Babar Azam: ಪಾಕ್ ತಂಡದ ನಾಯಕತ್ವವನ್ನು ತ್ಯಜಿಸಿದ ಬಾಬರ್ ಅಜಮ್: ಕಾರಣವೇನು?
ಪಾಕಿಸ್ತಾನ ಕ್ರಿಕೆಟ್ ಈಗ ಹಲವು ಸುದ್ದಿಗಳ ಕೇಂದ್ರವಾಗಿದೆ. ಈ ಬಾರಿ ಆಡಳಿತ ಮಂಡಳಿಯಿಂದ ಬಂದಿರುವ ಸುದ್ದಿಯಲ್ಲ. ಈ ಬಾರಿ ಪಾಕ್ ಕ್ರಿಕೆಟ್ ತಂಡದ ನಾಯಕತ್ವದಾಗಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವ ಸ್ಥಾನದಿಂದ ಅನುಭವಿ ಆಟಗಾರ ಬಾಬರ್ ಅಜಮ್ ಕೆಳಗಿಳಿದಿದ್ದಾರೆ.
ಪಾಕ್ ತಂಡದ ಚುಕ್ಕಾಣಿಯನ್ನು ಹಿಡಿದಿದ್ದ ಬಾಬರ್ ರಾತೋ ರಾತ್ರಿ ನಾಯಕತ್ವ ತ್ಯಜಿಸಿದ್ದಾರೆ. ಬಾಬರ್ ಒಂದೇ ವರ್ಷದಲ್ಲಿ ಎರಡನೇ ಬಾರಿ ಪಾಕ್ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮೊದಲ ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾದಾಗ, ಅವರು ಮೂರು ಫಾರ್ಮೆಟ್‌ಗಳ ನಾಯಕತ್ವದಿಂದ ಕೆಳಗಿಳಿದಿದ್ದರು.

ಟಿ20 ವಿಶ್ವಕಪ್‌ಗೂ ಮೊದಲು ಬಾಬರ್ ಅಜಮ್ ಅವರನ್ನು ಸೀಮಿತ ಓವರ್‌ಗಳ ನಾಯಕರನ್ನಾಗಿ ಪಿಸಿಬಿ ನೇಮಿಸಿತು. ಇದೀಗ ಬಾಬರ್ ಮತ್ತೊಮ್ಮೆ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಬಾಬರ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಬಾಬರ್ ಬರೆದಿದ್ದು ಏನು?
ಪಿಸಿಬಿ ಮತ್ತು ಟೀಮ್ ಮ್ಯಾನೇಜ್‌ಮೆಂಟ್‌ಗೆ ನೀಡಿದ ಸೂಚನೆಗೆ ಅನುಗುಣವಾಗಿ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಕ್ರಿಕೆಟ್ ಅಂಗಳದಲ್ಲಿ ದೇಶವನ್ನು ಮುನ್ನಡೆಸಿರುವುದು ಖುಷಿಯ ವಿಚಾರ. ಈಗ ನಾನು ನಾಯಕತ್ವದಿಂದ ಕೆಳಗಿಳಿದು, ಬ್ಯಾಟಿಂಗ್‌ಗೆ ಕೇಂದ್ರಿ ಕರಿಸಲು ಬಯಸುತ್ತೇನೆ. ನಾಯಕತ್ವದ ಅನುಭವ ಚೆನ್ನಾಗಿದೆ. ಈ ಜವಾಬ್ದಾರಿ ನನ್ನ ಮೇಲಿನ ಕೆಲಸದ ಹೊರೆಯನ್ನು ಹೆಚ್ಚಿಸಿದೆ. ನಾನು ಬ್ಯಾಟಿಂಗ್‌ಗೆ ಒತ್ತ ನೀಡಲು ಬಯಸಿರುವುದಾಗಿ ಬರೆದುಕೊಂಡಿದ್ದಾರೆ.

ನಾಯಕತ್ವದಿಂದ ಕೆಳಗೆ ಇಳಿದಿರುವುದು ನನ್ನ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ಹರಿಸಲು ಅನುಕೂಲವಾಗುತ್ತದೆ. ಅಭಿಮಾನಿಗಳು ನನ್ನ ಮೇಲೆ ಇಟ್ಟ ನಂಬಿಕೆ ಹಾಗೂ ವಿಶ್ವಾಸಕ್ಕೆ ಧನ್ಯವಾದಗಳು. ಅಭಿಮಾನಿಗಳ ಪ್ರೋತ್ಸಾಹ ಹಾಗೂ ಉತ್ಸಾಹ ನನಗೆ ಇಷ್ಟ. ನನ್ನ ಸಾಧನೆಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿದೆ. ಇದೇ ವೇಳೆ ಅನುಭವಿ ಬ್ಯಾಟರ್ ಬಾಬರ್ ಅಜಮ್ ನಾಯಕತ್ವದಿಂದ ಕೆಳಗೆ ಇಳಿದಿದ್ದ ತಂಡಕ್ಕೆ ಪೆಟ್ಟು ನೀಡಲಿದೆ. ಬಾಬರ್ ಅಜಮ್ ಅವರಿಂದ ತೆರವಾದ ನಾಯಕತ್ವ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದೇ ದೊಡ್ಡ ಪ್ರಶ್ನೆ ಆಗಿದೆ.
ಹೇಗಿದೆ ಬಾಬರ್ ಅಜಮ್ ನಾಯಕತ್ವ
ಬಾಬರ್ ನಾಯಕತ್ವದಲ್ಲಿ, ಪಾಕಿಸ್ತಾನ ತಂಡು ಒಟ್ಟು 43 ಏಕದಿನ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 26 ಗೆಲುವು, 15 ಸೋಲು ಕಂಡಿದೆ. ಅಲ್ಲದೆ ಒಂದು ಪಂದ್ಯ ಟೈ ಆಗಿದೆ. ಇನ್ನು ಟಿ 20 ಕ್ರಿಕೆಟ್‌ನಲ್ಲಿ ಬಾಬರ್ 85 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ ತಂಡ 48ರಲ್ಲಿ ಗೆಲುವು ಹಾಗೂ 29 ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಟೈ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications