ದರು.

ಬಾಬರ್ ತನ್ನ ವೃತ್ತಿಜೀವನದಲ್ಲಿ ರೋಲ್ ಆಗಿದ್ದಾನೆ
ಬಾಬರ್ ಅಜಂ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಗಿಂತ ಬಹಳ ಹಿಂದೆ ಇದ್ದಾರೆ. ಆದರೆ, ಟಿ20 ಪಂದ್ಯಗಳಲ್ಲಿ ಬಾಬರ್ ಅಜಂ ಕೇವಲ 523 ರನ್‌ಗಳ ಹಿಂದೆ ಇದ್ದಾರೆ. 4,008 ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.

2022ರಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ವಿರಾಟ್ ಕೊಹ್ಲಿಯ ದಾಖಲೆಯನ್ನು ಮುರಿದು ಅತಿ ಹೆಚ್ಚು ದಿನಗಳ ಕಾಲ (1155 ದಿನಗಳು) ನಂ.1 ಬ್ಯಾಟರ್ ಆಗಿ ಕಳೆದರು.

ಅಷ್ಟೇ ಅಲ್ಲದೆ, ಬಾಬರ್ ಅಜಂ ಅವರು 2022ರಲ್ಲಿ ವರ್ಷದ ಪ್ರತಿಷ್ಠಿತ ಏಕದಿನ ಕ್ರಿಕೆಟಿಗ ಮತ್ತು ವರ್ಷದ ಕ್ರಿಕೆಟಿಗ ಪ್ರಶಸ್ತಿಗಳೊಂದಿಗೆ ತಮ್ಮ ವೃತ್ತಿಜೀವನದಲ್ಲಿ ಮಾದರಿಯಾಗಿದ್ದಾರೆ. ಮುಂಬರುವ ಸರಣಿಗಳಲ್ಲಿ ಬಾಬರ್ ಅಜಂ ಇದೇ ಫಾರ್ಮ್ ಮುಂದುವರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Story first published: Tuesday, June 13, 2023, 18:58 [IST]
Other articles published on Jun 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+