Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕೊಹ್ಲಿ, ವಿಲಿಯಮ್ಸನ್ ರೀತಿ ಬೆಳೆಯೋ ಗುರಿ ಬಾಬರ್‌ದ್ದು: ಶೋಯೆಬ್ ಅಖ್ತರ್

Babar Azams target is to reach the likes of Kohli, Williamson says Shoaib Akhtar

ಲಾಹೋರ್, ಜೂನ್ 9: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಝಾಮ್, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ನಂತೆ ಬೆಳೆಯುವ ಗುರಿ ಹೊಂದಿದ್ದಾರೆ ಎಂದು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಜೋ ರೂಟ್ ಮತ್ತು ಸ್ಟೀವ್ ಸ್ಮಿತ್ ಆಧುನಿಕ ಯುಗದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳೆಂದು ಗುರುತಿಸಲ್ಪಟ್ಟಿದ್ದಾರೆ. ಬಾಬರ್ ಅಝಾಮ್ ಕೂಡ ಇದೇ ಶ್ರೇಷ್ಠ ಆಟಗಾರರ ಬೆನ್ನು ಹಿಡಿಯುವತ್ತ ಕಣ್ಣಿಟ್ಟಿದ್ದಾರೆ ಎಂದು ಅಖ್ತರ್ ಹೇಳಿದ್ದಾರೆ.

'ಬಾಬರ್ ಅಝಾಮ್ ಒಬ್ಬ ತುಂಬಾ ಪ್ರತಿಭಾವಂತ ಕ್ರಿಕೆಟಿಗ. ಅವರು ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಮತ್ತು ಜೋ ರೂಟ್‌ನಂತೆ ಗುರಿ ತಲುಪುವ ಉದ್ದೇಶ ಹೊಂದಿದ್ದಾರೆ,' ಎಂದು ಮೆಟ್ರೋ ಡಾಟ್ ಕೊ ಡಾಟ್ ಯುಕೆ ಜೊತೆ ಮಾತನಾಡುತ್ತ ಅಖ್ತರ್ ಹೇಳಿಕೊಂಡಿದ್ದಾರೆ.

ಬಾಬರ್ ಅಝಾಮ್ ಅತ್ಯುತ್ತಮ ಆಟಗಾರರಂಥದ್ದೇ ಹೋಲಿಕೆ ಹೊಂದಿದ್ದಾರಾದರೂ ಅವರನ್ನು ಕೊಹ್ಲಿಯಂತವರಿಗೆ ಹೋಲಿಸುವುದು ಸರಿಯಲ್ಲ ಎಂದು ಅಖ್ತರ್ ಹೇಳಿದ್ದಾರೆ. ಪಾಕ್ ಬ್ಯಾಟ್ಸ್‌ಮನ್ ಅಝಾಮ್ ಕಡಿಮೆ ಪಂದ್ಯಗಳನ್ನು ಆಡಿರುವುದರಿಂದ ಅವರನ್ನು ಕೊಹ್ಲಿಗೆ ಹೋಲಿಸಿದರೆ ಸರಿಯಾಗಲಾರದು ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಅಖ್ತರ್ ಅಭಿಪ್ರಾಯಪಟ್ಟಿದ್ದಾರೆ.

Story first published: Tuesday, June 9, 2020, 23:34 [IST]
Other articles published on Jun 9, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+