Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Pak vs SA: ಪಂದ್ಯ ಸೋತ ಬಳಿಕ ಕೋಪಗೊಂಡ ಬಾಬರ್ ನವಾಜ್‌ಗೆ ಹೇಳಿದ್ದೇನು?

ಚೆನ್ನೈನಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಗಾಗಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಒಂದು ವಿಕೆಟ್‌ನಿಂದ ಗೆಲುವು ಸಾಧಿಸಿತು.

ಒಂದು ಹಂತದಲ್ಲಿ ಸುಲಭ ಗೆಲುವಿನ ನಿರಿಕ್ಷೆಯಲ್ಲಿದ್ದ ದಕ್ಷಿಣ ಆಫ್ರಿಕಾ ವಿಕೆಟ್‌ಗಳನ್ನು ಕಳೆದುಕೊಂಡು ಒತ್ತರಕ್ಕೆ ಸಿಲುಕಿತು. ವಿಕೆಟ್‌ಗಳನ್ನು ಪಡೆದು ಪಾಕಿಸ್ತಾನ ಸ್ಪಷ್ಟ ಮೇಲುಗೈ ಸಾಧಿಸಿತು, ಆದರೂ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

 Babar Azam Left Furious by Mohammad Nawazs Costly Bowling Error

ಮೊಹಮ್ಮದ್ ನವಾಜ್ ಬೌಲಿಂಗ್‌ನ ಮೊದಲ ಎಸೆತದಲ್ಲಿ ಶಂಸಿ ಒಂದು ರನ್ ಗಳಿಸಿದರೆ, ಎರಡನೇ ಎಸೆತದಲ್ಲಿ ಕೇಶವ್ ಮಹಾರಾಜ್ ಬೌಂಡರಿ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾಗೆ ಗೆಲುವು ತಂದುಕೊಟ್ಟರು, 23 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಪಾಕಿಸ್ತಾನದ ವಿರುದ್ಧ ಐಸಿಸಿ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿತು.

ನವಾಜ್ ವಿರುದ್ಧ ಕಿಡಿ ಕಾರಿದ ಬಾಬರ್

ಇನ್ನು ನವಾಜ್ ಕೆಟ್ಟ ಎಸೆತದಲ್ಲಿ ಮಹಾರಾಜ್ ಬೌಂಡರಿ ಬಾರಿಸುತ್ತಿದ್ದಂತೆ ನಾಯಕ ಬಾಬರ್ ಅಜಂ ತಾಳ್ಮೆ ಕಳೆದುಕೊಂಡರು, ಮೈದಾನದಲ್ಲೇ ನವಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ನವಾಜ್‌ಗೆ ಬಾಬರ್ ಬೈಯುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ತನ್ನ ಓವರ್‌ನ ಪ್ರಾರಂಭದಿಂದಲೇ ತನ್ನ ಸಾಲಿನಲ್ಲಿ ತಪ್ಪು ಮಾಡಿದ್ದಕ್ಕಾಗಿ ನವಾಜ್‌ ವಿರುದ್ಧ ಬಾಬರ್ ಕಿರುಚಿದರು. ಇದು ಪಂದ್ಯದಲ್ಲಿ ನಿರ್ಣಾಯಕ ಕ್ಷಣವಾಗಿತ್ತು. ಪಾಕಿಸ್ತಾನಿ ನಾಯಕ ಬಾಬರ್ ಅಜಮ್ "ಬರೀ ಒಂದೇ ರೀತಿ ಬಾಲ್ ಹಾಕ್ತೀಯಾ, ಮತ್ತೇನು ಬರಲ್ವಾ" ಎಂದು ಹೇಳಿದ್ದಾರೆ ಎಂದು ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿದೆ.

ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ಸತತ ನಾಲ್ಕು ಪಂದ್ಯಗಳಲ್ಲಿ ಸೋತಿದೆ. 2023 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇನ್ನೂ ತಾಂತ್ರಿಕವಾಗಿ ಜೀವಂತವಾಗಿದೆ, ಆದರೆ ಈ ಸೋಲು ತಂಡದ ಅವಕಾಶವನ್ನು ಕಡಿಮೆ ಮಾಡಿದೆ, ಇನ್ನೊಂದು ಪಂದ್ಯದಲ್ಲಿ ಸೋತರೂ ಪಾಕಿಸ್ತಾನ ಸೆಮಿಫೈನಲ್‌ನಿಂದ ಹೊರಬೀಳುವುದು ಖಚಿತವಾಗಲಿದೆ.

ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಪಾಕಿಸ್ತಾನ ನಾಲ್ಕು ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪಾಕಿಸ್ತಾನಕ್ಕೆ ಇನ್ನೂ ಮೂರು ಪಂದ್ಯಗಳು ಉಳಿದಿದ್ದು, ಬಾಂಗ್ಲಾದೇಶ, ನ್ಯೂಜಿಲೆಂಡ್, ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

Story first published: Saturday, October 28, 2023, 13:00 [IST]
Other articles published on Oct 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+