For Quick Alerts
ALLOW NOTIFICATIONS  
For Daily Alerts
 

Babar Azam: ವಿರಾಟ್‌ ಹಾದಿ ಹಿಡಿದ ಬಾಬರ್‌ ಅಜಮ್‌: ಹೀಗೆ ಕರಿಯಲೇ ಬೇಡಿ..

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ವಿಶ್ವದಲ್ಲೇ ಅಪಾರ ಅಭಿಮಾನಿಗಳನ್ನು ಹೊಂದಿರುವ ಆಟಗಾರ. ಮಾರ್ಡನ್‌ ಡೇ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಇವರಿಗೂ ಸ್ಥಾನ. ಇವರಿಗೆ ಪ್ರೀತಿಯಿಂದ ಅಭಿಮಾನಿಗಳು ನಾನಾ ನಾಮಧೇಯದಿಂದ ಕರೆಯುತ್ತಿದ್ದರು. ಆದರೆ ವಿರಾಟ್‌ ಕೊಹ್ಲಿ ಕಳೆದ ಬಾರಿ ಆರ್‌ಸಿಬಿ ಕಾರ್ಯಕ್ರಮದಲ್ಲಿ ನನ್ನನ್ನು ಕಿಂಗ್‌ ಕೊಹ್ಲಿ ಎಂದು ತಿಳಿಸಿದ್ದರು. ಆದರೆ ಅಭಿಮಾನಿಗಳು ಮಾತ್ರ ಹೀಗೆ ಕರಿಯುತ್ತಲೇ ಇದ್ದಾರೆ.

ಭಾರತದ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಹೇಗೆ ಅಭಿಮಾನಿಗಳ ಬೆಂಬಲ ಇದೆಯೋ ಹಾಗೆ ಬಾಬರ್‌ಗೂ ವಿಶ್ವದಲ್ಲೇ ಫ್ಯಾನ್‌ ಫಾಲೋವರ್ಸ್‌ ಇದ್ದಾರೆ. ಇದೇ ವೇಳೆ ಪಾಕಿಸ್ತಾನದ ಬಾಬರ್ ಅಜಮ್ ತಮ್ಮ ಅಭಿಮಾನಿಗಳಿಗೆ ತಮಗೆ ಕಿಂಗ್‌ ಎಂದು ಕರೆಯಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ತಮ್ಮ ವೈಯಕ್ತಿಕ ಸಾಧನೆಗಿಂತ ತಂಡದ ಸಾಧನೆ ಹೆಚ್ಚು ಮುಖ್ಯ ಎಂದು ಇವರು ಇದೇ ವೇಳೆ ತಿಳಿಸಿದ್ದಾರೆ.

Babar Azam Requests Fans Not to Call Him King as Pakistan Reaches Tri-Series Final

ಪಾಕ್‌ ಸಾಧನೆ

ಪಾಕಿಸ್ತಾನದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ, ಆರು ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಪಾಕ್‌ 353 ರನ್‌ಗಳ ಗುರಿಯನ್ನು ಚೇಸ್‌ ಮಾಡಿ ಬೀಗಿತು. ಈ ವೇಳೆ ಪಾಕ್‌ ನಾಯಕ ಬಾಬರ್‌ ಅಜಮ್ ಹಾಗೂ ಸಲ್ಮಾನ್‌ ಅಘಾ ಶತಕ ಬಾರಿಸಿ ತಂಡಕ್ಕೆ ನೆರವಾದರು. ಇದೇ ಪಂದ್ಯದ ಬಳಿಕ ಬಾಬರ್ ಅಜಮ್‌ ಸುದ್ದಿಗಾಗರೊಂದಿಗೆ ಮಾತನಾಡುತ್ತಾ, ದಯವಿಟ್ಟು ನನ್ನನ್ನು ಕಿಂಗ್ ಎಂದು ಕರೆಯುವುದನ್ನು ನಿಲ್ಲಿಸಿ. ನಾನು ಕಿಂಗ್ ಅಲ್ಲ. ತಂಡ ನನಗೆ ಈಗ ಹೊಸ ಪಾತ್ರವನ್ನು ನೀಡಿದೆ ಆ ಪಾತ್ರ ನಿಭಾಯಿಸುವತ್ತ ಚಿತ್ತ ನೆಟ್ಟಿದ್ದೇನೆ ಎಂದರು.

ವೈಯಕ್ತಿಕ ಪ್ರದರ್ಶನಗಳನ್ನು ಮೀರಿ ಆಡಬೇಕಾಗುತ್ತದೆ. ಅಲ್ಲದೆ ಇದೇ ವೇಳೆ ತಮ್ಮ ಮೇಲಿನ ಸವಾಲುಗಳನ್ನು ಮೀರಿ ತಂಡದ ಪ್ರದರ್ಶನದತ್ತ ಕೇಂದ್ರೀಕರಿಸುವುದು ಒಳ್ಳೆಯದು. ನಾನು ಈ ಹಿಂದೆ ಏನನ್ನು ಸಾಧಿಸಿದ್ದೇನೋ ಅದೆಲ್ಲಾ ಭೂತಕಾಲಕ್ಕೆ ಬಿಟ್ಟದ್ದು. ಸದ್ಯ ನಾನು ವರ್ತಮಾನದಲ್ಲಿ ಇರಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

Babar Azam Requests Fans Not to Call Him King as Pakistan Reaches Tri-Series Final

ಶುಕ್ರವಾರ ನಡೆಯಲಿರುವ ಪಂದ್ಯದಲ್ಲಿ ಬಾಬರ್‌ 10 ರನ್‌ಗಳನ್ನು ಗಳಿಸಿದ್ದೇ ಆದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಆರು ಸಾವಿರ ರನ್‌ ಕಲೆ ಹಾಕಿದ ಸಾಧನೆ ಮಾಡಲಿದ್ದಾರೆ.

ಪಾಕ್‌ ಫೈನಲ್‌ಗೆ

ಮಹತ್ವದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ದಾಖಲಿಸಿದ ಪಾಕ್‌ ತ್ರಿಕೋನ ಸರಣಿಯ ಫೈನಲ್‌ಗೆ ಅರ್ಹತೆ ಪಡೆದಿದೆ. ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪಾಕ್‌ ನ್ಯೂಜಿಲೆಂಡ್ ತಂಡದ ಸವಾಲು ಎದುರಿಸಲಿದೆ. ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ನಡೆಯುವ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ. ಬಾಬರ್‌ ಅಜಮ್‌f ಪ್ರಸಕ್ತ ಸರಣಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದರು. ಇವರು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಲ್ಲದೆ ಭಾರತ ಹಾಗೂ ಪಾಕಿಸ್ತಾನ ನಡುವಣ ಫೆಬ್ರವರಿ 23 ರಂದು ನಡೆಯುವ ಪಂದ್ಯ ಕುತೂಹಲ ಹೆಚ್ಚಿಸಿದೆ.

Story first published: Thursday, February 13, 2025, 20:00 [IST]
Other articles published on Feb 13, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+