Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಪಾಕ್‌ಗೆ ಪೆಟ್ಟು

ಆಗಸ್ಟ್ 21 ರಿಂದ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಪಾಕಿಸ್ತಾನ ಆಡಲಿದೆ. ಈ ಸರಣಿಗೆ ಈಗಾಗಲೇ ಉಭಯ ತಂಡಗಳು ಭರದ ಸಿದ್ಧತೆಯನ್ನು ನಡೆಸಿವೆ. ಮೊದಲ ಟೆಸ್ಟ್‌ ರಾವಲ್ಪಿಂಡಿಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸರಣಿಗೆ ಪಾಕ್‌ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಯುವ ಹಾಗೂ ಅನುಭವಿ ಆಟಗಾರರಿಂದ ತಂಡ ಕೂಡಿದೆ.

ಪಾಕ್‌ ತಂಡವನ್ನು ಶಾನ್ ಮಸೂದ್ ಮುನ್ನಡೆಸಲಿದ್ದಾರೆ. ಸ್ಟಾರ್ ಆಟಗಾರ ಬಾಬರ್ ಅಜಮ್ ಕೂಡ ಈ ಸರಣಿಯ ಮೇಲೆ ಕಣ್ಣು ನೆಟ್ಟಿದ್ದಾರೆ. ತವರಿನಲ್ಲಿ ರನ್‌ಗಳ ಮಹಲ್‌ ಕಟ್ಟಿ ರಾಜನಂತೆ ಮೆರೆಯಬೇಕು ಎಂದು ಬಾಬರ್ ಪ್ಲ್ಯಾನ್ ಹಾಕಿಕೊಂಡಿದ್ದಾರೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಬಾಬರ್‌ ಪೆಟ್ಟು ತಿಂದಿದ್ದಾರೆ.

Babar Azam Suffers Injury During Practice Ahead of Pakistan vs Bangladesh Test Series

ಅಭ್ಯಾಸದ ವೇಳೆ ಪೆಟ್ಟು

ಬಾಂಗ್ಲಾ ವಿರುದ್ದದ ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನ ಪಾಕ್ ಆಟಗಾರ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಈ ವೇಳೆ ಬಾಬರ್‌, ಖುರ್ರಾಮ್ ಶಹಜಾದ್ ಅವರ ಬಾಲ್‌ ಎದುರಿಸುವಲ್ಲಿ ವಿಫಲರಾಗಿ ಗಾಯಗೊಂಡರು. ಇದರಿಂದಾಗಿ ಸರಣಿಯ ಆರಂಭಕ್ಕೂ ಮೊದಲು ಪಾಕಿಸ್ತಾನ ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ.

ಗುರುವಾರ ಬಾಬರ್‌ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಖುರ್ರಂ ಶಹಜಾದ್ ಅವರ ಒಳಬರುವ ಚೆಂಡನ್ನು ಆಡುವಲ್ಲಿ ಎಡವಿದರು. ಚೆಂಡು ನೇರವಾಗ ಬಾಬರ್‌ ತೊಡೆಗೆ ಬಡೆಯಿತು. ಚೆಂಡು ಬಡೆಯುತ್ತಿದ್ದಂತೆ ಬಾಬರ್‌ ನೋವಿನಿಂದ ನೆಟ್ಸ್‌ನಲ್ಲೇ ಕುಳಿತರು. ಅಲ್ಲದೆ ಕೊಂಚ ಸಮಯ ಬಾಬರ್‌ ನೆಟ್ಸ್‌ ಬಿಟ್ಟು ಹೊರ ನಡೆದರು. ಕೆಲ ಸಮಯದ ಬಳಿಕ ಬಾಬರ್‌ ನೆಟ್ಸ್‌ಗೆ ಮರಳಿ ಅಭ್ಯಾಸ ಆರಂಭಿಸಿದರು.

ಬಾಂಗ್ಲಾ ವಿರುದ್ಧ ಹೇಗಿದೆ ಬಾಬರ್‌ ಸಾಧನೆ?

ಇದಕ್ಕೂ ಹಿಂದೆ ಪಾಕ್‌ ತನ್ನ ಕೊನೆಯ ಟೆಸ್ಟ್‌ ಸರಣಿಯನ್ನು ಆಸ್ಟ್ರೇಲಿಯಾ ನೆಲದಲ್ಲಿ ಆಡಿತ್ತು. ಈ ಸರಣಿಯಲ್ಲಿ ಪಾಕ್‌ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದರು. ಬಾಬರ್‌ ಸಹ ಈ ಸರಣಿಯಲ್ಲಿ ರನ್‌ ಕಲೆ ಹಾಕಿರಲಿಲ್ಲ. ಅವರ ಬ್ಯಾಟಿಂಗ್‌ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈಗ ಬಾಬರ್‌ಗೆ ಬಾಂಗ್ಲಾ ವಿರುದ್ಧ ಪುಟಿದೇಳಲು ಉತ್ತಮ ಅವಕಾಶ. ಬಾಂಗ್ಲಾ ವಿರುದ್ಧ ಬಾಬರ್‌ ಮೂರು ಟೆಸ್ಟ್‌ ಪಂದ್ಯಗಳಲ್ಲಿ ಒಂದು ಶತಕ, ಒಂದು ಅರ್ಧಶತಕ ಸೇರಿದಂತೆ 80.67ರ ಸರಾಸರಿಯಲ್ಲಿ 242 ರನ್‌ ಸಿಡಿಸಿದ್ದಾರೆ.

Story first published: Friday, August 16, 2024, 17:29 [IST]
Other articles published on Aug 16, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+