For Quick Alerts
ALLOW NOTIFICATIONS  
For Daily Alerts
 

Babar Azam: ವಿರಾಟ್ ಕೊಹ್ಲಿ ದಾಖಲೆಯ ಸಮಕ್ಕೆ ನಿಂತ ಬಾಬರ್

ಕಳೆದ ಕೆಲವು ದಿನಗಳಿಂದ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದ ಪಾಕಿಸ್ತಾನ ತಂಡದ ಸ್ಟಾರ್ ಆಟಗಾರ ಬಾಬರ್‌ ಅಜಮ್‌ ಮತ್ತೆ ಫಾರ್ಮ್‌ ಕಂಡುಕೊಂಡಿದ್ದಾರೆ. ರಾವಲ್ಪಿಂಡಿಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಬಾಬರ್‌ ಕ್ಲಾಸಿಕ್‌ ಬ್ಯಾಟಿಂಗ್ ನಡೆಸಿ ಅಬ್ಬರಿಸಿದರು. ಈ ಮೂಲಕ ಬಾಬರ್‌, ವಿರಾಟ್‌ ಕೊಹ್ಲಿ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

ರಾವಲ್ಪಿಂಡಿಯಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 195 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಜಿಂಬಾಬ್ವೆ 19 ಓವರ್‌ಗಳಲ್ಲಿ 126 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ ಆಡಿದ ಮೂರು ಪಂದ್ಯಗಳಲ್ಲಿ ಜಯಸಾಧಿಸಿದೆ.

Babar Azam Equals Virat Kohli s Record for Most T20 Half-Centuries After Stunning Knock vs Zimbabwe

29 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕ್ ತಂಡಕ್ಕೆ ಸಾಹಿಬ್‌ಜಾದಾ ಫರ್ಹಾನ್ ಹಾಗೂ ಬಾಬರ್‌ ಅಜಮ್‌ ಜೋಡಿ ಜಿಂಬಾಬ್ವೆ ಬೌಲರ್‌ಗಳನ್ನು ಕಾಡಿದರು. ಈ ಜೋಡಿ 77 ಎಸೆತಗಳಲ್ಲಿ 103 ರನ್‌ ಬಾರಿಸಿ ಮಿಂಚಿದರು. ಸಾಹಿಬ್‌ಜಾದಾ ಫರ್ಹಾನ್ 4 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 63 ರನ್‌ ಸಿಡಿಸಿ ಔಟ್ ಆದರು. ಇನ್ನು ಬಾಬರ್‌ ಅಜಮ್‌ ಅವರು 52 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 74 ರನ್‌ ಸಿಡಿಸಿದರು.

ಬಾಬರ್‌ ಅಜಮ್‌ 134 ಟಿ20 ಪಂದ್ಯಗಳಲ್ಲಿ 39.56ರ ಸರಾಸರಿಯಲ್ಲಿ 4392 ರನ್‌ ಸಿಡಿಸಿದ್ದಾರೆ. ಈ ವೇಳೆ 3 ಶತಕ ಹಾಗೂ 38 ಅರ್ಧಶತಕ ಗಳಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಬಾಬರ್‌ ಅಜಮ್‌, ವಿರಾಟ್‌ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದರು.

ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ಬ್ಯಾಟರ್ಸ್‌

ಬಾಬರ್‌ ಅಜಮ್‌, ಪಾಕಿಸ್ತಾನ, 38 ಅರ್ಧಶತಕ
ವಿರಾಟ್‌ ಕೊಹ್ಲಿ, ಭಾರತ, 38 ಅರ್ಧಶತಕ
ರೋಹಿತ್ ಶರ್ಮಾ, ಭಾರತ, 37 ಅರ್ಧಶತಕ
ಮೊಹಮ್ಮದ್‌ ರಿಜ್ವಾನ್‌, ಪಾಕಿಸ್ತಾನ, 31 ಅರ್ಧಶತಕ
ಡೇವಿಡ್ ವಾರ್ನರ್‌, ಆಸ್ಟ್ರೇಲಿಯಾ, 29 ಅರ್ಧಶತಕ

Babar Azam Equals Virat Kohli s Record for Most T20 Half-Centuries After Stunning Knock vs Zimbabwe

ಇನ್ನು ವಿರಾಟ್‌ ಕೊಹ್ಲಿ ಅವರ ದಾಖಲೆಯನ್ನು ಅಳಿಸಲು ಇನ್ನು ಒಂದು ಅರ್ಧಶತಕ ಬೇಕಾಗಿದೆ. ಮುಂಬರುವ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇನ್ನೊಂದು ಅರ್ಧಶತಕ ಬಾರಿಸಿದರೆ ವಿರಾಟ್‌ ದಾಖಲೆ ಅಳಿಸಬಹುದು.

ಪಂದ್ಯದ ಫಲಿತಾಂಶ

ಪಾಕಿಸ್ತಾನ ನೀಡಿದ 196 ರನ್‌ ಗಳ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡದ ಪರ ರಯಾನ್ ಬರ್ಲ್ ಹಾಗೂ ನಾಯಕ ಸಿಕಂದರ್ ರಾಜಾ ಅವರು ಮಾತ್ರ ಪಾಕ್‌ ಬೌಲರ್‌ಗಳನ್ನು ಕೊಂಚ ಕಾಡಿದರು. ಸಿಕಂದರ್ ರಾಜಾ 18 ಎಸೆತಗಳಲ್ಲಿ 23 ರನ್‌ ಬಾರಿಸಿದರೆ, ರಯಾನ್ ಬರ್ಲ್ 49 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 67 ರನ್‌ ಬಾರಿಸಿ ಸೋಲಿನಲ್ಲಿ ಮಿಂಚಿದರು. ಉಳಿದ ಬ್ಯಾಟರ್‌ಗಳು ಡಬಲ್‌ ಡಿಜಿಟ್‌ ತಲುಪಲೇ ಇಲ್ಲ. ಅಂತಿಮವಾಗಿ ಜಿಂಬಾಬ್ವೆ 126 ರನ್‌ಗಳಿಗೆ ಆಲೌಟ್ ಆಯಿತು. ಪಾಕ್‌ ಪರ ಉಸ್ಮಾನ್ ತಾರಿಕ್ 18 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು.

Story first published: Monday, November 24, 2025, 8:00 [IST]
Other articles published on Nov 24, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+