Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಿಂದ ಬಾಬರ್, ಇಮಾಮ್ ಹೊರಕ್ಕೆ

Babar Azam, Imam-ul-Haq ruled out of first Test against New Zealand

ನೇಪಿಯರ್: ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಿಂದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಾಮ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಇಮಾಮ್ ಉಲ್ ಹಕ್ ಹೊರ ಬಿದ್ದಿದ್ದಾರೆ. ಗಾಯಕ್ಕೀಡಾಗಿರುವುದರಿಂದ ಇಬ್ಬರೂ ಆರಂಭಿಕ ಟೆಸ್ಟ್‌ನಲ್ಲಿ ಆಡುತ್ತಿಲ್ಲ.

ಹೆಬ್ಬೆರಳಿನ ಗಾಯಕ್ಕೀಡಾಗಿರುವ ಬಾಬರ್ ಅಝಾಮ್ ಮತ್ತು ಇಮ್ ಉಲ್ ಹಕ್ ಬದಲಿಗೆ ಆರಂಭಿಕ ಟೆಸ್ಟ್‌ಗಾಗಿ ಪಾಕಿಸ್ತಾನದ 17 ಮಂದಿಯ ತಂಡದಲ್ಲಿ ಇಮ್ರಾನ್ ಬಟ್ ಅವರನ್ನು ಹೆಸರಿಸಲಾಗಿದೆ. ಇತ್ತಂಡಗಳ ನಡುವಿನ ಬಾಕ್ಸಿಂಗ್‌ ಡೇ ಟೆಸ್ಟ್‌ ಡಿಸೆಂಬರ್ 26-30ರ ವರೆಗೆ ನಡೆಯಲಿದೆ.

ಕಳೆದ ವಾರ ಕ್ವೀನ್ಸ್‌ಟೌನ್‌ನಲ್ಲಿ ನಡೆದಿದ್ದ ಅಭ್ಯಾಸದ ವೇಳೆ ಬಾಬರ್ ಅಝಾಮ್ ಬಲ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು, ಇಮಾಮ್ ಹಕ್ ಅವರ ಎಡ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಇನ್ನು ಇಬ್ಬರು ಆಡ್ತಾರೋ ಇಲ್ಲವೋ ಅನ್ನೋದು ಇನ್ನೂ ಖಾತರಿಯಾಗಿಲ್ಲ.

ಗಾಯಕ್ಕೀಡಾದ ಬಳಿಕ ಇಬ್ಬರೂ ಮತ್ತೆ ಅಭ್ಯಾಸ ಆರಂಭಿಸಿಲ್ಲ. ತಂಡದ ವೈದ್ಯಕೀಯ ಸಿಬ್ಬಂದಿ ಇಬ್ಬರ ಚೇತರಿಕೆಯತ್ತ ಗಮನ ಹರಿಸುತ್ತಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮಾಹಿತಿ ನೀಡಿದೆ.

Story first published: Monday, December 21, 2020, 14:19 [IST]
Other articles published on Dec 21, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+