Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

BAN vs AFG 1st ODI: ರಶೀದ್, ಫಜಲ್‌ಹಕ್ ಮಿಂಚು; ಬಾಂಗ್ಲಾದೇಶ ವಿರುದ್ಧ ಅಫ್ಘಾನಿಸ್ತಾನಕ್ಕೆ ಭರ್ಜರಿ ಗೆಲುವು

ಬುಧವಾರ, ಜುಲೈ 5ರಂದು ಚಟ್ಟೋಗ್ರಾಮ್‌ನಲ್ಲಿ ನಡೆದ ಮಳೆ-ಬಾಧಿತ ಮೊದಲ ಏಕದಿನ ಪಂದ್ಯದಲ್ಲಿ ಪ್ರವಾಸಿ ಅಫ್ಘಾನಿಸ್ತಾನ ತಂಡವು ಆತಿಥೇಯ ಬಾಂಗ್ಲಾದೇಶ ತಂಡವನ್ನು ಡಿಎಲ್‌ಎಸ್ ನಿಯಮದಡಿ 17 ರನ್‌ಗಳಿಂದ ಸೋಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಹೋಯಿತು ಮತ್ತು 43 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಕಲೆಹಾಕಿತು. ಬಾಂಗ್ಲಾದೇಶ ತಂಡದ ಪರ ಟೌಹಿದ್ ಹೃದೋಯ್ ಅಜೇಯ 51 ರನ್ ಗಳಿಸಿ ಗರಿಷ್ಠ ಸ್ಕೋರ್ ಎನಿಸಿದರು.

Afghanistan Beat Bangladesh

ಆರಂಭಿಕ ತಮಿಮ್ ಇಕ್ಬಾಲ್ 13 ರನ್, ಲಿಟ್ಟನ್ ದಾಸ್ 26 ರನ್, ನಜ್ಮುಲ್ ಹೊಸೈನ್ ಶಾಂಟೋ 12 ರನ್ ಗಳಿಸಿದರು. ಉಳಿದ ಯಾವ ಬ್ಯಾಟ್ಸ್‌ಮನ್‌ಗಳು ಎರಡಂಕಿ ಮೊತ್ತ ದಾಟಲಾಗಲಿಲ್ಲ.

ಅಫ್ಘಾನಿಸ್ತಾನ ತಂಡದ ಪರ ಫಜಲ್‌ಹಕ್ ಫಾರೂಕಿ 8.4 ಓವರ್‌ಗಳಲ್ಲಿ 24 ರನ್ ನೀಡಿ 3 ವಿಕೆಟ್ ಕಬಳಿಸಿದರೆ, ಮುಜೀಬ್ ಉರ್ ರೆಹಮಾನ್ 9 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಮತ್ತು ರಶೀದ್ ಖಾನ್ 9 ಓವರ್‌ಗಳಲ್ಲಿ 21 ರನ್ ನೀಡಿ 2 ವಿಕೆಟ್ ಪಡೆದರೆ, ಉಳಿದಂತೆ ಅಜ್ಮತುಲ್ಲಾ ಮತ್ತು ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಪಡೆದರು.

ಬಳಿಕ 170 ರನ್‌ಗಳ ಚೇಸಿಂಗ್ ಆರಂಭಿಸಿದ ಅಫ್ಘಾನಿಸ್ತಾನ ತಂಡ ಉತ್ತಮ ಆರಂಭ ಪಡೆಯಿತು. 22ನೇ ಓವರ್‌ನಲ್ಲಿ ಮಳೆ ಸುರಿಯುವ ಮುನ್ನ ಎರಡು ವಿಕೆಟ್ ಕಳೆದುಕೊಂಡು 83 ರನ್ ಗಳಿಸಿತ್ತು.

ಆಗ ಮಳೆಯು ಆಟಕ್ಕೆ ಅಡ್ಡಿಯನ್ನುಂಟು ಮಾಡಿತು. ಅಂತಿಮವಾಗಿ ಡಕ್ವರ್ಥ್ ಲೂಯಿಸ್ ವಿಧಾನದ ಪ್ರಕಾರ ಅಫ್ಘಾನಿಸ್ತಾನ ತಂಡವನ್ನು 17 ರನ್‌ಗಳಿಂದ ವಿಜಯಿಶಾಲಿ ಎಂದು ಘೋಷಿಸಲಾಯಿತು.

ಅಫ್ಘಾನಿಸ್ತಾನ ತಂಡದ ಪರ ರಹ್ಮನುಲ್ಲಾ ಗುರ್ಬಾಜ್ 22 ರನ್, ಇಬ್ರಾಹಿಂ ಝದ್ರಾನ್ 41 ರನ್, ರಹ್ಮತ್ ಶಾ 8 ರನ್ ಮತ್ತು ಹಶ್ಮತುಲ್ಲಾ ಶಹದಿ 9 ರನ್ ಗಳಿಸಿದರು.

Story first published: Wednesday, July 5, 2023, 23:35 [IST]
Other articles published on Jul 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+