BAN vs AFG: ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಅಫ್ಘನ್ ವೇಗಿ
ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ವೇಗದ ಬೌಲರ್ ನಿಜತ್ ಮಸೂದ್ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ. ತಮ್ಮ ಪ್ರಪ್ರಥಮ ಟೆಸ್ಟ್‌ನ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಸುದೀರ್ಘ ಇತಿಹಾಸದಲ್ಲಿ ಈ ಅಪರೂಪದ ಸಾಧನೆ ಮಾಡಿದ ಕೇವಲ 7ನೇ ಬೌಲರ್ ಎನಿಸಿಕೊಂಡಿದ್ದಾರೆ ನಿಜತ್ ಮಸೂದ್.
ಮೀರ್‌ಪುರದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಈ ಸಾಧನೆ ಮಾಡಿದ್ದಾರೆ ಅಫ್ಘನ್ ವೇಗಿ. ಬಾಂಗ್ಲಾದೇಶದ ಆರಂಭಿಕ ಆಟಗಾರ ಜಾಕಿರ್ ಹಸನ್ ಅವರನ್ನು ಪಂದ್ಯದ ಎರಡಬೇ ಓವರ್‌ನಲ್ಲಿ ಔಟ್ ಮಾಡುವ ಮೂಲಕ ಈ ದಾಖಲೆ ಬರೆದಿದ್ದಾರೆ. ವಿಕೆಟ್ ಕೀಪರ್ ಕ್ಯಾಚ್ ನೀಡಿ ಜಾಕಿರ್ ಹಸನ್ ನಿರ್ಗಮಿಸಿದರು. ಈ ಮೂಲಕ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದು ಸಂಭ್ರಮಿಸಿದ್ದಾರೆ.

ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಆರಂಭಿಕ ಮೊದಲ ವಿಕೆಟ್ ಶೀಘ್ರವಾಗಿ ಕೂಡ ಬಳಿಕ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದೆ. ನಜ್ಮುಲ್ ಹುಸೇನ್ ಶಂಟೋ ಅಮೋಘ ಶತಕ ಸಿಡಿಸಿದ ಪರಿಣಾಮವಾಗಿ ಈ ಸರಣಿಯಲ್ಲಿ ಬಾಂಗ್ಲಾದೇಶ ಮೇಲುಗೈ ಸಾಧಿಸಿದೆ. ಎರಡನೇ ವಿಕೆಟ್ ಮಹ್ಮದುಲ್ಲಾ ಹಸನ್ ಜಾಯ್ ಮತ್ತು ನಜ್ಮುಲ್ ಹುಸೇನ್ ಶಂಟೋ ದ್ವಿಉಶತಕದ ಜೊತೆಯಾಟ ನೀಡಿದರು.
ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ಪರವಾಗಿ ಅನುಭವಿ ಆಟಗಾರ ಇಬ್ಬರು ಬೌಲರ್‌ಗಳು ಪದಾರ್ಪಣೆ ಮಾಡಿದ್ದಾರೆ. ಇದರಲ್ಲಿ ಮಸೂದ್ ಆರಂಭದಲ್ಲಿಯೇ ವಿಕೆಟ್ ಪಡೆಯುವ ಮೂಲಕ ಮೇಲುಗೈ ಒದಗಿಸಿದರು. ಆದರೆ ಈ ವಿಕೆಟ್ ಹೊರತುಪಡಿಸಿದರೆ ಅಫ್ಘಾನಿಸ್ತಾನದ ಬೌಲಿಂಗ್ ವಿಭಾಗದ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ.
ಇನ್ನು ಪದಾರ್ಪಣಾ ಪಂದ್ಯದ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿ
ರಿಚರ್ಡ್ ಇಲ್ಲಿಂಗ್ವರ್ತ್ (1991)
ನೀಲೇಶ್ ಕುಲಕರ್ಣಿ (1997)
ಚಮಿಲಾ ಗಮಗೆ (2002)
ನಥನ್ ಲಿಯಾನ್ (2011)
ಶಮಿಂದಾ ಎರಂಗ (2011)
ಡೇನ್ ಪೈಡ್ಟ್ (2014)
ಹಾರ್ಡಸ್ ವಿಲ್ಜೋನ್ (2016)
ನಿಜತ್ ಮಸೂದ್ (2023)
ಬಾಂಗ್ಲಾದೇಶ ಆಡುವ ಬಳಗ: ನಜ್ಮುಲ್ ಹೊಸೈನ್ ಶಾಂಟೊ, ಝಾಕಿರ್ ಹಸನ್, ಮೊಮಿನುಲ್ ಹಕ್, ಮಹಮ್ಮದುಲ್ ಹಸನ್ ಜಾಯ್, ಮುಶ್ಫಿಕರ್ ರಹೀಮ್, ಲಿಟ್ಟನ್ ದಾಸ್ (ಸಿ & ವಾರ), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಎಬಾಡೋತ್ ಹೊಸೈನ್
ಬೆಂಚ್: ತಮೀಮ್ ಇಕ್ಬಾಲ್, ಶಹದತ್ ಹೊಸೈನ್, ಮುಸ್ಫಿಕ್ ಹಸನ್, ಖಲೀದ್ ಅಹ್ಮದ್
ಅಫ್ಘಾನಿಸ್ತಾನ: ಇಬ್ರಾಹಿಂ ಜದ್ರಾನ್, ಅಬ್ದುಲ್ ಮಲಿಕ್, ಹಶ್ಮತುಲ್ಲಾ ಶಾಹಿದಿ (ನಾಯಕ), ರಹಮತ್ ಶಾ, ನಾಸಿರ್ ಜಮಾಲ್, ಅಫ್ಸರ್ ಝಜೈ (ವಿಕೆಟ್ ಕೀಪರ್), ಕರೀಂ ಜನತ್, ಅಮೀರ್ ಹಮ್ಜಾ, ಜಹೀರ್ ಖಾನ್, ನಿಜತ್ ಮಸೂದ್, ಯಾಮಿನ್ ಅಹ್ಮದ್‌ಝೈ
ಬೆಂಚ್: ಬಹಿರ್ ಶಾ, ಇಕ್ರಮ್ ಅಲಿಖಿಲ್, ಮೊಹಮ್ಮದ್ ಇಬ್ರಾಹಿಂ, ಇಝಾರುಲ್ಹಕ್ ನವೀದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications