Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Babar Azam: ವಿರಾಟ್ ಕೊಹ್ಲಿಗೆ ಹೋಲಿಸುತ್ತಿದ್ದ ಬಾಬರ್ ಅಜಮ್ ಆಟ ನಿಂತೋಯ್ತಾ?

ಭಾರತ ತಂಡ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಮ್ ನಡುವೆ ಹೋಲಿಕೆ ನಡೆಯುತ್ತಿದೆ. ಆದರೆ ಬಾಬರ್ ಅಜಮ್ ಇತ್ತೀಚೆಗೆ ಮೂರು ಮಾದರಿ ಕ್ರಿಕೆಟ್‌ನಲ್ಲಿ ಮಂಕಾಗಿದ್ದಾರೆ. ರನ್ ಗಳಿಸಲು ಪರದಾಟ ನಡೆಸುತ್ತಿರುವ ಬಾಬರ್, ರನ್ ಮಷಿನ್ ಕೊಹ್ಲಿಗೆ ಹೇಗೆ ಸಮಾನ ಎಂದು ಕ್ರಿಕೆಟ್‌ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.

ಮುಲ್ತಾನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಕೇವಲ 30 ರನ್ ಗಳಿಸಿ ಬಾಬರ್ ಔಟಾಗಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಬರ್ ಅಜಮ್ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಕ್ರಿಸ್ ವೋಕ್ಸ್ ಅವರ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗುವ ಮೂಲಕ ವಿಕೆಟ್‌ ಕಳೆದುಕೊಂಡಿದ್ದಾರೆ.

Babar Azam flopped again in the first Test match against England

2023ರ ಆರಂಭದಿಂದಲೂ ಬಾಬರ್‌ ಆಡಿರುವ 17 ಇನ್ನಿಂಗ್ಸ್‌ಗಳಲ್ಲಿ ಒಂದೂ ಅರ್ಧಶತಕ ಗಳಿಸಲು ಸಾಧ್ಯವಾಗಿಲ್ಲ. ಅವರು ತಮ್ಮ ಕೊನೆಯ ಟೆಸ್ಟ್ ಶತಕವನ್ನು 2022ರಲ್ಲಿ ಕರಾಚಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ದಾಖಲಿಸಿದ್ದಾರೆ. ಅಂದಿನಿಂದ ಅವರ ಬ್ಯಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸೈಲೆಂಟ್ ಆಗಿದೆ. ಇದರ ಬೆನ್ನಲ್ಲೇ ಅವರ ಆಟದ ಬಗ್ಗೆಯೂ ಹಲವು ಪ್ರಶ್ನೆಗಳು ಮೂಡಿವೆ.

ಬಾಬರ್ ಆಟ ನಿಂತೋಯ್ತಾ?

ಇಂಗ್ಲೆಂಡ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಬಾಬರ್ ಮೂರನೇ ವಿಕೆಟ್‌ಗೆ ಸೌದ್ ಶಕೀಲ್ ಅವರೊಂದಿಗೆ 61 ರನ್‌ಗಳ ಜೊತೆಯಾಟ ಆಡಿದರು. ಬಾಬರ್ ಮೊದಲ ದಿನ ಅಜೇಯ ಶತಕ ಹೊಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಮೊದಲ ದಿನದ ಆಟ ಮುಗಿಯುವ ಮುನ್ನವೇ ವಿಕೆಟ್ ಕಳೆದುಕೊಂಡರು. ಉತ್ತಮವಾಗಿ ಆಡುತ್ತಿದ್ದ ಬಾಬರ್ ತಮ್ಮ ಆಟವನ್ನು ಮುಂದಿವರೆಸಲು ಸಾಧ್ಯವಾಗಿಲ್ಲ. ಇದಾದ ನಂತರ, ಬಾಬರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತಿದೆ. ಮುಲ್ತಾನ್ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಅನುಕೂಲಕರವಾಗಿದ್ದು, ಬೌಲರ್‌ಗಳಿಗೆ ಅಷ್ಟೇನೂ ಪಿಚ್ ಉಪಯುಕ್ತವಿಲ್ಲ ಎನ್ನಲಾಗುತ್ತದೆ. ಇದರ ಹೊರತಾಗಿಯೂ, ಬಾಬರ್ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ಮುಲ್ತಾನ್ ಪಿಚ್ ಬಾಬರ್‌ಗೆ ಲಾರ್ಡ್ಸ್ ಪಿಚ್ ಅಂತೆ ಎಂದು ನೆಟ್ಟಿಗರು ಅಹಾಸ್ಯ ಮಾಡುತ್ತಿದ್ದಾರೆ.

ಬಾಂಗ್ಲಾದೇಶ ವಿರುದ್ಧ ಫೇಲ್

ಇತ್ತೀಚೆಗೆ ತವರಿನಲ್ಲಿ ಪಾಕಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಸೋತಿತ್ತು. ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಪಾಕಿಸ್ತಾನ ವಿರುದ್ಧ 0-2 ಅಂತರದಲ್ಲಿ ಬಾಂಗ್ಲಾದೇಶ ಗೆದ್ದು ದಾಖಲೆ ಬರೆದಿತ್ತು. ಈ ಸರಣಿಯಲ್ಲಿಯೂ ಬಾಬರ್ ಅಜಮ್ ಅಬ್ಬರಿಸಲಿಲ್ಲ. ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 22 ರನ್ ಗಳಿಸಿದ್ದರು. ಇದಾದ ಬಳಿಕ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 31 ರನ್ ಗಳಿಸಿದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 11 ರನ್‌ಗೆ ಸುಸ್ತಾಗಿದ್ದರು. ಒಟ್ಟು ಎರಡು ಟೆಸ್ಟ್ ಪಂದ್ಯಗಳಿಂದ ಬಾಬರ್ 64 ರನ್‌ ಕಲೆ ಹಾಕಿದ್ದರು.

ಬಾಂಗ್ಲಾದೇಶ ವಿರುದ್ಧದ ಸರಣಿಗೂ ಮುನ್ನ ಬಾಬರ್ ಅಜಮ್‌ನನ್ನು ಭಾರೀ ಗುಣಗಾನ ಮಾಡಲಾಗಿತ್ತು. ಕೆಲವು ಪಾಕ್ ಆಟಗಾರರು ಮತ್ತು ಮಾಧ್ಯಮಗಳು ಬಾಬರ್ ನನ್ನು ವಿರಾಟ್ ಕೊಹ್ಲಿ ಅವರೊಂದಿಗೆ ಹೋಲಿಕೆ ಮಾಡಲಾಗಿತ್ತು. ಆದರೆ ಕೊಹ್ಲಿಗೆ ಬಾಬರ್ ಯಾವುದರಲ್ಲೂ ಸಾಟಿಯಲ್ಲ ಎಂಬುದನ್ನು ಅವರೇ ಇದೀಗ ಬಹಿರಂಗಪಡಿಸಿದ್ದಾರೆ.

Story first published: Tuesday, October 8, 2024, 18:53 [IST]
Other articles published on Oct 8, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+