ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ಸುಲಭ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಅಫ್ಘಾನಿಸ್ತಾದ ವಿರುದ್ಧ ಸೋಲು ಅನುಭವಿಸಿದ ಬಳಿಕ ವೈಟ್‌ವಾಶ್ ಅವಮಾನದಿಂದ ಪಾರಾಗಿದ್ದು ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿದೆ.
ಇನ್ನು ಈ ಸರಣಿ ಕೊನೆಯ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಆರಂಭದಲ್ಲಿಯೇ ಹಿನ್ನಡೆಯನ್ನು ಅನುಭವಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 15 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಭಾರೀ ಹಿನ್ನಡೆ ಅನುಭವಿಸಿತು. ನಂತರವೂ ಅಫ್ಘಾನಿಸ್ತಾನದ ಬ್ಯಾಟ್‌ಗಳ ವಿರುದ್ಧ ಬಾಂಗ್ಲಾದೇಶದ ಬೌಲಿಂಗ್ ವಿಭಾಗ ಮೇಲುಗೈ ಸಾಧಿಸುತ್ತಲೇ ಸಾಗಿತ್ತು. ಅಜ್ಮತುಲ್ಲಾ 56 ರನ್‌ಗಳನ್ನು ಗಳಿಸಿದ್ದು ಹೊರತುಪಡಿಸಿದರೆ ಉಳಿದೆಲ್ಲಾ ಆಟಗಾರರು ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಕಾರಣ 126 ರನ್‌ಗಳನ್ನು ಗಳಿಸಲಷ್ಟೇ ಶಕ್ರವಾಯಿತು.

ಬಾಂಗ್ಲಾದೇಶದ ಪರವಾಗಿ ಶೋರಿಫುಲ್ ಇಸ್ಲಾಮ್ 9 ಓವರ್‌ಗಳಲ್ಲಿ 21 ರನ್ ನೀಡಿ 4 ವಿಎಕಟ್ ಪಡೆಯುವ ಮೂಲಕ ಅಫ್ಘನ್ ಪಡೆಗೆ ದೊ್ಡ ಆಘಾತ ನೀಡಿದ್ದಾರೆ. ಉಳಿದಂತೆ ತಸ್ಕಿನ್ ಅಹ್ಮದ್ ಮತ್ತು ತೈಜುಲ್ ಇಸ್ಲಾಮ್ ತಲಾ 2 ವಿಕೆಟ್ ಪಡೆದರೆ, ಮೆಹದಿ ಹಸನ್ ಮಿರಾಜ್ ಮತ್ತು ಶಕೀಬ್ ಅಲ್ ಹಸನ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ ಕೂಡ ಮೊದಲ ವಿಕೆಟನ್ನು 2 ರನ್ ಆಗುವಷ್ಟರಲ್ಲಿಯೇ ಕಳೆದುಕೊಂಡರೂ ಲಿಟನ್ ದಾಸ್ ಉತ್ತಮ ಪ್ರದರ್ಶನ ನೀಡಿ ತಂಡವನ್ನು ಮುನ್ನಡೆಸಿದರು. ಲಿಟನ್ ದಾಸ್ ಅಜೇಯ 53 ರನ್‌ಗಳನ್ನು ಗಳಿಸಿದ್ದು ಶಕೀಬ್ ಅಲ್ ಹಸನ್ 39 ರನ್‌ಗಳಿಸಿ ಔಟಾದರು. ತೌಹಿದ್ ಹ್ರಿದಯ್ ಅಜೇಯ 22 ರನ್‌ಗಳನ್ನು ಗಳಿಸಿದರು. ಈ ಮೂಲಕ ಬಾಂಗ್ಲಾದೇಶ ಈ ಪಂದ್ಯವನ್ನು ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಯಿತು. ಇನ್ನು ಈ ಸರಣಿಯನ್ನು ಅಫ್ಘಾನಿಸ್ತಾನ 2-1 ಅಂತರದಿಂದ ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.
ಬಾಂಗ್ಲಾದೇಶ ಆಡುವ ಬಳಗ: ಮೊಹಮ್ಮದ್ ನಯಿಮ್, ಲಿಟ್ಟನ್ ದಾಸ್ (ನಾಯಕ), ನಜ್ಮುಲ್ ಹೊಸೈನ್ ಶಾಂಟೊ, ತೌಹಿದ್ ಹೃದಯೊಯ್, ಶಕೀಬ್ ಅಲ್ ಹಸನ್, ಮುಶ್ಫಿಕುರ್ ರಹೀಮ್ (ವಿಕೆಟ್ ಕೀಪರ್), ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ತೈಜುಲ್ ಇಸ್ಲಾಂ
ಬೆಂಚ್: ಹಸನ್ ಮಹಮೂದ್, ಮುಸ್ತಾಫಿಜುರ್ ರೆಹಮಾನ್, ಎಬಾಡೋತ್ ಹೊಸೈನ್, ರೋನಿ ತಾಲೂಕ್ದಾರ್
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಮೊಹಮ್ಮದ್ ನಬಿ, ನಜೀಬುಲ್ಲಾ ಜದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ಫಝಲ್ಹಕ್ ಫಾರೂಕಿ, ಅಬ್ದುಲ್ ರಹಮಾನ್, ಜಿಯಾ-ಉರ್-ರೆಹಮಾನ್
ಬೆಂಚ್: ರಶೀದ್ ಖಾನ್, ಮೊಹಮ್ಮದ್ ಸಲೀಮ್ ಸಫಿ, ರಿಯಾಜ್ ಹಸನ್, ಶಾಹಿದುಲ್ಲಾ ಕಮಾಲ್, ಇಕ್ರಮ್ ಅಲಿಖಿಲ್, ವಫಾದರ್ ಮೊಮಂಡ್, ಸಯದ್ ಶಿರ್ಜಾದ್