Babar Azam: ಬಾಂಗ್ಲಾ ವಿರುದ್ಧ ದಾಖಲೆಯ ಪುಟ ಸೇರುವ ಕನಸಿನಲ್ಲಿ ಪಾಕ್ ಪ್ಲೇಯರ್
ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಗರಿಗೆದರಲು ಆರಂಭಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಪಾಕ್‌ಗೆ ಬಾಂಗ್ಲಾದೇಶ ಪ್ರವಾಸ ಬೆಳೆಸಲಿದೆ. ಈ ವೇಳೆ ಬಾಂಗ್ಲಾ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಲೆಕ್ಕಾಚಾರದಲ್ಲಿ ಈ ಸರಣಿ ಉಭಯ ತಂಡಗಳಿಗೂ ಮಹತ್ವದಾಗಿದೆ. ಈ ಸರಣಿಯಲ್ಲಿ ಪಾಕ್ ಅನುಭವಿ ಆಟಗಾರ ಚಿತ್ತ ದಾಖಲೆಯ ಮೇಲೆ ನೆಟ್ಟಿದೆ.
ಆಗಸ್ಟ್ 21 ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯಕ್ಕೆ ಈಗಾಗಲೇ ಎರಡೂ ತಂಡಗಳನ್ನು ಪ್ರಕಟಿಸಲಾಗಿದೆ. ಈ ವೇಳೆ ಪಾಕ್ ತಂಡದ ನಾಯಕರಾಗಿ ಶಾನ್ ಮಸೂದ್ ವಹಿಸಿಕೊಳ್ಳಲಿದ್ದು, ಪ್ರವಾಸಿ ಬಾಂಗ್ಲಾ ತಂಡವನ್ನು ನಜ್ಮುಲ್ ಹಸನ್ ಶಾಂಟೊ ಮುನ್ನಡೆಸಲಿದ್ದಾರೆ. ಈ ಸರಣಿಯಲ್ಲಿ ಗೆಲುವು ಸಾಧಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಉಭಯ ತಂಡಗಳದ್ದಾಗಿದೆ.

ದಾಖಲೆಯ ಸನಿಹದಲ್ಲಿ ಬಾಬರ್?
ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಪಾಕಿಸ್ತಾನ ತಂಡ ಐದನೇ ಸ್ಥಾನದಲ್ಲಿದೆ. ಪಾಕ್ ಸದ್ಯ 36.66 ಅಂಕಗಳನ್ನು ಕಲೆ ಹಾಕಿದೆ. ಈ ಸರಣಿಯಲ್ಲಿ ಪಾಕಿಸ್ತಾನ ತಂಡದ ಅನುಭವಿ ಬ್ಯಾಟರ್ ಬಾಬರ್ ಅಜಮ್ ಬಳಿ ವಿಶೇಷ ದಾಖಲೆಯನ್ನು ಬರೆಯುವ ಸುವರ್ಣ ಅವಕಾಶ ಇದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಬರ್ ಅಜಮ್ ಇದುವರೆಗೆ 52 ಪಂದ್ಯಗಳಲ್ಲಿ 3898 ರನ್ ಗಳಿಸಿದ್ದು, ಇದರಲ್ಲಿ 9 ಶತಕಗಳು ಮತ್ತು 26 ಅರ್ಧ ಶತಕಗಳಿವೆ. ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಯಲ್ಲಿ ಇನ್ನು 102 ರನ್ ಬಾರಿಸಿದ್ದೇ ಆದಲ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕು ಸಾವಿರ ರನ್ ಪೂರೈಸಲಿದ್ದಾರೆ. ರನ್ ಕಲೆ ಹಾಕಿರುವ ಲೆಕ್ಕಾಚಾರದಲ್ಲಿ ಬಾಬರ್ ಅಜಮ್ ಮಾಜಿ ಆಟಗಾರರನ್ನು ಹಿಂದಿಕ್ಕುವ ಅವಕಾಶ ಇದೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಬರ್ 17 ರನ್ ಗಳಿಸುತ್ತಿದ್ದಂತೆ ಹನೀಫ್ ಮೊಹಮ್ಮದ್ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಇನ್ನು 33 ರನ್ ಬಾರಿಸಿದರೆ ಮಜೀದ್ ಖಾನ್ ದಾಖಲೆ ಪೀಸ್ ಪೀಸ್ ಆಗಲಿದೆ.
ಪಾಕಿಸ್ತಾನ ತಂಡದ ಪರ ಅತಿ ಹೆಚ್ಚು ರನ್ ಕಲೆ ಹಾಕಿದ ಕೀರ್ತಿ ಯೂನಿಸ್ ಖಾನ್ ಅವರಿಗೆ ಸಲ್ಲುತ್ತದೆ. ಇವರು ಪಾಕಿಸ್ತಾನ ಪರ 118 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 10099 ರನ್ ಸಿಡಿಸಿದ್ದಾರೆ. ಈ ವೇಳೆ 34 ಶತಕಗಳು ಸೇರಿವೆ. ಇವರ ಸ್ಥಾನದಲ್ಲಿ ಜಾವೇದ್ ಮಿಯಾಂದಾದ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 8832 ರನ್ ಗಳಿಸಿದ್ದಾರೆ.
ಪಾಕಿಸ್ತಾನ ವಿರುದ್ಧ ಬಾಂಗ್ಲಾ ಟೆಸ್ಟ್ ಸರಣಿ ವೇಳಾಪಟ್ಟಿ
ಮೊದಲ ಟೆಸ್ಟ್: ಆಗಸ್ಟ್ 21 ರಿಂದ 25 ಆಗಸ್ಟ್ - ರಾವಲ್ಪಿಂಡಿ
ಎರಡನೇ ಟೆಸ್ಟ್: ಆಗಸ್ಟ್ 30 ರಿಂದ ಸೆಪ್ಟೆಂಬರ್ 3 - ಕರಾಚಿ
ಪಾಕಿಸ್ತಾನ ತಂಡ: ಶಾನ್ ಮಸೂದ್ (ನಾಯಕ), ಸೌದ್ ಶಕೀಲ್ (ಉಪನಾಯಕ), ಅಮೀರ್ ಜಮಾಲ್, ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಕಮ್ರಾನ್ ಗುಲಾಮ್, ಖುರ್ರಂ ಶಹಜಾದ್, ಮೀರ್ ಹಮ್ಜಾ, ಮೊಹಮ್ಮದ್ ಅಲಿ, ಮೊಹಮ್ಮದ್ ಹುರೈರಾ, ಮೊಹಮ್ಮದ್ ರಿಜ್ವಾನ್, ನಸೀಮ್ ಶಾ, ಸೈಮ್ ಅಯೂಬ್ ಸಲ್ಮಾನ್ ಅಲಿ ಅಗಾ, ಸರ್ಫರಾಜ್ ಅಹ್ಮದ್ ಮತ್ತು ಶಾಹೀನ್ ಶಾ ಆಫ್ರಿದಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications