Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾ ವಿರುದ್ಧದ ಸರಣಿಗೆ ಪಾಕ್ ತಂಡ ಪ್ರಕಟ: ಬಾಬರ್‌ಗೆ ಗೇಟ್ ಪಾಸ್‌

ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯಗಳು ಭಾರತದಲ್ಲಿ ನಡೆಯುತ್ತಿದೆ. ಅತ್ತ ಟಿ20 ವಿಶ್ವಕಪ್‌ನಿಂದ ಹೊರಗಿರುವ ನೆರೆಯ ರಾಷ್ಟ್ರ ಪಾಕಿಸ್ತಾನ ಮತ್ತೊಂದು ಸರಣಿಗೆ ತನ್ನ ತಂಡವನ್ನು ಘೋಷಿಸಿದೆ. ಐಸಿಸಿ ಮೆಗಾ ಈವೆಂಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದ ಅನುಭವಿ ಆಟಗಾರರು ಸೇರಿದಂತೆ ಒಟ್ಟು 6 ಜನರಿಗೆ ತಂಡದಿಂದ ಕೈ ಬಿಡಲಾಗಿದೆ. ಪಾಕ್ ತಂಡದ ಸ್ಟಾರ್ ಬ್ಯಾಟರ್‌ ಈ ಬಾರಿಯ ವಿಶ್ವಕಪ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ಪರದಾಡಿದ್ದರಿಂದ ಅವರನ್ನೂ ಸಹ ಬಾಂಗ್ಲಾದೇಶ ವಿರುದ್ಧದ ಸರಣಿಯಿಂದ ಕೈ ಬಿಡಲಾಗಿದೆ. ಟಿ20 ವಿಶ್ವಕಪ್‌ನಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಾಹಿಬ್‌ಜಾದ ಫರ್ಹಾನ್ ಏಕದಿನ ತಂಡಕ್ಕೆ ಸೇರಿಕೊಂಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ 15 ಜನ ಯುವ ಆಟಗಾರರ ತಂಡವನ್ನು ಆಯ್ಕೆ ಮಾಡಿದೆ. ಮಾರ್ಚ್ 11 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗೆ ಬಾಂಗ್ಲಾದೇಶ ಆತಿಥ್ಯ ವಹಿಸಲಿದೆ. ಸರಣಿಯ ಎಲ್ಲ ಪಂದ್ಯಗಳು ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಎಡಗೈ ವೇಗದ ಬೌಲರ್‌ ಶಾಹೀನ್ ಶಾ ಅಫ್ರಿದಿಗೆ ತಂಡದ ಜವಾಬ್ದಾರಿ ನೀಡಲಾಗಿದೆ.

Babar Azam Dropped

ಬಾಂಗ್ಲಾ ವಿರುದ್ಧದ ಸರಣಿಗೆ ಪಾಕಿಸ್ತಾನ ಪ್ರಕಟಿಸಿದ 15 ಆಟಗಾರರ ತಂಡದಲ್ಲಿ, ಏಕದಿನ ಫಾರ್ಮೆಟ್‌ಗೆ ಪದಾರ್ಪಣೆ ಮಾಡದ ಆರು ಆಟಗಾರರು ಇದ್ದಾರೆ. ಇವರಲ್ಲಿ ಅಬ್ದುಲ್ ಸಮದ್, ಮಾಜ್ ಸದಾಕತ್, ಮೊಹಮ್ಮದ್‌ ಘಾಜಿ ಗೋರಿ, ಸಾದ್ ಮಸೂದ್, ಸಾಹಿಬ್‌ಜಾದ ಫರ್ಹಾನ್ ಮತ್ತು ಶಮಿಲ್ ಹುಸೇನ್ ಸೇರಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿರುವ ಪಾಕಿಸ್ತಾನ ಸಾಹಿಬ್‌ಜಾದ ಫರ್ಹಾನ್ ಅವರಿಗೆ ಏಕದಿನ ಸರಣಿಯಲ್ಲಿ ಅವಕಾಶ ನೀಡಲಾಗಿದೆ.

ಬಾಬರ್‌ಗೆ ಗೇಟ್‌ ಪಾಸ್‌

ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದ, ಬಾಬರ್ ಅಜಮ್, ಫಖರ್ ಜಮಾನ್ ಮತ್ತು ಸೈಮ್ ಅಯೂಬ್ ಅವರು ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ. ಚುಟುಕು ವಿಶ್ವಕಪ್‌ನಲ್ಲಿ ಬಾಬರ್‌ ಅಜಮ್ ನಿಧಾನಗತಿಯ ಬ್ಯಾಟಿಂಗ್‌ದ ಟೀಕೆಗೆ ಗುರಿಯಾಗಿದ್ದರು. ಮೆಗಾ ಈವೆಂಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಬಾಬರ್‌ಗೆ ಏಕದಿನ ತಂಡದಿಂದ ಕೈಬಿಡಲಾಗಿದೆ ಎಂದು ನಂಬಲಾಗಿದೆ. ಬಾಬರ್ ಅಜಮ್ ಕಳೆದ ವರ್ಷ ನವೆಂಬರ್‌ನಲ್ಲಿ ರಾವಲ್ಪಿಂಡಿಯಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಕೊನೆಯ ಏಕದಿನ ಸರಣಿಯನ್ನು ಆಡಿದ್ದರು. ಈ ಸರಣಿಯಲ್ಲಿ ಅವರು ಶತಕವನ್ನು ಸಹ ಬಾರಿಸಿದ್ದರು.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಪಾಕಿಸ್ತಾನ ತಂಡ: ಶಾಹೀನ್ ಶಾ ಆಫ್ರಿದಿ (ನಾಯಕ), ಅಬ್ದುಲ್ ಸಮದ್, ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫೈಸಲ್ ಅಕ್ರಂ, ಹ್ಯಾರಿಸ್ ರೌಫ್, ಹುಸೇನ್ ತಲಾತ್, ಮಾಜ್ ಸದಾಕತ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಂ ಜೂನಿಯರ್, ಘವ್ಜಿಕ್ ಮೊಹಮ್ಮದ್. ಸಾಹಿಬ್‌ಜಾದ ಫರ್ಹಾನ್, ಸಲ್ಮಾನ್ ಅಲಿ ಅಘಾ ಮತ್ತು ಶಮಿಲ್ ಹುಸೇನ್.

Story first published: Thursday, March 5, 2026, 11:41 [IST]
Other articles published on Mar 5, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+