Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಕದಿನ ಪಂದ್ಯದಲ್ಲಿ ಬಾಬರ್‌ ಟೆಸ್ಟ್‌ನಂತೆ ಟುಕ್‌..ಟುಕ್‌... ವಿರಾಟ್‌ ದಾಖಲೆ ಸರಿಗಟ್ಟಿದ ಪಾಕ್ ಪ್ಲೇಯರ್‌

ವಿಶ್ವದ ಶ್ರೇಷ್ಠ ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಆಟಗಾರ ಬಾಬರ್ ಅಜಮ್‌, ಕಳೆದ ಕೆಲವು ತಿಂಗಳಿನಿಂದ ಫಾರ್ಮ್‌ ಇಲ್ಲದೆ ಒದ್ದಾಡುತ್ತಿದ್ದಾರೆ. ಇವರ ಫ್ಲಾಫ್‌ ಶೋ ನಿಜಕ್ಕೂ ಪಾಕಿಸ್ತಾನ ತಂಡದ ಮ್ಯಾನೇಜ್ಮೆಂಟ್‌ಗೆ ನುಂಗಲಾರದ ತುತ್ತಾಗಿದೆ. ರಾವಲ್ಪಿಂಡಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಬಾಬರ್ ಆಟ ಕಂಡು ಅಭಿಮಾನಿಗಳು ಕಿಡಿ ಕಾರಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲೂ ಬಾಬರ್‌ ಅಜಮ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬ್ಯಾಟ್ ಮಾಡಿದಂತೆ ಬ್ಯಾಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಶ್ರೀಲಂಕಾ ಸದ್ಯ ಪಾಕ್‌ ಪ್ರವಾಸವನ್ನು ಬೆಳೆಸಿದೆ. ಈ ವೇಳೆ ಉಭಯ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ರಾವ್ಪಿಂಡಿಯಲ್ಲಿ ನಡೆಯಿತು. ಈ ವೇಳೆ ಟಾಸ್‌ ಗೆದ್ದ ಶ್ರೀಲಂಕಾ ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಪಾಕ್‌ ತಂಡದ ಆರಂಭಿಕ ಆಟಗಾರ ಸೈಮ್‌ ಅಯೂಬ್‌ 14 ಎಸೆತಗಳಲ್ಲಿ 6 ರನ್‌ ಬಾರಿಸಿ ಔಟ್ ಆದರು. ಮೊದಲ ವಿಕೆಟ್‌ ಬೀಳುತ್ತಿದ್ದಂತೆ ಕ್ರೀಸ್‌ಗೆ ಬಂದ ಬಾಬರ್‌ ನೆಲಕಚ್ಚಿ ಬ್ಯಾಟ್ ಮಾಡುವ ಸೂಚನೆಯನ್ನು ನೀಡಿದರು. ಆದರೆ ಇವರ ತಾಳ್ಮೆ 51ನೇ ಎಸೆತಕ್ಕೆ ಕೊನೆಗೊಂಡಿತು. 3 ಬೌಂಡರಿ ನೆರವಿನಿಂದ 29 ರನ್ ಬಾರಿಸಿದ ಬಾಬರ್‌ ವನಿಂದು ಹಸರಂಗ್ ತೋಡಿದ ಖೆಡ್ಡಾಗೆ ಬಲಿಯಾದರು.

ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬಾಬರ್‌ ಮಾಡಿದ ಬ್ಯಾಟಿಂಗ್ ಕಂಡು ಅಭಿಮಾನಿಗಳು ಕಿಡಿ ಕಾರಿದ್ದಾರೆ. ಇವರು ಏಕದಿನ ಫಾರ್ಮೆಟ್‌ನಲ್ಲಿ ಟೆಸ್ಟ್‌ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದ್ದು, ಮ್ಯಾನೇಜ್ಮೆಂಟ್‌ ಚಿಂತೆಯನ್ನು ಸಹ ಹೆಚ್ಚಿಸಿದೆ. ಇವರು ಮೊದಲ ಏಕದಿ ಪಂದ್ಯದಲ್ಲಿ 56ರ ಸರಾಸರಿಯಲ್ಲಿ ರನ್‌ ಕಲೆ ಹಾಕಿ ಟೀಕೆಗೆ ಗುರಿಯಾದರು. ಬಾಬರ್‌ ಈ ಆಟದ ಹೊರತಾಗಿಯೂ ಒಂದು ದಾಖಲೆಯನ್ನು ಬರೆದಿದ್ದಾರೆ. ಶತಕ ಬಾರಿಸಿದೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಇನಿಂಗ್ಸ್‌ಗಳನ್ನು ಆಡಿದ ಪಟ್ಟಿಯಲ್ಲಿ ಇವರು ವಿರಾಟ್‌ ಕೊಹ್ಲಿ ಅವರ ಸಮನಕ್ಕೆ ನಿಂತಿದ್ದಾರೆ.

Babar Azam s Slow Knock and Record of 83 Innings Without a Century


ಶತಕ ಗಳಿಸದೆ ಅತಿ ಹೆಚ್ಚು ಅಂತಾರಾಷ್ಟ್ರೀಯ ಇನ್ನಿಂಗ್ಸ್‌ ಆಡಿದ ಬ್ಯಾಟರ್ಸ್‌

ಸನತ್ ಜಯಸೂರ್ಯ,ಶ್ರೀಲಂಕಾ- 88 ಇನ್ನಿಂಗ್ಸ್‌
ವಿರಾಟ್ ಕೊಹ್ಲಿ,ಭಾರತ- 83 ಇನ್ನಿಂಗ್ಸ್‌
ಬಾಬರ್ ಅಜಮ್,ಪಾಕಿಸ್ತಾನ- 83 ಇನ್ನಿಂಗ್ಸ್‌
ಶಿವನಾರಾಯಣ್ ಚಂದ್ರಪಾಲ್,ವೆಸ್ಟ್ ಇಂಡೀಸ್- 78 ಇನ್ನಿಂಗ್ಸ್‌


ಪಂದ್ಯದ ಚಿತ್ರಣ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಪಾಕ್‌ ತಂಡದ ಪರ ಭರವಸೆಯ ಬ್ಯಾಟರ್ ಸಲ್ಮಾನ್‌ ಅಘಾ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 87 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ 195 ರನ್‌ ಸಿಡಿಸಿದರು. ಇನ್ನು ಹುಸೇನ್‌ ತಲತ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 62 ರನ್‌ ಸಿಡಿಸಿ ತಂಡಕ್ಕೆ ಆಧಾರವಾದರು. ಪರಿಣಾಮ ಪಾಕ್‌ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 299 ರನ್‌ ಕಲೆ ಹಾಕಿತು. ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಪರ ಟಾಪ್‌ ಆರ್ಡರ್‌ನಲ್ಲಿ ಯಾವೊಬ್ಬ ಬ್ಯಾಟರ್‌ ಜವಾಬ್ದಾರಿಯುತ ಆಟ ಆಡಲಿಲ್ಲ. ಆಲ್‌ರೌಂಡರ್‌ ವನಿಂದು ಹಸರಂಗ್‌ 59 ರನ್ ಬಾರಿಸಿದರು. ಅಂತಿಮವಾಗಿ ಲಂಕಾ 9 ವಿಕೆಟ್‌ಗೆ 293 ರನ್‌ ಗಳಿಸಿ ಸೋಲು ಕಂಡಿತು.

Story first published: Wednesday, November 12, 2025, 9:35 [IST]
Other articles published on Nov 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+