Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Babar Azam: ಚಾಂಪಿಯನ್ಸ್ ಟ್ರೋಫಿಗೂ ಮೊದಲು ಖುಲಾಯಿಸಿದ ಬಾಬರ್ ಅದೃಷ್ಟ!

ಪಾಕಿಸ್ತಾನ ಕ್ರಿಕೆಟ್‌ ಆಟಗಾರರಿಗೂ ವಿಶ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಈ ಆಟಗಾರರನ್ನು ಅಭಿಮಾನಿಗಳು ಫಾಲೋ ಮಾಡ್ತಾನೇ ಇರುತ್ತಾರೆ. ಭಾರತದಲ್ಲಿ ಹೇಗೆ ವಿರಾಟ್ ಕೊಹ್ಲಿ ಅವರನ್ನು ಅಭಿಮಾನಿಗಳು ಆರಾಧಿಸುತ್ತಾರೋ, ಹಾಗೆ ಪಾಕಿಸ್ತಾನದಲ್ಲಿ ಅಭಿಮಾನಿಗಳು ಬಾಬರ್ ಅಜಮ್‌ ಅವರನ್ನು ಆರಾಧಿಸುತ್ತಾರೆ. ಇವರಿಬ್ಬರ ಬ್ಯ್ರಾಂಡ್ ವ್ಯಾಲ್ಯೂ ಸಹ ಸಖತ್ ಆಗಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಾಬರ್ ಅಜಮ್ ಭಾರೀ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಏನು ಇಲ್ಲಿದೆ ವರದಿ.

ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರು ಮೈದಾನದಲ್ಲಿ ಆಡುವುದಕ್ಕಿಂತ ಹೆಚ್ಚಾಗಿ ಜಾಹೀರಾತುಗಳಿಂದಲೇ ಹೆಚ್ಚಿನ ಲಾಭ ಪಡೆಯುತ್ತಾರೆ. ಈ ಲೆಕ್ಕಾಚಾರದಲ್ಲಿ ವಿರಾಟ್ ಕೊಹ್ಲಿ ಎಲ್ಲರಗಿಂತಲೂ ಮುಂದೆ ಇದ್ದಾರೆ. ಕ್ರಿಕೆಟ್‌ ಆಟಗಾರರ ಬ್ಯಾಟ್‌ ಮೇಲೆ ಪ್ರಯೋಜಕರು ಕಣ್ಣು ನೆಟ್ಟಿರುತ್ತಿದೆ. ಈಗ ಬಾಬರ್‍‌ ಅಜಮ್‌ ಬ್ಯಾಟಿನ ಸ್ಟೀಕರ್ ಮೇಲೆ ಪ್ರಾಯೋಜಕರ ಕಣ್ಣು ನೆಟ್ಟಿದೆ.

Babar Azam Signs 7 Crore Bat Deal with CA Sports Ahead of Champions Trophy 2025

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಬಾಬರ್ ಅಜಮ್ ಒಂದು ದೊಡ್ಡ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ವರದಿಯ ಪ್ರಕಾರ, ಕಂಪನಿಯ ಬ್ಯಾಟ್‌ನೊಂದಿಗೆ ಆಟವಾಡಲು ಬಾಬರ್‌ಗೆ ಸುಮಾರು 7 ಕೋಟಿ ರೂ. ಪಡೆಯಲಿದ್ದಾರೆ ಎಂಬ ಮಾಹಿತಿ ತಿಳಿದಯ ಬಂದಿದೆ. ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಆರಂಭವಾದಾಗಲೇ ಬಾಬರ್ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಲಿದೆ. ಬಹು ವರ್ಷಗಳ ಬಳಿಕ ಸಿಕ್ಕ ಐಸಿಸಿ ಟೂರ್ನಿಯನ್ನು ಆಯೋಜಿಸುವ ಅವಕಾಶ ಪಾಕ್‌ಗೆ ಸಿಕ್ಕಿದೆ. ಆದರೆ ಭಾರತ ಮಾತ್ರ ಈ ಟೂರ್ನಿಯಲ್ಲಿ ತನ್ನ ಪಂದ್ಯಗಳನ್ನು ಯುಎಇನಲ್ಲಿ ಆಡಲಿದೆ.

ಪಾಕಿಸ್ತಾನದ ಪ್ರೊಪಾಕಿಸ್ತಾನ ವೆಬ್‌ಸೈಟ್‌ ವರದಿಯಂತೆ ಬಾಬರ್ ಅಜಮ್ ಸಿಎ ಸ್ಪೋರ್ಟ್ಸ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇವರು ಕಂಪನಿಯ ಸ್ಟಿಕ್ಕರ್ ಇರುವ ಬ್ಯಾಟ್‌ನೊಂದಿಗೆ ಮೈದಾನದಲ್ಲಿ ಆಡುವುದನ್ನು ನೋಡಬಹುದಾಗಿದೆ. ಈ ಒಪ್ಪಂದದ ಅಡಿಯಲ್ಲಿ ಇವರು ಕಂಪನಿಯಿಂದ ವಾರ್ಷಿಕ 7 ಕೋಟಿ ರೂಪಾಯಿ ಪಡೆಯಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೂ ಮೊದಲು ಬಾಬರ್ ಅಜಮ್ ಅವರ ಬ್ಯಾಟನ್ನು ಇಂಗ್ಲೀಷ್ ಕಂಪನಿಯೊಂದಿ ಪ್ರಾಯೋಜಿಸತ್ತು. ಆ ಕಂಪನಿಯೊಂದಿಗಿನ ಒಪ್ಪಂದ ಮುಗಿದಿದೆ.

Babar Azam Signs 7 Crore Bat Deal with CA Sports Ahead of Champions Trophy 2025

ಚಾಂಪಿಯನ್ಸ್‌ ಟ್ರೋಫಿಯ ಪಂದ್ಯಗಳು ಫೆಬ್ರವರಿ 19 ರಿಂಧ ಆರಂಭವಾಗಲಿವೆ. ಈ ಟೂರ್ನಿಯಲ್ಲಿ ಪಾಕ್‌ ಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಭಾರತದ ಪಂದ್ಯಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಪಂದ್ಯಗಳೂ ಪಾಕಿಸ್ತಾನದಲ್ಲಿ ನಡೆಯಲಿವೆ.

ಬಾಬರ್ ಅಜಮ್ ಸಾಧನೆ

ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಬರ್ ಅಜಮ್‌ ಅಮೋಘ ಸಾಧನೆ ಮಾಡಿದ್ದಾರೆ. ಇವರು ಆಡಿದ 57 ಪಂದ್ಯಗಳಲ್ಲಿ 4190 ರನ್‌ ಸಿಡಿಸಿದ್ದಾರೆ. ಇದರಲ್ಲಿ 9 ಶತಕ ಹಾಗೂ 29 ಅರ್ಧಶತಕಗಳು ಸೇರಿವೆ. 123 ಏಕದಿನ ಪಂದ್ಯಗಳನ್ನು ಆಡಿರುವ ಬಾಬರ್ 5957 ರನ್‌ ಸಿಡಿಸಿದ್ದಾರೆ. ಈ ವೇಳೆ 19 ಶತಕ ಹಾಗೂ 34 ಅರ್ಧಶತಕ ಬಾರಿಸಿದ್ದಾರೆ. 128 ಟಿ20 ಪಂದ್ಯಗಳನ್ನು ಆಡಿರುವ ಇವರು 3 ಶತಕ ಹಾಗೂ 36 ಅರ್ಧಶತಕದ ಸಹಾಯದಿಂದ 4223 ರನ್‌ ಕಲೆ ಹಾಕಿದ್ದಾರೆ.

Story first published: Monday, January 13, 2025, 23:30 [IST]
Other articles published on Jan 13, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+