ವಿರಾಟ್ ಕೊಹ್ಲಿ ಜೊತೆ ಹೋಲಿಕೆ: ತವರಿನಲ್ಲೂ ಮುಗ್ಗರಿಸಿದ ಬಾಬರ್ ಅಜಮ್
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನದ ಬಾಬರ್ ಅಜಮ್ ಇಬ್ಬರ ನಡುವೆ ಹೋಲಿಕೆ ನಡೆಯುತ್ತಲೆ ಇರುತ್ತದೆ. ಪಾಕ್ ಮಾಧ್ಯಗಳು ಹಾಗೂ ಮಾಜಿ ಆಟಗಾರರು ಬಾಬರ್‌ನನ್ನು ತಲೆಯ ಮೇಲೆ ಇಟ್ಟು ಮೆರವಣಿಗೆ ಮಾಡಿವೆ. ಭಾರತದಲ್ಲಿ ವಿರಾಟ್ ಇದ್ದರೆ, ಪಾಕ್‌ನಲ್ಲಿ ಬಾಬರ್ ಇದ್ದಾನೆ ಎಂದು ಬಿಂಬಿಸಿವೆ. ವಿರಾಟ್, ಬಾಬರ್ ಆಟವನ್ನು ತುಲನೇ ಮಾಡಲಾಗುತ್ತದೆ.
ವಿಶ್ವದಲ್ಲೇ ತನ್ನದೇ ಬ್ಯಾಟಿಂಗ್ ಛಾಪು ಮೂಡಿಸಿರುವ ಪ್ಲೇಯರ್ ವಿರಾಟ್ ಕೊಹ್ಲಿ.. ಇವರು ಆಟವನ್ನು ಕಂಡು ಅದೆಷ್ಟೋ ಜನ ಅನುಕರಣೆ ಮಾಡುತ್ತಾರೆ. ಇನ್ನು ಹಲವರು ಅಸೂಯೆ ಪಡುತ್ತಾರೆ. ಪಾಕ್ ಕ್ರಿಕೆಟ್ ಆಟಗಾರರು ಸಹ ಇವರ ಆಟಕ್ಕೆ ಮನಸೋತಿದ್ದಾರೆ. ಆದರೆ ಬಾಬರ್ ಹಾಗೂ ವಿರಾಟ್ ಇಬ್ಬರಲ್ಲಿ ಯಾರು ಉತ್ತಮರು ಎಂದು ಕೇಳಿದಾಗ, ತಮ್ಮದೇ ಪ್ಲೇಯರ್ ಎಂದು ಪಾಕಿಗಳು ಹೇಳುತ್ತಾರೆ.

ವಿರಾಟ್ ಕಿಂಗ್
ವಿರಾಟ್ ಕೊಹ್ಲಿ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಕಿಂಗ್ ಕೊಹ್ಲಿ ಎಂದು ಕರೆಯುತ್ತಾರೆ. ಅವರ ಆಟವೂ ಹಾಗೆ ಇದೆ. ಇವರು ಯಾವುದೇ ಅಂಗಳಕ್ಕೆ ಎಂಟ್ರಿ ನೀಡಿದರೂ, ಎದುರಾಳಿ ಬೌಲರ್‌ಗಳಿಗೆ ಸವಾಲು ಹಾಕದೆ ಇರಲು ಸಾಧ್ಯವೇ ಇಲ್ಲ. ರನ್‌ಗಳನ್ನು ಕಲೆ ಹಾಕುವ ಬಾರಿಸುವುದರಲ್ಲಿ, ದಾಖಲೆಗಳ ಲೆಕ್ಕಾಚಾರದಲ್ಲಿ ಅಂಕಿ ಅಂಶಗಳ ವಿಚಾರದಲ್ಲಿ ವಿರಾಟ್‌ಗೆ, ಬಾಬರ್ ಸಮನಾಗುವ ಪ್ಲೇಯರ್ ಅಲ್ಲವೇ ಅಲ್ಲ.
ಬೌನ್ಸಿ ಪಿಚ್‌ನಲ್ಲಿ ಪರದಾಟ
ಬಾಬರ್ ಅಜಮ್ ಆಸ್ಟ್ರೇಲಿಯಾದಂತಹ ಬೌನ್ಸಿ ಪಿಚ್‌ಗಳಲ್ಲಿ ರನ್ ಕಲೆ ಹಾಕಲು ಪರದಾಟ ನಡೆಸಿದ್ದರು. ಇದರಿಂದ ತಂಡಕ್ಕೆ ಪೆಟ್ಟು ಬಿದ್ದಿತ್ತು. ಆದರೆ ಆಗ ಪಾಕ್ ಅಭಿಮಾನಿಗಳು ತವರಿನಲ್ಲಿ ಬಾಬರ್ ಡಾನ್ ಎನ್ನುವ ರೀತಿ ಮಾತನಾಡಿದ್ದರು. ಆದರೆ ಪಾಕ್ ಸೂಪರ್ ಸ್ಟಾರ್‌ನ ಹಣೆಬರಹ ತವರಿನಲ್ಲೂ ಅಷ್ಟಾಗಿ ಕೈ ಹಿಡಿಯಲಿಲ್ಲ.
ಸೊನ್ನೆ ಸುತ್ತಿದ ಬಾಬರ್
ಬಾಂಗ್ಲಾದೇಶ ಈಗ ಪಾಕಿಸ್ತಾನ ಪ್ರವಾಸ ಬೆಳೆಸಿದೆ. ಈ ವೇಳೆ ಎರಡು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿವೆ. ಈ ಸರಣಿಯ ವೇಳೆ ಎಲ್ಲರ ಕಣ್ಣು ಬಾಬರ್ ಅಜಮ್ ಮೇಲೆ ನೆಟ್ಟಿದ್ದವು. ಗುರುವಾರದಿಂದ ಆರಂಭವಾದ ಸರಣಿಯ ಮೊದಲ ಪಂದ್ಯದಲ್ಲಿ ಬಾಬರ್ ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ. ಮತ್ತೆ ಸೊನ್ನೆ ಸುತ್ತಿ ನಿರಾಸೆ ಅನುಭವಸಿದ್ದಾರೆ.
890 ದಿನಗಳ ಬಳಿಕ ಶತಕ
ಲಯಕ್ಕಾಗಿ ಪರದಾಡುತ್ತಿದ್ದ ಮೊಹಮ್ಮದ್ ರಿಜ್ವಾನ್, ಬಾಂಗ್ಲಾದೇಶದ ವಿರುದ್ಧ ಸರಣಿಯ ವೇಳೆ ಅಮೋಘ ಪ್ರದರ್ಶನ ನೀಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿ ಇವರು ತಂಡಕ್ಕೆ ನೆರವಾದರು. ಐದನೇ ವಿಕೆಟ್‌ಗೆ ರಿಜ್ವಾನ್ ಜೊತೆಗೂಡಿದ ಸೌದ್ ಶಕೀಲ್ (141 ರನ್) ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 240 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾಯಿತು. ರಿಜ್ವಾನ್ 11 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 171 ರನ್ ಸಿಡಿಸಿದರು. ಇವರಿಬ್ಬರ ಉತ್ತಮ ಆಟದ ನೆರವಿನಿಂದ ಪಾಕ್ 6 ವಿಕೆಟ್‌ಗೆ 448 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. ಬಾಂಗ್ಲಾ ಮೊದಲ ಇನಿಂಗ್ಸ್ ಆರಂಭಿಸಿದ್ದು, ವಿಕೆಟ್ ನಷ್ಟವಿಲ್ಲದೆ 27 ರನ್ ಸೇರಿಸಿದೆ.
ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲು ಬಾಂಗ್ಲಾಗೆ ಇನ್ನು 421 ರನ್‌ಗಳ ಅವಶ್ಯಕತೆ ಇದ್ದು, ಎರಡನೇ ದಿನದ ಆಟ ರೋಚಕತೆ ಹೆಚ್ಚಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications