ಏಷ್ಯಾಕಪ್ ಟೂರ್ನಿಯ ಫೈನಲ್‌ಗೇರಲು ಅತ್ಯಂತ ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಪಾಕಿಸ್ತಾನ ಶ್ರೀಲಂಕಾ ವಿರುದ್ಧ ರೋಚಕ ಸೋಲು ಅನುಭವಿಸಿದೆ. ಈ ಮೂಲಕ ಪಾಕಿಸ್ತಾನ ಫೈನಲ್‌ಗೆ ಪ್ರವೇಶಿಸುವ ಅವಕಾಶ ಕಳೆದುಕೊಂಡಿದ್ದು ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಹಳು ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ನಡೆಸಲಿದೆ.
ಶ್ರೀಲಂಕಾ ವಿರುದ್ಧದ ನಿರ್ಣಾಯಕ ಸೋಲಿನ ಬಳಿಕ ಪಾಕಿಸ್ತಾನ ಭಾರೀ ಆಘಾತಕ್ಕೆ ಒಳಗಾಗಿದೆ. ವಿಶ್ವಕಪ್ ಸನಿಹದಲ್ಲಿರುವಾಗ ಏಷ್ಯಾಕಪ್ ಗೆದ್ದು ಅದ್ಭುತವಾಗಿ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವ ಲೆಕ್ಕಾಚಾರದಲ್ಲಿದ್ದ ಪಾಕಿಸ್ತಾನ ತಂಡ ಫೈನಲ್‌ಗೆ ಕೂಡ ಪ್ರವೇಶಿಸಲು ಸಾಧ್ಯವಾಗದಿರುವುದು ಆ ತಂಡಕ್ಕೆ ಭಾರೀ ಹಿನ್ನಡೆಯುಂಟು ಮಾಡಿದೆ. ಈ ಆಘಾತಕಾರಿ ಸೋಲಿನ ಬಳಿಕ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹೇಳಿಕೆ ನೀಡಿದ್ದಾರೆ.

"ನಾವು ನಮ್ಮ ಅತ್ಯುತ್ತಮ ಬೌಲಿಂಗ್ ಮಾಡಲು ನಿರ್ಧರಿಸಿದೆವು. ಕೊನೇಯದಕ್ಕಿಂತ ಹಿಂದಿನ ಓವರ್ ಮಾಡುವಂತೆ ಶಾಹೀನ್ ಅಫ್ರಿದಿಯಲ್ಲಿ ಕೇಳಿಕೊಂಡಿದ್ದೆ ಮತ್ತು ಜಮಾನ್ ಮೇಲೆ ನಂಬಿಕೆಯಿಟ್ಟೆ. ಶ್ರೀಲಂಕಾ ಇಲ್ಲಿ ಬಹಳ ಅದ್ಭಯತವಾಗಿ ಆಡಿದೆ. ನಮಗಿಂತ ಅವರು ಉತ್ತಮ ಕ್ರಿಕೆಟ್ ಆಡಿದರು" ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹೇಳಿಕೆ ನೀಡಿದ್ದಾರೆ.
ಮುಂದುವರುದ ಅವರು ಸದೀರ ಸಮರವಿಕ್ರಮ ಮತ್ತು ಕುಸಾಲ್ ಮೆಂಡಿಸ್ ಮೂರನೇ ವಿಕೆಟ್‌ಗೆ 100 ರನ್‌ಗಳ ಜೊತೆಯಾಟವನ್ನು ನೀಡಿದಾಗಲೇ ಪಾಕಿಸ್ತಾನ ಶ್ರೀಲಂಕಾವನ್ನು ಮುಂದೆ ಹೋಗಲು ಅವಕಾಶ ಮಾಡಿಕೊಟ್ಟಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ನಾವು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಅದೇ ಕಾರಣಕ್ಕೆ ನಾವು ಈ ಪಂದ್ಯವನ್ನು ಕಳೆದುಕೊಂಡೆವು. ಮಧ್ಯಮೋವರ್‌ಗಳಲ್ಲಿ ನಾವು ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ. ಆ ಜೊತೆಯಾಟ ನಮಗೆ ಬಹಳ ಆಘಾತ ನೀಡಿತು. ನಾವು ಉತ್ತಮ ಆರಂಭವನ್ನು ಪಡೆದೆವು ಹಾಗೂ ಉತ್ತಮವಾಗಿಯೇ ಮುಗಿಸಿದೆವು. ಆದರೆ ನ್ಮ ಮಧ್ಯಮ ಓವರ್ ಉತ್ತಮವಾಗಿರಲಿಲ್ಲ. ಅದುವೇ ನಮಗೆ ಕೊರತೆಯಾಯಿತು" ಎಂದಿದ್ದಾರೆ ಬಾಬರ್ ಅಜಂ.
ಮಳೆಯಿಂದ ಅಡಚಣೆಗೊಳಗಾದ ಪಂದ್ಯವನ್ನು 42 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 7 ವಿಕೆಟ್ ಕಳೆದುಕೊಂಡು 252 ರನ್‌ಗಳನ್ನು ಕಲೆಹಾಕಿತು. ಹೀಗಾಗಿ ಶ್ರೀಲಂಕಾ ಮುಂದೆ ಸವಾಲಿನ ಮೊತ್ತವನ್ನು ನಿಗದಿಪಡಿಸುವಲ್ಲಿ ಪಾಕಿಸ್ತಾನ ಪಡೆ ಯಶಸ್ವಿಯಾಗಿತ್ತು. ಆರಂಭದಲ್ಲಿ ಬ್ಯಾಟಿಂಗ್‌ನಲ್ಲಿ ಭಾತರೀ ಹಿನ್ನಡೆ ಅನುಭವಿಸಿದ್ದರೂ ಮೊಹಮ್ಮದ್ ರಿಜ್ವಾನ್ ಹಾಗೂ ಇಫ್ತಿಕಾರ್ ಅಹ್ಮದ್ ಅವರ ಅಮೋಘ ಆಟ ಪಾಕ್ ಬ್ಯಾಟಿಂಗ್‌ಗೆ ಭಾರೀ ದೊಡ್ಡ ಚೇತರಿಕೆ ನೀಡುವಲ್ಲಿ ಯಶಸ್ವಿಯಾಗಿತ್ತು.
ಇದನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಕುಸಾಲ್ ಮೆಂಡಿಸ್, ಸುದೀರ ಸಮರವಿಕ್ರಮ ಚರಿತ್ ಅಸಲಂಕಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಭರ್ಜರಿಯಾಗಿ ಗುರಿ ಬೆನ್ನಟ್ಟಲು ಕಾರಣವಾದರು. ಕುಸಾಲ್ ಮೆಂಡಿಸ್ 91 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರೆ ಸಮರವಿಕ್ರಮ 48 ರನ್‌ಗಳನ್ನು ಕಲೆಹಾಕಿದರು. ಈ ಜೋಡಿ ನೀಡಿದ 100 ರನ್‌ಗಳ ಜೊತೆಯಾಟ ಲಂಕಾ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದರು. ಇನ್ನು ಚರಿತ ಅಸಲಂಕಾ ಕೊನೆಯವರೆಗೂ ನಿಂತು ತಂಡವನ್ನು ಗೆಲುವಿನ ದಡ ಸೇರಿಸಿದ್ದಲ್ಲದೆ ಶ್ರೀಲಂಕಾ ಫೈನಲ್‌ಗೆ ಪ್ರವೇಶಿಸಲು ಕಾರಣವಾದರು.