For Quick Alerts
ALLOW NOTIFICATIONS  
For Daily Alerts
 

Babar Azam: ರೋಹಿತ್-ಕೊಹ್ಲಿ ನಂತರ ವಿಶೇಷ ಸಾಧನೆ ಮಾಡಿದ ಬಾಬರ್ ಆಜಮ್

ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಉಭಯ ತಂಡಗಳ ನಡುವೆ ಸರಣಿಯ ಮೊದಲ ಟೆಸ್ಟ್ ಪಂದ್ಯ ಸೆಂಚುರಿಯನ್‌ನಲ್ಲಿ ನಡೆಯುತ್ತಿದೆ. ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಮೊದಲ ಇನ್ನಿಂಗ್ಸ್‌ನಲ್ಲಿ ರನ್ ಗಳಿಸುವಲ್ಲಿ ವಿಫಲರಾಗಿದ್ದಾರೆ. ಕೇವಲ ನಾಲ್ಕು ರನ್ ಗಳಿಸಿ ಬಾಬರ್ ಅಜಮ್ ಅವರು ಡ್ಯಾನ್ ಪ್ಯಾಟರ್ಸನ್ ಬೌಲಿಂಗ್‌ನಲ್ಲಿ ಔಟ್ ಆಗಿದ್ದಾರೆ. ಬಾಬರ್ ಅಜಮ್ ಬಿಗ್ ಇನ್ನಿಂಗ್ಸ್ ಆಡಿದ್ದಿರೂ, ಈ ನಾಲ್ಕು ರನ್‌ಗಳೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ.

ಬಾಬರ್ ಅಜಮ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ 4000 ರನ್ ಪೂರೈಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಬಾಬರ್ ಅಜಮ್ ಪಾತ್ರ ವಹಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ 4000 ರನ್‌ಗಳನ್ನು ಭಾರತ ತಂಡದ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಾತ್ರ ಮಾಡಿದ್ದಾರೆ. ಇದೀಗ ರೋಹಿತ್ ಮತ್ತು ವಿರಾಟ್ ಕ್ಲಬ್‌ಗೆ ಬಾಬರ್ ಹೆಸರೂ ಸೇರ್ಪಡೆಯಾಗಿದೆ.

Babar Azam completes 4000 runs in all three formats of international cricket

ಬಾಬರ್ ವೃತ್ತಿಜೀವನ

ಬಾಬರ್ ಅಜಮ್ 56 ಟೆಸ್ಟ್ ಪಂದ್ಯಗಳಲ್ಲಿ 43.49 ಸರಾಸರಿಯಲ್ಲಿ 4001 ರನ್ ಪೂರೈಸಿದ್ದಾರೆ. ಇದರಲ್ಲಿ 9 ಶತಕಗಳು ಮತ್ತು 26 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೆ, 123 ಏಕದಿನ ಪಂದ್ಯಗಳಲ್ಲಿ 5957 ರನ್ ಗಳಿಸಿದ್ದು, 19 ಶತಕಗಳು ಮತ್ತು 34 ಅರ್ಧ ಶತಕಗಳನ್ನು ಹೊಂದಿದ್ದಾರೆ. ಇನ್ನೂ 128 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 39.84 ರ ಸರಾಸರಿಯಲ್ಲಿ 4223 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 3 ಶತಕಗಳು ಮತ್ತು 36 ಅರ್ಧ ಶತಕಗಳು ಸಿಡಸಿದ್ದಾರೆ.

ಬಾಕ್ಸಿಂಗ್ ಟೆಸ್ಟ್

ಸೆಂಚುರಿಯನ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ತಂಡಗಳು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಡುತ್ತಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ಮೊದಲ ಇನಿಂಗ್ಸ್ ಕೇವಲ 211 ರನ್ ಗಳಿಗೆ ಆಲೌಟಾಗಿದೆ. ದಕ್ಷಿಣ ಆಫ್ರಿಕಾ ಪರ ಡ್ಯಾನ್ ಪ್ಯಾಟರ್ಸನ್ 5 ವಿಕೆಟ್ ಪಡೆದು ಮಿಂಚಿದರೆ, ಕಾರ್ಬಿನ್ ಬಾಷ್ 4 ವಿಕೆಟ್ ಕಬಳಿಸಿದ್ದಾರೆ. ಈ ಇಬ್ಬರು ಬೌಲರ್‌ಗಳ ಮುಂದೆ ಪಾಕಿಸ್ತಾನ ತಂಡದ ಬ್ಯಾಟರ್‌ಗಳು ಮಂಡಿಯೂರಿದ್ದಾರೆ.

ಪಾಕಿಸ್ತಾನ ಪರ ಕಮ್ರಾನ್ ಗುಲಾಮ್ ಅರ್ಧಶತಕ ಗಳಿಸಿ 54 ರನ್ ಸೇರಿಸಿದರು. ಇದನ್ನು ಬಿಟ್ಟರೆ ಯಾರೂ ತಂಡಕ್ಕೆ ಆಸರೆಯಾಗಲಿಲ್ಲ. ಮೊಹಮ್ಮದ್ ರಿಜ್ವಾನ್ ಕೇವಲ 27 ರನ್ ಗಳಿಸಲಷ್ಟೇ ಶಕ್ತರಾದರು. ಇದಕ್ಕೂ ಮುನ್ನ ಟಾಪ್ ಆರ್ಡರ್ ಬ್ಯಾಟಿಂಗ್ ರನ್ ಗಳಿಸುವಲ್ಲಿ ಸಂಪೂರ್ಣ ವಿಫಲವಾಯಿತು. ನಾಯಕ ಶಾನ್ ಮಸೂದ್ (17), ಸ್ಯಾಮ್ ಅಯೂಬ್ (14) ಮತ್ತು ಸೌದ್ ಶಕೀಲ್ (14) ಅವರಿಗೂ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ. ಅಮರ್ ಜಮಾಲ್ 28 ರನ್ ಗಳಿಸಿದರು.

Story first published: Thursday, December 26, 2024, 22:25 [IST]
Other articles published on Dec 26, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+