Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CPL 2022: ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ, 5 ಎಸೆತದಲ್ಲಿ ಸತತ 5 ಸಿಕ್ಸರ್ ಸಿಡಿಸಿದ ಬೇಬಿ ಎಬಿ

Dewald brevis

ಕೆರಿಬಿಯನ್ ಪ್ರೀಮಿಯರ್ ಲೀಗ್ 2022ರ ಸೀಸನ್‌ನಲ್ಲಿ ಗುರುವಾರ ಎರಡು ಪಂದ್ಯಗಳು ನಡೆದಿವೆ. ಮೊದಲ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವನ್ನು 7 ರನ್‌ಗಳಿಂದ ಸೋಲಿಸಿತು. ಎರಡನೇ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡ ಸೇಂಟ್ ಲೂಸಿಯಾ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು. ಶೆರ್ಫೇನ್ ರುದರ್ಫೋರ್ಡ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಲ್ಲದೆ 50 ಎಸೆತಗಳಲ್ಲಿ 78 ರನ್ ಸಿಡಿಸಿದ್ರು. ಈತನ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್‌ಗಳಿದ್ದವು. ಇದಾದ ಬಳಿಕ ಬೇಬಿ ಎಬಿ ಖ್ಯಾತಿ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೇವಿಸ್‌ ಅಬ್ಬರದ ಆಟವಾಡುವ ಮೂಲಕ ಅಭಿಮಾನಿಗಳನ್ನ ಮನರಂಜಿಸಿದ್ರು.

5 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿದ ಬೇಬಿ ಎಬಿ

ಶೆರ್ಫೇನ್ ರುದರ್ಫೋರ್ಡ್ ಭರ್ಜರಿ ಸಾಥ್ ಕೊಟ್ಟ ಬೇಬಿ ಎಬಿ ಎದುರಾಳಿ ಬೌಲರ್‌ಗಳನ್ನ ಧ್ವಂಸಗೊಳಿಸಿದ್ರು. ತಾನು ಎದುರಿಸಿದ ಕೇವಲ 6 ಎಸೆತಗಳಲ್ಲಿ 30 ರನ್ ಸಿಡಿಸಿದ ಬೇಬಿ ಎಬಿ ಆಟಕ್ಕೆ ಅಭಿಮಾನಿಗಳು ದಂಗಾದರು. ಅದ್ರಲ್ಲೂ ಐದು ಎಸೆತಗಳಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ ಬೇಬಿ ಎಬಿ ಆಟ ದಕ್ಷಿಣ ಆಫ್ರಿಕಾದ ಲೆಜೆಂಡ್ ಎಬಿ ಡಿವಿಲಿಯರ್ಸ್‌ ಬ್ಯಾಟಿಂಗ್ ಅನ್ನು ನೆನಪಿಸಿತು.

ತನ್ನ 360 ಡಿಗ್ರಿ ಬ್ಯಾಟಿಂಗ್ ಜೊತೆಗೆ ಎದುರಾಳಿ ಬೌಲಿಂಗ್ ಪಡೆಯನ್ನ ಚಿಂದಿ ಮಾಡುತ್ತಿದ್ದ ಎಬಿಡಿ ಅಕ್ಷರಶಃ ಕ್ರಿಕೆಟ್ ಲೋಕ ಕಂಡಂತಹ ವಿಭಿನ್ನ ರೀತಿಯ ಬ್ಯಾಟರ್. ಆದ್ರೆ ಅದೇ ರೀತಿಯಲ್ಲಿ ಹೋಲುವ ಯುವ ಬ್ಯಾಟರ್ ಡೆವಾಲ್ಡ್‌ ಬ್ರೆವಿಸ್ ಒಂದೊಂದು ಶಾಟ್‌ಗಳು ಎಬಿಡಿಯನ್ನ ನೆನಪು ಮಾಡಿದವು.

ಗುರಿ ಬೆನ್ನಟ್ಟುವಲ್ಲಿ ವಿಫಲಗೊಂಡ ಟ್ರಿನ್‌ಬಾಗೊ ನೈಟ್ ರೈಡರ್ಸ್

ಗುರಿ ಬೆನ್ನಟ್ಟುವಲ್ಲಿ ವಿಫಲಗೊಂಡ ಟ್ರಿನ್‌ಬಾಗೊ ನೈಟ್ ರೈಡರ್ಸ್

164 ರನ್‌ಗಳ ಗುರಿ ಬೆನ್ನತ್ತಿದ ಟ್ರಿನ್‌ಬಾಗೊ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156ರನ್‌ಗಳಿಸಲಷ್ಟೇ ಶಕ್ತಗೊಂಡಿತು. ನೈಟ್ ರೈಡರ್ಸ್ ಪರ ಟಿಮ್ ಸೀಫರ್ಟ್ 47 ಎಸೆತಗಳಲ್ಲಿ 59 ರನ್ ಮತ್ತು ಕಿರಾನ್ ಪೊಲಾರ್ಡ್‌ 36 ಎಸೆತಗಳಲ್ಲಿ 31ರನ್‌ ಸಿಡಿಸುವ ಮೂಲಕ ಐಪಿಎಲ್‌ನ ಸ್ಲೋ ಬ್ಯಾಟಿಂಗ್ ಫಾರ್ಮ್‌ ಅನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಮುಂದುವರಿಸಿದ್ದಾರೆ. ಈ ಪಂದ್ಯದಲ್ಲಿ ಆ್ಯಂಡ್ರೆ ರಸ್ಸೆಲ್ 17 ಎಸೆತಗಳಲ್ಲಿ 29 ರನ್ ಸಿಡಿಸಿದ್ರೂ ಸಹ ತಂಡಕ್ಕಾಗಿ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

T20 ಕ್ರಿಕೆಟ್‌ನ ಟಾಪ್ 5 ಅಜೇಯ ಓಪನಿಂಗ್ ಜೊತೆಯಾಟ: 1 ವಿಕೆಟ್ ಕಳೆದುಕೊಳ್ಳದೆ ಗುರಿ ಮುಟ್ಟಿದವರು!

ಸೈಂಟ್ ಲೂಸಿಯಾ ಕಿಂಗ್ಸ್ ಪರ ಶತಕ ಸಿಡಿಸಿದ ಫಾಫ್ ಡುಪ್ಲೆಸಿಸ್

ಇನ್ನು ಗುರುವಾರ ನಡೆದ ಎರಡನೇ ಪಂದ್ಯದಲ್ಲಿ ಸೈಂಟ್ ಲೂಸಿಯಾ ಕಿಂಗ್ಸ್ ಪರ ಫಾಫ್ ಡುಪ್ಲೆಸಿಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. ಐಪಿಎಲ್‌ನಲ್ಲಿ ಆರ್‌ಸಿಬಿ ನಾಯಕನಾಗಿರುವ ಡುಪ್ಲೆಸಿಸ್, ಸಿಪಿಎಲ್‌ನಲ್ಲಿ ಸೈಂಟ್ ಲೂಸಿಯಾ ಕಿಂಗ್ಸ್‌ ನಾಯಕತ್ವ ಹೊಂದಿದ್ದಾರೆ. 59 ಎಸೆತಗಳಲ್ಲಿ 103 ರನ್ ಸಿಡಿಸಿದ ಡುಪ್ಲೆಸಿಸ್ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 6 ಭರ್ಜರಿ ಸಿಕ್ಸರ್‌ಗಳಿದ್ದವು. ರೋಸ್ಟನ್ ಚೇಸ್‌ 7 ಎಸೆತಗಳಲ್ಲಿ 17 ರನ್ ಕಲೆಹಾಕಿದರು. ಪರಿಣಾಮ ಸೈಂಟ್ ಲೂಸಿಯಾ ಕಿಂಗ್ಸ್‌ 5 ವಿಕೆಟ್ ನಷ್ಟಕ್ಕೆ 194 ರನ್ ಕಲೆಹಾಕಿತು.

195 ರನ್ ಗುರಿ ಬೆನ್ನತ್ತಿದ ಗಯಾನಾ ಅಮೆಜಾನ್ ವಾರಿಯರ್ಸ್ 19.2 ಓವರ್‌ಗಳಲ್ಲಿ ಇನ್ನೂ ನಾಲ್ಕು ಎಸೆತ ಬಾಕಿ ಇರುವಂತೆಯೇ ನಾಲ್ಕು ವಿಕೆಟ್‌ಗಳ ಕಳೆದುಕೊಂಡು ಗುರಿ ತಲುಪಿತು. ಈ ತಂಡದ ಪರ ರಹಮನುಲ್ಲಾ ಗುರ್ಬಾಜ್ 26 ಎಸೆತಗಳಲ್ಲಿ 52 ರನ್, ಚಂದ್ರಪೌಲ್ ಹೇಮ್‌ರಾಜ್ 20 ಎಸೆತಗಳಲ್ಲಿ 29 ರನ್, ಶೈ ಹೋಪ್ 30 ಎಸೆತಗಳಲ್ಲಿ ಅಜೇಯ 59 ರನ್ ಕಲೆಹಾಕಿದರು. ಶಿಮ್ರೊನ್ ಹೆಟ್ಮಾಯರ್ ತಂಡದ ಗೆಲುವಿಗೆ 36 ರನ್ ಕೊಡುಗೆ ನೀಡಿದರು.

Story first published: Friday, September 23, 2022, 15:25 [IST]
Other articles published on Sep 23, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+