Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಾರ್ವಕಾಲಿಕ ಐಸಿಸಿ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸಚಿನ್ ಹಿಂದಿಕ್ಕಿದ ಬಾಬರ್ ಅಜಮ್!; ಕೊಹ್ಲಿಗೆ ಎಷ್ಟನೇ ಸ್ಥಾನ?

Babar Azam surpassed Sachin Tendulkar in all-time ICC ODI Batters rankings list

ಒಂದೆಡೆ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸದ್ದು ಮಾಡುತ್ತಿದ್ದರೆ, ಮತ್ತೊಂದೆಡೆ ಐಸಿಸಿ ಸಾರ್ವಕಾಲಿಕ ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆಗಿರುವ ಬದಲಾವಣೆ ಸದ್ಯ ಕ್ರಿಕೆಟ್ ಪ್ರೇಕ್ಷಕರ ಗಮನವನ್ನು ತನ್ನತ್ತ ಸೆಳೆಯುತ್ತಿದೆ. ಹೌದು, ಇದಕ್ಕೆ ಕಾರಣ ಈ ಐಸಿಸಿ ಸಾರ್ವಕಾಲಿಕ ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಕ್ರಿಕೆಟ್ ದೇವರು ಎಂದೇ ಖ್ಯಾತಿಯನ್ನು ಪಡೆದಿರುವ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿರುವುದು.

ಇನ್ನು ಇತ್ತೀಚಿಗಷ್ಟೆ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೋಲನ್ನು ಕಂಡಿದ್ದ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ನಂತರ ನಡೆದ ಏಕದಿನ ಸರಣಿಯಲ್ಲಿ ಪ್ರವಾಸಿ ಆಸ್ಟ್ರೇಲಿಯಾಗೆ 2-1 ಅಂತರದಲ್ಲಿ ಸೋಲನ್ನು ಉಣಿಸಿದೆ. ಇನ್ನು ಪಾಕಿಸ್ತಾನದ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬಾಬರ್ ಅಜಮ್ 3 ಪಂದ್ಯಗಳನ್ನಾಡಿ 276 ರನ್ ಕಲೆಹಾಕಿದ್ದರು ಹಾಗೂ ಬಾಬರ್ ಅಜಮ್ ಅವರ ಈ ಇನ್ನಿಂಗ್ಸ್‌ನಲ್ಲಿ ಎರಡು ಶತಕಗಳೂ ಸಹ ಸೇರಿವೆ.

ಹೀಗೆ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿದ ಬಾಬರ್‌ ಅಜಮ್ ಸರಣಿಯಲ್ಲಿನ ತನ್ನ ಅಮೋಘ ಪ್ರದರ್ಶನದಿಂದ ಸಾರ್ವಕಾಲಿಕ ಐಸಿಸಿ ಬ್ಯಾಟ್ಸ್‌ಮನ್‌ಗಳ ಪಟ್ಟಿಯ ಅಂಕಗಳಲ್ಲಿ ಏರಿಕೆಯನ್ನು ಕಂಡಿದ್ದು, ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ..

ಸಚಿನ್ ಹಿಂದಿಕ್ಕಿದ ಅಜಮ್

ಸಚಿನ್ ಹಿಂದಿಕ್ಕಿದ ಅಜಮ್

ಬಾಬರ್ ಅಜಮ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದ ಸಾರ್ವಕಾಲಿಕ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜಿಗಿತ ಕಂಡಿದ್ದಾರೆ. ಸದ್ಯ ಈ 891 ಅಂಕಗಳನ್ನು ತಲುಪಿರುವ ಬಾಬರ್ ಅಜಮ್ ಈ ಪಟ್ಟಿಯಲ್ಲಿ 15ನೇ ಸ್ಥಾನ ತಲುಪಿದ್ದು, 887 ಅಂಕಗಳನ್ನು ಹೊಂದಿರುವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ 16ನೇ ಸ್ಥಾನಕ್ಕೆ ಕುಸಿದಿದ್ದಾರೆ.

ವಿರಾಟ್ ಕೊಹ್ಲಿಗೆ ಎಷ್ಟನೇ ಸ್ಥಾನ?

ವಿರಾಟ್ ಕೊಹ್ಲಿಗೆ ಎಷ್ಟನೇ ಸ್ಥಾನ?

ಇನ್ನು ರನ್ ಮೆಷಿನ್ ಎಂದೇ ಖ್ಯಾತಿಯನ್ನು ಪಡೆದಿರುವ ವಿರಾಟ್ ಕೊಹ್ಲಿ ಸಾರ್ವಕಾಲಿಕ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದಾರೆ. 911 ಅಂಕಗಳನ್ನು ಪಡೆದಿರುವ ವಿರಾಟ್ ಕೊಹ್ಲಿ ಈ ಪಟ್ಟಿಯ ಟಾಪ್ 10ರಲ್ಲಿ ಸ್ಥಾನ ಪಡೆದುಕೊಂಡಿರುವ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಗೂ ಸಹ ಪಾತ್ರರಾಗಿದ್ದಾರೆ.

Ravindra Jadeja ಹಂಚಿಕೊಂಡ ವಿಶೇಷ ವಿಡಿಯೋ ಫುಲ್ ವೈರಲ್ | Oneindia Kannada
ಟಾಪ್ 5 ಪಟ್ಟಿ

ಟಾಪ್ 5 ಪಟ್ಟಿ

ಸಾರ್ವಕಾಲಿಕ ಐಸಿಸಿ ಏಕದಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳ ವಿವರ ಈ ಕೆಳಕಂಡಂತಿದೆ.
1. ವಿವಿಯನ್ ರಿಚರ್ಡ್ಸ್, ವೆಸ್ಟ್ ಇಂಡೀಸ್ - 935 ಅಂಕಗಳು
2. ಜಹೀರ್ ಅಬ್ಬಾಸ್, ಪಾಕಿಸ್ತಾನ - 931 ಅಂಕಗಳು
3. ಗ್ರೆಗ್ ಚಾಪೆಲ್, ಆಸ್ಟ್ರೇಲಿಯಾ - 921 ಅಂಕಗಳು
4. ಡೇವಿಡ್ ಗೋವರ್, ಇಂಗ್ಲೆಂಡ್ - 919 ಅಂಕಗಳು
5. ಡೀನ್ ಜೋನ್ಸ್, ಆಸ್ಟ್ರೇಲಿಯಾ - 918 ಅಂಕಗಳು

Story first published: Friday, April 8, 2022, 10:05 [IST]
Other articles published on Apr 8, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+