For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಕ್ರಿಕೆಟ್: ಪಾಕಿಸ್ತಾನ ಟೆಸ್ಟ್ ತಂಡಕ್ಕೂ ಬಾಬರ್ ಅಜಂ ನಾಯಕ

Babar Azam replaces Azhar Ali as Pakistan Test captain

ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ನಾಯಕನ ಸ್ಥಾನದಿಂದ ಅಜರ್ ಅಲಿಯನ್ನು ಕಿತ್ತುಹಾಕಲಾಗಿದೆ. ಪಾಕಿಸ್ತಾನ ಟೆಸ್ಟ್ ಕ್ರಿಕೆಟ್‌ನ ನಾಯಕತ್ವವನ್ನು ಕೂಡ ಸೀಮಿತ ಓವರ್‌ಗಳ ತಂಡದ ನಾಯಕನಾಗಿದ್ದ ಬಾಬರ್ ಅಜಂ ಹೆಗಲಿಗೆ ಒಪ್ಪಿಸಿದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ. ಹೀಗಾಗಿ ಬಾಬರ್ ಅಜಂ ಈಗ ಪಾಕಿಸ್ತಾನದ ಮೂರು ಮಾದರಿಗೂ ನಾಯಕನಾಗಿ ಮುನ್ನಡೆಸಲಿದ್ದಾರೆ.

ನ್ಯೂಜಿಲೆಂಡ್ ವಿರುದ್ದದ ಸರಣಿಗೂ ಮುನ್ನ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ನಿರ್ಧಾರವನ್ನು ಕೈಗೊಂಡಿದೆ. ಪಿಸಿಬಿ ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡುವ ಮೂಲಕ ಈ ಬೆಳವಣಿಗೆಯನ್ನು ಖಚಿತಪಡಿಸಿದೆ. ಅಜರ್ ಅಲಿಯನ್ನು ನಾಯಕತ್ವದಿಂದ ಕೆಳಗಿಸಳಿಸುವಿವುದು ಖಚಿತವಾಗಿತ್ತು. ಆದರೆ ನಾಯಕ ಯಾರು ಎಂಬ ಬಗ್ಗೆ ಸಾಕಷ್ಟು ಗೊಂದಲಗಳು ಮುಂದುವರಿದಿತ್ತು. ಆದರೆ ಬಾಬರ್ ಅಜಂಗೆ ಈ ಜವಾಬ್ಧಾರಿಯನ್ನು ಪಿಸಿಬಿ ವಹಿಸಿದೆ.

26ರ ಹರೆಯದ ಬಾಬರ್ ಅಜಂ ಈ ಮೂಲಕ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಯ ಮೂಲಕ ಈ ಹೊಸ ಜವಾಬ್ಧಾರಿಯನ್ನು ಬಾಬರ್ ವಹಿಸಿಕೊಳ್ಳಲಿದ್ದಾರೆ. ಡಿಸೆಂಬರ್ 26ರಿಂದ ಈ ಟೆಸ್ಟ್ ಸರಣಿ ಆರಂಭವಾಗಲಿದೆ.

ಅಜರ್ ಅಲಿ ಸದ್ಯ ಪಾಕ್ ತಂಡದಲ್ಲಿರುವ ಅನುಭವಿ ಆಟಗಾರನಾಗಿದ್ದಾರೆ. 35ರ ಹರೆಯದ ಅಜರ್ 81 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಆದರೆ ನಾಯಕನಾಗಿ ಅಜರ್ ಪ್ರದರ್ಶನ ಉತ್ತಮವಾಗಿರಲಿಲ್ಲ. ವೈಯಕ್ತಿಕವಾಗಿಯೂ ಅಜರ್ ಸಾಕಷ್ಟು ವೈಫಲ್ಯವನ್ನು ಅನುಭವಿಸಿದ ಬಳಿಕ ಪಿಸಿಬಿ ಈ ನಿರ್ಧಾರವನ್ನು ಕೈಗೊಂಡಿತ್ತು.

ಈ ಹೊಸ ಜವಾಬ್ಧಾರಿಯನ್ನು ವಹಿಸಿಕೊಂಡ ಬಳಿಕ ಬಾಬರ್ ಅಜಂ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಇದು ನನ್ನ ಪಾಲಿಗೆ ಕನಸು ನನಸಾದ ಸಂದರ್ಭವಾಗಿದೆ. ನನಗೆ ಸಿಕ್ಕ ಹೊರ ಜವಾಬ್ಧಾರಿಯನ್ನು ವಹಿಸಿಕೊಳ್ಳಲು ಸಿದ್ಧನಾಗಿದ್ದೇನೆ. ಇದು ನನಗೆ ಇನ್ನಷ್ಟು ಉತ್ತೇಜನ ನೀಡುತ್ತದೆ ಎಂದು ಬಾಬರ್ ಅಜಂ ಪ್ರತಿಕ್ರಿಯಿಸಿದ್ದಾರೆ.

Story first published: Wednesday, November 11, 2020, 12:35 [IST]
Other articles published on Nov 11, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+