Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Babar Azam: ವಿರಾಟ್‌ ಕೊಹ್ಲಿ ದಾಖಲೆ ಅಳಿಸಿದ ಬಾಬರ್ ಅಜಮ್

ಪಾಕಿಸ್ತಾದ ಸ್ಟಾರ್ ಕ್ರಿಕೆಟ್ ಆಟಗಾರ ಬಹು ದಿನಗಳ ಬಳಿಕ ಕಾಯುತ್ತಿದ್ದ ಕ್ಷಣ ಸೋಮವಾರ ಬಂದಿತು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಾಬರ್‌ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಪಾಕ್‌ ಏಳು ವಿಕೆಟ್‌ಗಳಿಂದ ಸೋಲು ಕಂಡರೂ, ಸಹ ತಂಡದ ಭರವಸೆಯ ಆಟಗಾರ ಬಾಬರ್‌ ದಾಖಲೆಯ ಪುಟಕ್ಕೆ ಎಂಟ್ರಿ ನೀಡಿದ್ದಾರೆ. ವಿರಾಟ್ ಕೊಹ್ಲಿ ಅವರ ಯಾವ ದಾಖಲೆಯನ್ನು ಬಾಬರ್‌ ಅಳಿಸಿ ಹಾಕಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 18.1 ಓವರ್‌ಗಳಲ್ಲಿ 117 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಬ್ಯಾಟ್ ಆಡಿದ ಆಸ್ಟ್ರೇಲಿಯಾ 11.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 118 ರನ್‌ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಆಸ್ಟ್ರೇಲಿಯಾ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.

Babar Azam Surpasses Virat Kohli to Become Second Highest Run-Scorer in T20 Internationals

ಬಾಬರ್ ದಾಖಲೆ

ವಿರಾಟ್‌ ಕೊಹ್ಲಿ ಟಿ20 ಕ್ರಿಕೆಟ್‌ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ 125 ಪಂದ್ಯಗಳಲ್ಲಿ 4188 ರನ್‌ ಸಿಡಿಸಿದ್ದರು. ಆದರೆ, ಈಗಾಗಲೇ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇವರ ದಾಖಲೆಯನ್ನು ಪಾಕಿಸ್ತಾನದ ಅನುಭವಿ ಆಟಗಾರ ಬಾಬರ್ ಅಜಮ್‌ ಅಳಿಸಿ ಹಾಕಿದ್ದಾರೆ. ಬಾಬರ್‌ ಆಡಿದ 126 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 4192 ರನ್‌ ಸಿಡಿಸಿ ದಾಖಲೆ ಬರೆದಿದ್ದಾರೆ. ಇನ್ನು ಬಾಬರ್‌ ಎಂಟು ರನ್‌ ಗಳಿಸಿದರೆ 4200 ರನ್‌ ಗಡಿ ದಾಟ ಬಹುದು.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ಆಟಗಾರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರಿಗೆ ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ 159 ಪಂದ್ಯಗಳಲ್ಲಿ 4231 ರನ್‌ ಸಿಡಿಸಿದ್ದಾರೆ. ಇವರು ಸಹ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ರೋಹಿತ್‌ ಅವರ ದಾಖಲೆಯನ್ನು ಅಳಸಿ ಹಾಕಲು ಇನ್ನು ಕೊಂಚ ದಿನ ವೇಟ್ ಮಾಡಲೇ ಬೇಕು.

Babar Azam Surpasses Virat Kohli to Become Second Highest Run-Scorer in T20 Internationals

ಪಂದ್ಯದ ಫಲಿತಾಂಶ

ಬಾಬರ್ ಆಜಂ (41), ಹಸೀಬುಲ್ಲಾ ಖಾನ್ (24), ಇರ್ಫಾನ್ ಖಾನ್ (10), ಶಾಹೀನ್ ಶಾ ಆಫ್ರಿದಿ (16), ಪಾಕಿಸ್ತಾನದ ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪಾಕ್‌ ತಂಡದ ಬಾಬರ್‌ 28 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 41 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು.

ಆಸ್ಟ್ರೇಲಿಯಾದ ಪರ ಆರನ್ ಹಾರ್ಡಿ ಮೂರು ವಿಕೆಟ್‌, ಸ್ಪೆನ್ಸರ್ ಜಾನ್ಸನ್ ಹಾಗೂ ಆಡಂ ಜಂಪಾ ತಲಾ ಎರಡು ವಿಕೆಟ್‌ ಪಡೆದರು.

ಆಸ್ಟ್ರೇಲಿಯಾ ತಂಡದ ಆರಂಭ ಕಳಪೆಯಾಗಿತ್ತು. ಮ್ಯಾಥ್ಯೂ ಶಾರ್ಟ್‌ 2, ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ 18 ರನ್‌ಗಳಿಸಿ ಔಟ್ ಆದರು. ತಂಡದ ಮೊತ್ತ 30 ರನ್‌ ಆಗಿದ್ದಾಗ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಮೂರನೇ ವಿಕೆಟ್‌ಗೆ ಜಾಶ್‌ ಇಂಗ್ಲಿಷ್‌ (27) ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ಸಮಯೋಚಿತ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಯಿತು. ಸ್ಟೋಯ್ನಿಸ್‌ 27 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್‌ ನೆರವಿನಿಂದ 61 ರನ್‌ ಬಾರಿಸಿ ಗೆಲುವಿನಲ್ಲಿ ಮಿಂಚಿದರು.

Story first published: Monday, November 18, 2024, 17:05 [IST]
Other articles published on Nov 18, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+