ಆಟಗಾರರ ಒಮ್ಮೊಮ್ಮೆ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಾರೆ. ಅಲ್ಲದೆ ತಮ್ಮ ಖದರ್‌ಗೆ ಮರಳಲು ಸ್ಟಾರ್ ಹಗಲಿರುಳು ಶ್ರಮಿಸುತ್ತಾರೆ. ಆದರೆ ಕೆಟ್ಟ ಸಮಯ ಬಂದಾಗ ಏನಾದ್ರೂ ಸರಿ ಆಗುವುದು ಕಷ್ಟ ಎಂಬ ಮಾತು ಇದೆ. ಇದಕ್ಕೆ ಈ ಪ್ಲೇಯರ್ ಉತ್ತಮ ಉದಾಹರಣೆ. ಇವರನ್ನು ಕೆಲ ತಿಂಗಳ ಹಿಂದೆ ವಿಶ್ವದ ಸ್ಟಾರ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಆದರೆ ಆ ಆಟಗಾರನ ಫರ್ಮಾ ಮಾತ್ರ ದಿನದಿಂದ ದಿನಕ್ಕೆ ಹದಗೆಡುತ್ತಲೇ ಹೋಗುತ್ತಿದೆ.
ಸ್ಟಾರ್ ಆಟಗಾರ ಮೈದಾನಕ್ಕೆ ಇಳಿದರೆ ಮೂರಂಕಿ ಮುಟ್ಟಿ ಸಂಭ್ರಮಿಸುತ್ತಿದ್ದರು. ಆದರೆ ಲಯ ಕಳೆದುಕೊಂಡರೆ ಒಂದೊಂದು ರನ್ ಬಾರಿಸಲು ಸಹ ಆಟಗಾರ ಪರದಾಟ ನಡೆಸಬೇಕಾಗುತ್ತದೆ. ಪಾಕಿಸ್ತಾನದ ಸ್ಟಾರ್ ಆಟಗಾರ ಬಾಬರ್ ಅಜಮ್ ಸಹ ಈಗ ರನ್ ಕಲೆ ಹಾಕಲು ಪರದಾಟ ನಡೆಸಿದ್ದಾರೆ. ಇವರು ಸದ್ಯಪಾಕ್ ಪರ ಯಾವುದೇ ಫಾರ್ಮೆಟ್‌ನಲ್ಲೂ ಬಿಗ್ ಇನಿಂಗ್ಸ್ ಕಟ್ಟುತ್ತಿಲ್ಲ. ಇವರ ಸರಾಸರಿ ಸಹ ಪಾತಾಳದತ್ತ ಮುಖ ಮಾಡಿದೆ.

ಸಾಮಾಜಿಕ ತಾಣದಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಬಾಬರ್ ಅಜಮ್ ಬ್ಯಾಟಿಂಗ್ ಮಾಡುವಾಗ ದೇಶೀಯ ಬೌಲರ್ ವಿರುದ್ಧ ಬೋಲ್ಡ್ ಆಗುತ್ತಾರೆ. ಈ ವಿಡಿಯೋವನ್ನು ಅಭಿಮಾನಿಯೊಬ್ಬ ತಮ್ಮ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಅಜಮ್ ಸ್ಥಳೀಯ ಟೂರ್ನಿಯಲ್ಲಿ ಬ್ಯಾಟ್ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಈ ಪಂದ್ಯದಲ್ಲಿ ಬಾಬರ್ ಎಡಗೈ ಆಫ್ ಸ್ಪಿನ್ ಬೌಲರ್ ಮೊಹಮ್ಮದ್ ಅಸ್ಗರ್ ಅವರ ಎಸೆತವನ್ನು ಸ್ಲಾಗ್ ಸ್ವೀಪ್ ಮಾಡಲು ಯತ್ನಿಸಿದರು. ಆದರೆ ಚೆಂಡು ಬ್ಯಾಟನ್ ಕೆಳ ಭಾಗದಿಂದ ಹೋಗಿ ಮಿಡ್ಲ್ ಸ್ಟಂಪ್ ಹಾರಿಸಿದೆ.
ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ODI ಕಪ್ ಸೆಪ್ಟೆಂಬರ್ 12 ರಿಂದ ಪ್ರಾರಂಭವಾಗಲಿದೆ ಮತ್ತು ಸೆಪ್ಟೆಂಬರ್ 29 ರವರೆಗೆ ಮುಂದುವರಿಯುತ್ತದೆ. ಈ ಟೂರ್ನಿಯಲ್ಲಿ ಒಟ್ಟು 5 ತಂಡಗಳನ್ನು ಸೇರಿಸಲಾಗಿದೆ. ಮೊಹಮ್ಮದ್ ಹ್ಯಾರಿಸ್ ನಾಯಕತ್ವ ವಹಿಸಲಿರುವ ಸ್ಟಾಲಿಯನ್ಸ್ ತಂಡದಲ್ಲಿ ಬಾಬರ್ ಅಜಮ್ ಆಡಲಿದ್ದಾರೆ. ಹ್ಯಾರಿಸ್ ರೌಫ್, ಅಜಮ್ ಖಾನ್, ಸಾದ್ ಖಾನ್ ಮತ್ತು ಶಾನ್ ಮಸೂದ್ ಕೂಡ ಈ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಜಮ್ ಅಭಿಮಾನಿಗಳ ಜೊತೆ ಸಹ ಸರಿಯಾಗಿ ನಡೆದುಕೊಳ್ಳದಕ್ಕೆ ಟ್ರೋಲ್ ಆಗುತ್ತಿದ್ದಾರೆ. ದೇಶೀಯ ಟೂರ್ನಿಯ ವೇಳೆ ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಬಯಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿ, ಬಾಬರ್ ಅಜಮ್ ಕಂಡು ಸೆಲ್ಫಿಗೆ ಮುಂದಾದರು. ಅಲ್ಲದೆ ಬಾಬರ್ ಕಂಡ ಭಾವುಕತೆಯಲ್ಲಿ ಆತ ಬಾಬರ್ ಅವರ ಭುಜದ ಮೇಲೆ ಕೈ ಹಾಕಿದ.
ಅಭಿಮಾನಿಯೊಬ್ಬ ತನ್ನ ಹೆಗಲ ಮೇಲೆ ಕೈ ಹಾಕಿದ್ದು ಬಾಬರ್‌ಗೆ ಇಷ್ಟವಾಗಲಿಲ್ಲ. ಅಭಿಮಾನಿ ಏನು ಹೇಳದೆ ಬಾಬರ್ ಜೊತೆ ಕೈ ಮಿಲಾಯಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಬಾಬರ್ ಅಜಮ್ ಅವರ ಈ ವರ್ತನೆಗೆ ಸಾಮಾಜಿಕ ತಾಣದಲ್ಲಿ ಅಭಿಮಾನಿಗಳು ಕಿಡಿ ಕಾರಿದ್ದಾರೆ.