PAK vs ENG: ಇಂಗ್ಲೆಂಡ್ ವಿರುದ್ಧದ ಉಳಿದ ಟೆಸ್ಟ್ ಪಂದ್ಯಗಳಿಂದ ಬಾಬರ್ ಅಜಮ್ ಡ್ರಾಪ್; ಕಾರಣವೇನು?
ಪ್ರಸ್ತುತ ಇಂಗ್ಲೆಂಡ್ ತಂಡ ಪಾಕಿಸ್ತಾನ ಪ್ರವಾಸದಲ್ಲಿದೆ. ಮುಲ್ತಾನ್‌ನಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ತವರಿನಲ್ಲಿ ಇಂಗ್ಲೆಂಡ್ ಹೀನಾಯವಾಗಿ ಸೋಲಿಸಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಮತ್ತೊಮ್ಮೆ ಫೇಲ್ ಆಗಿದ್ದಾರೆ.
ಇದೀಗ ಎರಡನೇ ಪಂದ್ಯ ಅಕ್ಟೋಬರ್ 15 ರಿಂದ ಮುಲ್ತಾನ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇದಾದ ಬಳಿಕ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ರಾವಲ್ಪಿಂಡಿಯಲ್ಲಿ ಅಕ್ಟೋಬರ್ 24ರಿಂದ ನಡೆಯಲಿದೆ. ಮುಲ್ತಾನ್ ಮತ್ತು ರಾವಲ್ಪಿಂಡಿಯಲ್ಲಿ ನಡೆಯಲಿರುವ ಉಳಿದ ಪಂದ್ಯಗಳಿಗೆ ಪಿಸಿಬಿ ತಂಡವನ್ನು ಪ್ರಕಟಿಸಿದೆ. ಈ ತಂಡದಿಂದ ಬಾಬರ್ ಅಜಮ್ ಅವರನ್ನು ಕೈ ಬಿಡಲಾಗಿದೆ.

ಪಿಸಿಬಿ ಮಹ್ವತದ ನಿರ್ಧಾರ
ಇತ್ತೀಚೆಗೆ ಬಾಬರ್ ಅಜಮ್ ಟೆಸ್ಟ್ ಸರಣಿಗಳಲ್ಲಿ ಹೇಳಿಕೊಳ್ಳುವಂತ ಪ್ರದರ್ಶನವನ್ನು ನೀಡುತ್ತಿಲ್ಲ. ಬಾಂಗ್ಲಾದೇಶ ವಿರುದ್ಧ 2-0 ಅಂತರದಲ್ಲಿ ಪಾಕಿಸ್ತಾನ ಸರಣಿ ಸೋಲು ಬಾಬರ್ ಅಜಮ್ ಅವರ ಕಳಪೆ ಫಾರ್ಮ್ ಕೂಡ ಕಾರಣ. ಬಾಂಗ್ಲಾದೇಶ ವಿರುದ್ಧ ಬಾಬರ್ ಅಜಮ್ ಹೆಚ್ಚು ರನ್ ಗಳಿಸಲು ವಿಫಲವಾಗಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಕೂಡ ಬಾಬರ್ ತನ್ನ ಪರಾಕ್ರಮ ತೋರಿಸಿಲ್ಲ. ಇದರ ಬೆನ್ನಲ್ಲೇ ಹೊಸ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆಯ್ಕೆ ಸಮಿತಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಬಾಬರ್ ಅಜಮ್ ಅವರನ್ನು ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯದಿಂದ ಡ್ರಾಪ್ ಮಾಡಲಾಗಿದೆ.
ಬಾಬರ್ ಅಜಮ್ ಜೊತೆಗೆ ವೇಗದ ಬೌಲರ್ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ, ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸರ್ಫರಾಜ್ ಅಹ್ಮದ್, ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಕೈಬಿಡಲಾಗಿದೆ. ಇವರ ಬದಲಿಗೆ ವಿಕೆಟ್‌ಕೀಪರ್ ಹಸಿಬುಲ್ಲಾ, ಮೆಹ್ರಾನ್ ಮುಮ್ತಾಜ್, ಕಮ್ರಾನ್ ಗುಲಾಮ್, ಮೊಹಮ್ಮದ್ ಅಲಿ, ಸಾಜಿದ್ ಖಾನ್, ನೋಮನ್ ಅಲಿ ಮತ್ತು ಜಾಹಿದ್ ಮಹಮೂದ್ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‌ಗಳಿಂದ ಬಾಬರ್ ಕೇವಲ 30 ಮತ್ತು 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಪಿಸಿಬಿ ಪ್ರಕಟಿಸಿರುವ ಹೊಸ ಆಯ್ಕೆ ಸಮಿತಿಯಲ್ಲಿ ಮಾಜಿ ಕ್ರಿಕೆಟಿಗರಾದ ಆಕಿಬ್ ಜಾವೇದ್, ಅಸದ್ ಶಫೀಕ್, ಮಾಜಿ ನಾಯಕ ಅಜರ್ ಅಲಿ, ಮಾಜಿ ಐಸಿಸಿ ಅಂಪೈರ್ ಅಲೀಮ್ ದಾರ್, ವಿಶ್ಲೇಷಕ ಹಸನ್ ಚೀಮಾ ಸೇರಿದ್ದಾರೆ. ಆಯ್ಕೆ ಸಮಿತಿ ಸಭೆಯಲ್ಲಿ ತಂಡದ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಬಾಬರ್ ವಿಶ್ರಾಂತಿ ಪಡೆದರೆ ಮುಂದೆ ಲಾಭವಾಗಲಿದೆ ಎಂದು ಹೊಸ ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ. 2022ರ ಡಿಸೆಂಬರ್ ತಿಂಗಳ ನಂತರ ಬಾಬರ್ 18 ಇನ್ನಿಂಗ್ಸ್‌ಗಳಲ್ಲಿ ಯಾವುದೇ ಅರ್ಧಶತಕ ಗಳಿಸಿಲ್ಲ.
ಇಂಗ್ಲೆಂಡ್ ವಿರುದ್ಧ 2 ಮತ್ತು 3ನೇ ಟೆಸ್ಟ್‌ಗೆ ಪಾಕಿಸ್ತಾನ ತಂಡ
ಶಾನ್ ಮಸೂದ್ (ನಾಯಕ), ಸೌದ್ ಶಕೀಲ್ (ಉಪನಾಯಕ), ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಹಸಿಬುಲ್ಲಾ (ವಿಕೆಟ್ ಕೀಪರ್), ಕಮ್ರಾನ್ ಗುಲಾಮ್, ಮೆಹ್ರಾನ್ ಮುಮ್ತಾಜ್, ಮೀರ್ ಹಮ್ಜಾ, ಮೊಹಮ್ಮದ್ ಅಲಿ, ಮೊಹಮ್ಮದ್ ಹುರೈರಾ, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ನೋಮನ್ ಅಲಿ, ಸ್ಯಾಮ್ ಅಯೂಬ್, ಸಾಜಿದ್ ಖಾನ್, ಸಲ್ಮಾನ್ ಅಲಿ ಅಗಾ, ಜಾಹಿದ್ ಮಹಮೂದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications